ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌: ಬೈಸಿಕಲ್‌ನಲ್ಲಿ 12 ಜ್ಯೋತಿರ್ಲಿಂಗ ಯಾತ್ರೆ

Published 25 ಜೂನ್ 2024, 14:05 IST
Last Updated 25 ಜೂನ್ 2024, 14:05 IST
ಅಕ್ಷರ ಗಾತ್ರ

ಬೀದರ್‌: ಹನ್ನೆರಡು ಜ್ಯೋತಿರ್ಲಿಂಗಗಳ ಯಾತ್ರೆ ಕೈಗೊಂಡಿರುವ ತುಮಕೂರಿನ ಶಿವಾನಂದ ಅವರು ಮಂಗಳವಾರ ನಗರ ತಲುಪಿದರು.

ತುಮಕೂರು ಜಿಲ್ಲೆಯ ಬೆಳ್ಳಾವಿ ಗ್ರಾಮದ ಶ್ವೇತ ಕಮಠಾಪುರಿಯಿಂದ ಆರಂಭಗೊಂಡ ಬೈಸಿಕಲ್‌ ಯಾತ್ರೆ ಜೂನ್‌ 2ರಿಂದ ಆರಂಭಿಸಿದ್ದಾರೆ. ಮಂಗಳವಾರ ನಗರದಲ್ಲಿ ನರಸಿಂಹ ಝರಣಿ, ಗುರುದ್ವಾರ ಹಾಗೂ ಪಾಪನಾಶ ದೇವಸ್ಥಾನದ ದರ್ಶನ ಪಡೆದುಕೊಂಡು ಮುಂದೆ ಸಾಗಿದರು.

‘12 ಜ್ಯೋತಿರ್ಲಿಂಗಗಳ ಬೈಸಿಕಲ್‌ ಯಾತ್ರೆ ಒಟ್ಟು 13 ಸಾವಿರ ಕಿ.ಮೀ ಒಳಗೊಂಡಿದೆ.  ಕರ್ನಾಟಕದಿಂದ ಆಂಧ್ರ ಪ್ರದೇಶದ ಶ್ರೀಶೈಲ, ಮಹಾರಾಷ್ಟ್ರ, ಗುಜರಾತ್‍, ಮಧ್ಯಪ್ರದೇಶ, ಜಾರ್ಖಂಡ್‌ ಮಾರ್ಗವಾಗಿ ಅಂತಿಮವಾಗಿ ವಾರಣಸಿ, ಕೇದಾರನಾಥಕ್ಕೆ ಹೋಗಿ ಕೊನೆಗೊಳಿಸಲಾಗುವುದು. ಇದುವರೆಗೆ 2,300 ಕಿ.ಮೀ ಯಾತ್ರೆ ಪೂರೈಸಿದ್ದೇನೆ’ ಎಂದು ಶಿವಾನಂದ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT