ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಅಗ್ನಿವೀರ ತರಬೇತಿ ಶಿಬಿರ ಸಮಾರೋಪ

Last Updated 5 ಅಕ್ಟೋಬರ್ 2022, 13:28 IST
ಅಕ್ಷರ ಗಾತ್ರ

ಬೀದರ್: ಬಿಜೆಪಿಯ ಪೂರ್ವ ಸೈನಿಕ ಪ್ರಕೋಷ್ಠ ವತಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಸೇವಾ ಪಾಕ್ಷಿಕ ಅಂಗವಾಗಿ ಹಮ್ಮಿಕೊಂಡಿದ್ದ ಅಗ್ನಿವೀರ, ಪೊಲೀಸ್, ಬಿ.ಎಸ್.ಎಫ್, ಸಿ.ಆರ್.ಪಿ.ಎಫ್, ಸಿ.ಐ.ಎಸ್.ಎಫ್ ಹಾಗೂ ಎಸ್.ಎಸ್.ಬಿ ಹುದ್ದೆ ಭರ್ತಿಯ ಉಚಿತ ಪೂರ್ವಭಾವಿ ಸಿದ್ಧತಾ ತರಬೇತಿ ಶಿಬಿರ ಇಲ್ಲಿಯ ನೆಹರೂ ಕ್ರೀಡಾಂಗಣದಲ್ಲಿ ಸಮಾರೋಪಗೊಂಡಿತು.

ಅಗ್ನಿವೀರ ಹಾಗೂ ಪೊಲೀಸ್ ಹುದ್ದೆಗೆ ಭರ್ತಿಯಾಗ ಬಯಸುವ ಜಿಲ್ಲೆಯ ಅಭ್ಯರ್ಥಿಗಳಿಗೆ ನೆರವಾಗಲು ಆಯೋಜಿಸಿದ್ದ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಟ್ಟು 20 ಅಭ್ಯರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು ಎಂದು ಬಿಜೆಪಿಯ ಪೂರ್ವ ಸೈನಿಕ ಪ್ರಕೋಷ್ಠದ ಜಿಲ್ಲಾ ಸಂಚಾಲಕ ನಾಗನಾಥ ಮೇತ್ರೆ ತಿಳಿಸಿದರು.

ಪೂರ್ವ ಸೈನಿಕ ಪ್ರಕೋಷ್ಠದ ಜಿಲ್ಲಾ ಸಹ ಸಂಚಾಲಕ ಸಂಜೀವಕುಮಾರ ಪಟ್ನೆ ಅಚ್ಚುಕಟ್ಟಾಗಿ ತರಬೇತಿ ನಡೆಸಿಕೊಟ್ಟಿದ್ದಾರೆ. ಅಗ್ನಿವೀರ ಹಾಗೂ ಪೊಲೀಸ್ ಸೇರ್ಪಡೆಗೆ ಮುಂದೆ ಬರುವ ಅಭ್ಯರ್ಥಿಗಳಿಗೆ ಬರುವ ದಿನಗಳಲ್ಲೂ ಉಚಿತ ತರಬೇತಿ ನೀಡಲಾಗುವುದು ಎಂದು ಮಾಜಿ ಸೈನಿಕರೂ ಆದ ಅವರು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್, ಮುಖಂಡರಾದ ಈಶ್ವರಸಿಂಗ್ ಠಾಕೂರ್, ರಾಜಾರಾಮ ಚಿಟ್ಟಾ, ಬಿಜೆಪಿ ಪ್ರಕೋಷ್ಠಗಳ ಜಿಲ್ಲಾ ಸಂಯೋಜಕ ಶ್ರೀಕಾಂತ ಮೋದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT