ಬೀದರ್: ಆಶಾ ಕಾರ್ಯಕರ್ತೆಯರಿಗೆ ಸನ್ಮಾನ

ಬೀದರ್: ಕೊರೊನಾ ಸೋಂಕಿನಿಂದ ಜನರ ರಕ್ಷಣೆಗೆ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರನ್ನು ಶ್ರೀರಾಮ ಯುವ ಸೇನೆ ವತಿಯಿಂದ ನಗರದ ಕುಂಬಾರವಾಡದಲ್ಲಿ ಸನ್ಮಾನಿಸಲಾಯಿತು.
ಸೇನೆ ಪದಾಧಿಕಾರಿಗಳು ಆಶಾ ಕಾರ್ಯಕರ್ತೆಯರಿಗೆ ಶಾಲು ಹೊದಿಸಿ ಸನ್ಮಾನಿಸಿದರು.
ಲಾಕ್‍ಡೌನ್‍ನಿಂದ ಕೆಲಸವಿಲ್ಲದೆ ತೊಂದರೆಯಲ್ಲಿರುವ 100 ಕಾರ್ಮಿಕರ ಕುಟುಂಬಗಳಿಗೆ ಆಹಾರಧಾನ್ಯ ಕಿಟ್ ವಿತರಿಸಲಾಯಿತು.
ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಆಕಾಶ ಗ್ಯಾನಪ್ಪನೋರ್, ಉಪಾಧ್ಯಕ್ಷ ವಿನೋದ ಬಾಮಂದಿ, ಸಂತೋಷ ಡೈರಿ, ಪರಮೇಶ ಬರಲೆ, ಲಿಂಗರಾಜ, ನಾಗಯ್ಯ ಸ್ವಾಮಿ, ನಿಖಿಲ್ ಹಂಜಿ, ಶಿವು ಭೂಶೆಟ್ಟಿ, ಪವನ್, ರಾಜು ಮಜ್ಜಿಗೆ, ಸಂಗಪ್ಪ ಗುಂಡಪ್ಪ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.