ಗುರುವಾರ , ಜೂನ್ 24, 2021
23 °C

ವಿಚಾರಣೆ ನಂತರ ಬೀದರ್-ಔರಾದ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ: ಭಗವಂತ ಖೂಬಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಹೈಕೋರ್ಟ್‍ನಲ್ಲಿ ಅಕ್ಟೋಬರ್‌ನಲ್ಲಿ ನಡೆಯಲಿರುವ ವಿಚಾರಣೆ ನಂತರ ಬೀದರ್-ಔರಾದ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಕ್ರಿಯೆ ಪುನರಾರಂಭ ಆಗಲಿದೆ ಎಂದು ಸಂಸದ ಭಗವಂತ ಖೂಬಾ ತಿಳಿಸಿದ್ದಾರೆ.

₹ 335 ಕೋಟಿ ವೆಚ್ಚದಲ್ಲಿ 52 ಕಿ.ಮೀ. ಉದ್ದದ ಹೆದ್ದಾರಿಗೆ ಮಂಜೂರಾತಿ ದೊರೆತಿದೆ. ಹೆದ್ದಾರಿ ಟೆಂಡರ್ ಪ್ರಕ್ರಿಯೆ ಜುಲೈ 1ಕ್ಕೆ ಪೂರ್ಣಗೊಂಡು ಅರ್ಹ ಕಂಪನಿಗೆ ಕಾಮಗಾರಿ ಸಿಗಬೇಕಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ಟೆಂಡರ್ ಪ್ರಕ್ರಿಯೆಯಿಂದ ಹೊರಗಿಡಲಾಗಿದ್ದ ಹೈದರಾಬಾದ್‍ನ ಟ್ರ್ಯಾಕ್ ಆ್ಯಂಡ್ ಟವರ್ ಇನ್‍ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದು, ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಅಕ್ಟೋಬರ್‌ನಲ್ಲಿ ವಿಚಾರಣೆಗೆ ಹಾಜರಾಗುವಂತೆ ಕಂಪನಿಗೆ ಸೂಚಿಸಿದೆ ಎಂದು ಹೇಳಿದ್ದಾರೆ.

ಕೋವಿಡ್ ಪ್ರಯುಕ್ತ ನ್ಯಾಯಾಲಯಗಳು ಸಹ ಬಂದ್ ಆಗಿದ್ದ ಕಾರಣ ಪ್ರಕರಣ ಸಮಯ ತೆಗೆದುಕೊಂಡಿದೆ ಎಂದು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.