ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿವೃತ್ತ ಜಂಟಿ ನಿರ್ದೇಶಕ ಡಿ.ಜಿ.ಜಗತಾಪ ಅಮೃತ ಮಹೋತ್ಸವ

Published 11 ಆಗಸ್ಟ್ 2024, 16:13 IST
Last Updated 11 ಆಗಸ್ಟ್ 2024, 16:13 IST
ಅಕ್ಷರ ಗಾತ್ರ

ಭಾಲ್ಕಿ: ‘ಶಿಕ್ಷಣ ಕ್ಷೇತ್ರ ಸುಧಾರಣೆಗೆ ವಿಶ್ರಾಂತ ಜಂಟಿ ನಿರ್ದೇಶಕ ಡಿ.ಜಿ.ಜಗತಾಪ ಅವರ ಕೊಡುಗೆ ಅಪಾರವಾಗಿದೆ’ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ತಾಲ್ಲೂಕಿನ ವಳಸಂಗ ಕ್ರಾಸ್(ಅಂಬೆಸಾಂಗವಿ) ಹತ್ತಿರವಿರುವ ವಿ.ಡಿ.ಜಗತಾಪ ಫಂಕ್ಷನ್ ಹಾಲ್‍ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನಿವೃತ್ತ ಜಂಟಿ ನಿರ್ದೇಶಕ ಡಿ.ಜಿ.ಜಗತಾಪ ಅವರ ಅಮೃತ ಮಹೋತ್ಸವ, ಯಶೋಧನ ಗ್ರಂಥ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಪಟ್ಟಣದಲ್ಲಿ ಸರ್ಕಾರಿ ಸ್ವಾಮ್ಯದಲ್ಲಿ ಈಜುಕೊಳ, ಜಿಮ್ ಪ್ರಾರಂಭಿಸುವ ಬಗ್ಗೆ ಜಗತಾಪ ಅವರು ಮಾಡಿದ ಮನವಿ ಪುರಸ್ಕರಿಸಲಾಗುವುದು. ಪರಿಸರ ಪರಿಶುದ್ಧತೆಗಾಗಿ ಪ್ರತಿಯೊಬ್ಬರೂ ಸಸಿ ನೆಟ್ಟು ಪೋಷಣೆ ಮಾಡಬೇಕು’ ಎಂದು ಸಲಹೆ ನೀಡಿದರು. ‌

ನಿವೃತ್ತ ಜಂಟಿ ನಿರ್ದೇಶಕ ಡಿ.ಜಿ.ಜಗತಾಪ ಮಾತನಾಡಿ, ‘ನನ್ನ ವೃತ್ತಿ ಜೀವನದಲ್ಲಿ ಸಾಥ್ ನೀಡಿದ ಪ್ರತಿಯೊಬ್ಬರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ’ ಎಂದರು.

ಮಾಜಿ ಶಾಸಕ ಪ್ರಕಾಶ ಖಂಡ್ರೆ, ವಿಧಾನ ಪರಿಷತ್ ಸದಸ್ಯ ಮಾರುತಿರಾವ್ ಮುಳೆ ಮಾತನಡಿದರು.

ದೇಹದಾ: ಡಿ.ಜಿ.ಜಗತಾಪ ಅವರು ತಮ್ಮ ಮರಣದ ನಂತರ ತಮ್ಮ ದೇಹವನ್ನು ಬೀದರ್‌ನ ಬ್ರೀಮ್ಸ್ ಆಸ್ಪತ್ರೆಗೆ ದಾನ ಮಾಡುತ್ತೇನೆ ಎಂದು ಬರೆದುಕೊಟ್ಟ ಪ್ರಮಾಣಪತ್ರ ಬ್ರೀಮ್ಸ್ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಮಹೇಶ ಬಿರಾದಾರ ವಾಚನ ಮಾಡಿದರು.

ಇದೇ ಸಂದರ್ಭದಲ್ಲಿ ವಿಧಾನ ಪರಿಷತ್‌ನ ನೂತನ ಸದಸ್ಯ ಮಾರುತಿರಾವ್ ಮುಳೆ ಅವರಿಗೆ ಗೌರವ ಸನ್ಮಾನ ನಡೆಯಿತು.

ಡಾ.ಶಾರದಾ ಜಾಧವ ಮಾನೆ ಮತ್ತು ವಿಶ್ರಾಂತ ಪ್ರಾಂಶುಪಾಲೆ ರೇಖಾ ಮಹಾಜನ ಅವರು ಗ್ರಂಥ ಪರಿಚಯ ಮಾಡಿಕೊಟ್ಟರು. ಜಿ.ಪಂ. ಮಾಜಿ ಅಧ್ಯಕ್ಷ ಪದ್ಮಾಕರ ಪಾಟೀಲ, ಬಾಬುರಾವ್ ಕಾರಬಾರಿ ಜಿ.ಪಂ ಮಾಜಿ ಉಪಾಧ್ಯಕ್ಷ ಡಾ.ಪ್ರಕಾಶ ಪಾಟೀಲ, ಛತ್ರಪತಿ ಶಿವಾಜಿ ಮಹಾರಾಜ ಸಹಕಾರ ಬ್ಯಾಂಕ್ ನ ಅಧ್ಯಕ್ಷ ದಿನಕರರಾವ್ ಮೋರೆ, ಗ್ರಾ.ಪಂ ಅಧ್ಯಕ್ಷೆ ಶೋಭಾಬಾಯಿ ಯಾದವರಾವ್ ಮಾನಕರಿ, ಬ್ರೀಮ್ಸ್ ನಿರ್ದೇಶಕ ಡಾ.ಶಿವುಕುಮಾರ ಶೆಟಕಾರ, ಡಾ.ಅನಿಲ್ ಕುಮಾರ ತಳವಾಡೆ, ಡಾ.ಮಹೇಶ ಪಾಟೀಲ ಪ್ರಮುಖರಾದ ನಾಗನಾಥರಾವ್ ಬಗದೂರೆ, ಹೀರಾಚಂದ ವಾಘ್ಮರೆ, ಕೈಲಾಸನಾಥ ಮೀನಕೆರಿ, ನಾರಾಯಣ ಗಣೇಶ , ಎಲ್.ಜಿ.ಗುಪ್ತಾ, ಅಂಗದರಾವ್ ಜಗತಾಪ ಡಿ.ಜಿ.ಜಗತಾಪ ಅಭಿನಂದನಾ ಸಮಿತಿ ಉಪಾಧ್ಯಕ್ಷ ವಿನೋದ ಜಗತಾಪ, ಮಹೇಶ ಮುಳೆ , ಉದ್ಧವರಾವ್ ಹಲಸೆ, ಬಾಲಕೃಷ್ಣ ಪಾಟೀಲ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT