ಸೋಮವಾರ, ಆಗಸ್ಟ್ 2, 2021
28 °C

ವಿಜಡಂ ಪದವಿಪೂರ್ವ ವಿಜ್ಞಾನ ಕಾಲೇಜಿಗೆ ಶೇ 82.68 ರಷ್ಟು ಫಲಿತಾಂಶ

ಅಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ವಿಜಡಂ ಪದವಿಪೂರ್ವ ವಿಜ್ಞಾನ ಕಾಲೇಜಿನ 28 ವಿದ್ಯಾರ್ಥಿಗಳು ಅಗ್ರಶ್ರೇಣಿಯಲ್ಲಿ ಪಾಸಾಗಿದ್ದಾರೆ.

ಪರೀಕ್ಷೆ ಬರೆದ 219 ವಿದ್ಯಾರ್ಥಿಗಳ ಪೈಕಿ 181 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಾಲೇಜಿಗೆ ಶೇ 82.68 ರಷ್ಟು ಫಲಿತಾಂಶ ದೊರೆತಿದೆ.

112 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ 41 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಮೀರ್ ಹೈದರ್ ಅಲಿ ಶೇ 92.66, ಸೈಯದ್ ರೆಹಾನ್ ಶೇ 92.33, ತೈಯಬಾ ಫಾತಿಮಾ ಶೇ 91.16, ರೋಹಿತ್ ಅನಿಲಕುಮಾರ ಶೇ 90.66, ಸುಮೈಯ ಶಫಿಯೊದ್ದೀನ್ ಶೇ 90.33, ಮೊಹಮ್ಮದ್ ಸಾಖಿಬ ಶೇ 90 ಅಂಕ ಪಡೆದಿದ್ದಾರೆ. ತೈಯಬಾ ಫಾತಿಮಾ ಗಣಿತ ವಿಷಯದಲ್ಲಿ 100ಕ್ಕೆ 100 ಅಂಕ ಗಳಿಸಿದ್ದಾರೆ ಎಂದು
ಪ್ರಾಚಾರ್ಯ ಪ್ರೊ. ಶೇಕ್ ಮದಾರ್ ಸಂತಸ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು