ಸೋಮವಾರ, ಆಗಸ್ಟ್ 15, 2022
22 °C
ಕೋವಿಡ್‌ನಿಂದ ತಾಯಿಯನ್ನು ಕಳೆದುಕೊಂಡ ಹಣಕುಣಿ ಗ್ರಾಮದ ಮಕ್ಕಳು

ಅನಾಥ ಬಾಲಕಿಯರಿಗೆ ₹ 50 ಸಾವಿರ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಹುಮನಾಬಾದ್‌ ತಾಲ್ಲೂಕಿನ ಹಣಕುಣಿಯ ತಂದೆ ತಾಯಿ ಕಳೆದುಕೊಂಡ ಅನಾಥರಾದ ಅಶ್ವಿನಿ ಹಾಗೂ ಮಹಾನಂದಾ ಅವರ ಮನೆಗೆ ಭಾನುವಾರ ಹುಮನಾಬಾದ್‌ ಶಾಸಕ ರಾಜಶೇಖರ ಪಾಟೀಲ ಹಾಗೂ ವಿವಿಧ ಸಂಸ್ಥೆಗಳ ಪ್ರಮುಖರು ಭೇಟಿ ನೀಡಿ ಬಾಲಕಿಯರಿಗೆ ಧೈರ್ಯ ತುಂಬಿದ್ದಾರೆ.

ಪ್ರಜಾವಾಣಿಯ ಮಕ್ಕಳ ಆಸರೆ ಕಸಿದ ಕೊರೊನಾ ಅಂಕಣದಲ್ಲಿ ‘ಅವ್ವ ನಿತ್ಯ ಕಣ್ಮುಂದೆ ಬರುತ್ತಿದ್ದಾಳೆ’ ಶೀರ್ಷಿಕೆಯಡಿ ಪ್ರಕಟವಾದ ವರದಿಗೆ ಸ್ಪಂದಿಸಿ ಶಾಸಕ ರಾಜಶೇಖರ ಪಾಟೀಲ ಅವರು ವೈಯಕ್ತಿಕವಾಗಿ ₹50 ಸಾವಿರ ಕೊಟ್ಟು ಶಿಕ್ಷಣದ ವೆಚ್ಚವನ್ನೂ ಭರಿಸ ಲಾಗುವುದು ಎಂದು ತಿಳಿಸಿದರು.

‘ಕಂದಾಯ ಇಲಾಖೆ ಬಾಲಕಿಯರ ತಾಯಿಯ ಅಂತ್ಯ ಸಂಸ್ಕಾರಕ್ಕೆ ₹5 ಸಾವಿರ ಕೊಡಬೇಕಿತ್ತು. ಅದನ್ನು ಬಿಡುಗಡೆ ಮಾಡಿಸಲಾಗುವುದು. ರಾಷ್ಟ್ರೀಯ ಭದ್ರತಾ ಕುಟುಂಬ ಯೋಜನೆಯಿಂದ ₹20 ಸಾವಿರ ಒದಗಿಸಲಾಗುವುದು’ ಎಂದು ತಹಶೀಲ್ದಾರ್ ನಾಗಯ್ಯ‌ ಹಿರೇಮಠ ಹೇಳಿದರು.

‘ಮಣ್ಣಿನ ಮನೆ ಕಂಡು ಶಾಸಕರು ಸರ್ಕಾರದಿಂದ ಮನೆ ಮಂಜೂರು ಮಾಡಿಸುವ ಭರವಸೆ ಕೊಟ್ಟಿದ್ದಾರೆ’ ಎಂದು ಬಾಲಕಿಯರ ಸೋದರತ್ತೆ ಲಕ್ಷ್ಮೀ ಬಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಇಒ ಡಾ.ಗೋವಿಂದ, ಚಿಕ್ಕಪ್ಪ ಮಾಣಿಕರೆಡ್ಡಿ, ಮಹಾನಂದಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.