ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಹಿಗ್ಗಿದ ಹಿರೇಕಾಯಿ, ಬೆಂಡೆಕಾಯಿ

ಮಾರುಕಟ್ಟೆಯಲ್ಲಿ ಮತ್ತೆ ಏರಿದ ನುಗ್ಗೆಕಾಯಿ
Last Updated 16 ಡಿಸೆಂಬರ್ 2022, 20:45 IST
ಅಕ್ಷರ ಗಾತ್ರ

ಬೀದರ್‌: ಹವಾಮಾನ ವೈಪರೀತ್ಯದಿಂದ ಅಲ್ಲಲ್ಲಿ ಮಳೆಯಾಗಿದೆ. ಅತಿಯಾದ ಚಳಿಯಿಂದ ಕೀಟಗಳ ಹಾವಳಿ ಹೆಚ್ಚಾಗಿದೆ. ಹೀಗಾಗಿ ಈ ವಾರ ತರಕಾರಿ ಬೆಲೆಗಳಲ್ಲಿ ಏರಿಳಿತ ಕಂಡು ಬಂದಿದೆ.

ಗ್ರಾಹಕರ ಸಾರ್ವಕಾಲಿಕ ಪ್ರೀತಿಯ ನುಗ್ಗೆಕಾಯಿ ಮತ್ತೆ ಬೆಲೆಯ ಅಟ್ಟ ಏರಿ ಕುಳಿತಿದೆ. ಮದುವೆ, ಮುಂಜಿವೆ, ತೊಟ್ಟಿಲು ಕಾರ್ಯಕ್ರಮ ಹಾಗೂ ಜಾತ್ರೆಗಳು ನಡೆದಿರುವ ಕಾರಣ ನುಗ್ಗೆಕಾಯಿಗೆ ಬೇಡಿಕೆ ಹೆಚ್ಚಿದೆ. ಪ್ರತಿ ಕೆ.ಜಿಗೆ ₹ 230 ತಲುಪಿದರೂ ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿಲ್ಲ.

ತರಕಾರಿ ರಾಜ ಬದನೆಕಾಯಿ ಮಾರುಕಟ್ಟೆಯಲ್ಲಿ ಎಚ್ಚರಿಕೆಯ ಹೆಜ್ಜೆ ಇಟ್ಟು ಸ್ಥಿರತೆ ಕಾಯ್ದುಕೊಳ್ಳಲು ಪ್ರಯತ್ನಿಸಿದ್ದಾನೆ. ಮತ್ತೆ ಉಬ್ಬಿದರೆ ಕಷ್ಟ ಎಂದು ಅರಿತಿರುವ ಡೊಣಮೆಣಸಿನ ಕಾಯಿ ಸಹ ತರಕಾರಿ ರಾಜನಿಗೆ ಸಾಥ್‌ ನೀಡಿದೆ. ಟೊಮೆಟೊ ಸಂಪೂರ್ಣ ಬಳಲಿದೆ.

ತರಕಾರಿ ಮಾರುಕಟ್ಟೆಯಲ್ಲಿ ಬದನೆಕಾಯಿ, ಡೊಣಮೆಣಸಿನ ಕಾಯಿ, ಬೆಳ್ಳುಳ್ಳಿ, ಸಬ್ಬಸಗಿ, ಕರಿಬೇವು, ಕೊತಂಬರಿ, ಪಾಲಕ್, ಹೂಕೋಸು ಹಾಗೂ ಗಜ್ಜರಿ ಬೆಲೆ ಸ್ಥಿರವಾಗಿದೆ.

ಪ್ರತಿ ಕ್ವಿಂಟಲ್‌ಗೆ ನುಗ್ಗೆಕಾಯಿ ₹3 ಸಾವಿರ, ಬೀನ್ಸ್, ಬೆಂಡೆಕಾಯಿ, ಹಿರೇಕಾಯಿ, ಚವಳೆಕಾಯಿ, ತುಪ್ಪದ ಹಿರೇಕಾಯಿ, ಸೌತೆಕಾಯಿ, ಮೆಂತೆ ಸೊಪ್ಪಿನ ಬೆಲೆ ₹ 2 ಸಾವಿರ ಹೆಚ್ಚಾಗಿದೆ. ಈರುಳ್ಳಿ, ಆಲೂಗಡ್ಡೆ, ಮೆಣಸಿನಕಾಯಿ, ಎಲೆಕೋಸು, ಟೊಮೆಟೊ ಬೆಲೆ ₹ 1 ಸಾವಿರ ಇಳಿದಿದೆ.

‘ತೆಲಂಗಾಣದ ಸಂಗಾರೆಡ್ಡಿ, ಹೈದರಾಬಾದ್, ಮಹಾರಾಷ್ಟ್ರದ ನಾಸಿಕ್, ಜಾಲನಾದಿಂದ ತರಕಾರಿ ಬಂದಿರುವ ಕಾರಣ ಕೆಲ ತರಕಾರಿಗಳ ಬೆಲೆಯಲ್ಲಿ ಏರಿಳಿತವಾಗಿದೆ’ ಎಂದು ತರಕಾರಿ ವ್ಯಾಪಾರಿ ಶಿವಕುಮಾರ ಮಾಡಗೂಳ ಹೇಳುತ್ತಾರೆ.

ಸೋಲಾಪುರ ಜಿಲ್ಲೆಯಿಂದ ಈರುಳ್ಳಿ, ಬೆಳ್ಳುಳ್ಳಿ ಆವಕವಾಗಿದೆ. ಹೈದರಾಬಾದ್‌ನಿಂದ ನುಗ್ಗೆಕಾಯಿ, ಡೊಣ ಮೆಣಸಿನಕಾಯಿ, ತೊಂಡೆಕಾಯಿ, ಬೀನ್ಸ್, ಬೀಟ್‌ರೂಟ್‌, ಗಜ್ಜರಿ, ಚವಳೆಕಾಯಿ, ಪಡವಲಕಾಯಿ, ಹಾಗಲಕಾಯಿ, ಬೆಳಗಾವಿಯಿಂದ ಹಸಿ ಮೆಣಸಿನಕಾಯಿ, ಕೊತಂಬರಿ ನಗರದ ತರಕಾರಿ ಸಗಟು ಮಾರುಕಟ್ಟೆಗೆ ಬಂದಿದೆ.

.....................................................................

ಬೀದರ್‌ ತರಕಾರಿ ಚಿಲ್ಲರೆ ಮಾರುಕಟ್ಟೆ
........................................................................
ತರಕಾರಿ (ಪ್ರತಿ ಕೆ.ಜಿ.) ಕಳೆದ ವಾರ, ಈ ವಾರ

.......................................................................
ಈರುಳ್ಳಿ 40-50,30-40
ಬೆಳ್ಳುಳ್ಳಿ 20-30,25-30
ಆಲೂಗಡ್ಡೆ 30-40,20-30
ಮೆಣಸಿನಕಾಯಿ 50-60,40-50
ಎಲೆಕೋಸು 30-40,20-30
ಹೂಕೋಸು 30-40,30-40
ಗಜ್ಜರಿ 30-40,30-40
ಬೀನ್ಸ್ 30-40,50-60
ಟೊಮೆಟೊ 10-15,5-10

ಬದನೆಕಾಯಿ 20-30,20-30
ಬೆಂಡೆಕಾಯಿ 30-40,50-60
ಹಿರೇಕಾಯಿ 30-40,50-60
ನುಗ್ಗೆಕಾಯಿ 200-220, 220-250

ಡೊಣಮೆಣಸಿನ ಕಾಯಿ 20-30,20-30
ಚವಳೆಕಾಯಿ 30-40,50-60
ಸೌತೆಕಾಯಿ 20-30,30-40
ತುಪ್ಪದ ಹಿರೇಕಾಯಿ 30-40,50-60

ಮೆಂತೆ 10-20,20-30
ಸಬ್ಬಸಗಿ 30-40,30-40
ಕರಿಬೇವು 70-80,70-80
ಕೊತಂಬರಿ 10-20,10-20
ಪಾಲಕ್ 20-30,20-30

* * * *

ಪೇಟೆ ಧಾರಣಿ
(ಪ್ರತಿ ಕ್ವಿಂಟಲ್‌– ಕನಿಷ್ಠ– ಗರಿಷ್ಠ)
ಕಡಲೆ ಕಾಳು – ₹ 3,900- ₹ 4,200
ಉದ್ದಿನ ಕಾಳು ₹ 5,300- ₹ 7,200
ಹೆಸರು ಕಾಳು ₹ 6,400- ₹ 7,390
ಜೋಳ ₹ 3,500- ₹ 4,500
ನುಚ್ಚು ಅಕ್ಕಿ ₹ 2,400- ₹ 2,900

ಅಕ್ಕಿ ₹ 4,400- ₹ 6,100
ಸೋಯಾಬಿನ್ ₹ 4,900- ₹ 5,490
ತೊಗರಿ ₹ 6,300- ₹ 7,000
ಗೋಧಿ ₹ 2,000- ₹ 3,300

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT