ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗಭೂಷಣರ 8 ಗ್ರಂಥ ಪುನರ್ ಮುದ್ರಣ

ನಾಗಭೂಷಣ ಶಿವಯೋಗಿಗಳ 50ನೇ ಸ್ಮರಣೋತ್ಸವ ಸಮಾರೋಪ ಸಮಾರಂಭ
Last Updated 8 ಫೆಬ್ರುವರಿ 2020, 9:59 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ನಾಗಭೂಷಣರು ಕೇವಲ ಯೋಗಾಚಾರ್ಯ ಅಷ್ಟೇ ಅಲ್ಲ. ಸಾಹಿತಿಯೂ ಆಗಿದ್ದರು. ಅವರ ವೇದಾಂತ ಸಾರ, ಗರಗದ ಮಡಿವಾಳೇಶ್ವರ ಚರಿತ್ರೆ ಒಳಗೊಂಡು 8 ಅಪರೂಪದ ಗ್ರಂಥಗಳು ಲಭ್ಯವಾಗಿದ್ದು, ಅವುಗಳನ್ನು ಪುನರ್ ಮುದ್ರಿಸಲಾಗುವುದು’ ಎಂದು ಮಠಾಧಿಪತಿ ಪ್ರಣವಾನಂದ ಸ್ವಾಮೀಜಿ ತಿಳಿಸಿದರು.

ಮುಚಳಂಬದಲ್ಲಿ ಶುಕ್ರವಾರ ನಾಗಭೂಷಣ ಶಿವಯೋಗಿಗಳ 50 ನೇ ಸ್ಮರಣೋತ್ಸವದ ಸಮಾರೋಪದಲ್ಲಿ ಮಾತನಾಡಿದರು.

‘ಅನೇಕರು ನನ್ನಲ್ಲಿ ಹಣವಿದೆ. ಜನಬಲವಿದೆ ಎಂದು ದುರಭಿಮಾನ ಪಟ್ಟುಕೊಳ್ಳುತ್ತಾರೆ. ಆದರೆ, ಕಷ್ಟದ ಕಾಲದಲ್ಲಿ ಸದ್ಗುರುವನ್ನು ಹೊರತುಪಡಿಸಿ ಯಾರೂ ಸಹಾಯಕ್ಕೆ ಬರುವುದಿಲ್ಲ’ ಎಂದರು.

ಬೀದರ್ ಶಿವಕುಮಾರ ಸ್ವಾಮೀಜಿ,ರಾಮಚಂದ್ರಾಪುರ ರಾಘ ವೇಶ್ವರ ಸ್ವಾಮೀಜಿ ಮಾತನಾಡಿದರು.

ಬೋರಗಿ ಮಹಾಲಿಂಗೇಶ್ವರ ಸ್ವಾಮೀಜಿ, ಬೀದರ್ ಗಣೇಶಾನಂದ ಸ್ವಾಮೀಜಿ, ಯಳಸಂಗಿ ಪರಮಾನಂದ ಸ್ವಾಮೀಜಿ, ಮುಖಂಡರಾದ ವೈಜನಾಥ ಕಾಮಶೆಟ್ಟಿ, ಆನಂದ ದೇವಪ್ಪ, ಬಾಬು ಹೊನ್ನಾನಾಯಕ, ಶಶಿಕಾಂತ ದುರ್ಗೆ ಇದ್ದರು.

ಪ್ರಶಸ್ತಿ ಪ್ರದಾನ

ಸ್ಮರಣೋತ್ಸವದಲ್ಲಿ ಗುರುವಾರ ಮಾಜಿ ಸಚಿವ ಭೀಮಣ್ಣ ಖಂಡ್ರೆ, ಆಯುರ್ವೇದ ತಜ್ಞ ಡಾ.ಬಸವರಾಜಸ್ವಾಮಿ ತ್ರಿಪುರಾಂತ, ಯೋಗಾಚಾರ್ಯ ನರೇಂದ್ರಜಿ ಹರಿದ್ವಾರ ಅವರಿಗೆ ‘ಯೋಗಿರಾಜ ನಾಗಭೂಷಣ ಶಿವಯೋಗಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಸನ್ಮಾನ

ಕಲ್ಯಾಣ ಕರ್ನಾಟಕ ಭಾಗದ ಪ್ರಗತಿಪರ ರೈತರು, ನಿವೃತ್ತ ಸೈನಿಕರು ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.

ಪ್ರಕಾಶ ಕಾಮಶೆಟ್ಟಿ, ಕೆ.ಕಾಶಪ್ಪ, ಎಚ್.ಕಾಶಿನಾಥ, ಆನಂದ ದೇವಪ್ಪ. ಶಿವಕುಮಾರ ಜಡಗೆ, ಮಂಜುಳಾ ಶಾಂತಕುಮಾರ ಜ್ಯೋತೆಪ್ಪ, ವೀರಶೆಟ್ಟಿ ಗೌರೆ ಧನ್ನೂರ, ವಿಜಯಕುಮಾರ ದೇವಪ್ಪ, ಮಹಾದೇವ ಕರಬಶೆಟ್ಟಿ, ಕಂಟೆಪ್ಪ ಅಳ್ಳೆ ಬೇಲೂರ, ಜಗನ್ನಾಥ ಚಿಲ್ಲಾಬಟ್ಟೆ ಬೇಲೂರ, ಶಂಕರೆಪ್ಪ ಪಾಟೀಲ ಹಾಲಹಳ್ಳಿ, ದಯಾನಂದ ಪಾಟೀಲ ಮುಸ್ತಾಪುರ, ಬಾಬುರಾವ ಪಾಟೀಲ ಬಾಲ್ಕುಂದಾ, ಮಹಾದೇವ ಕರಸಂಗಾ, ಸೋಮನಾಥ ಬಾಲ್ಕುಂದಾ, ವಿಶ್ವನಾಥ ಕಲ್ಯಾಣರಾವ್, ಬಸವರಾಜ ಪಾಟೀಲ ಖಂಡಾಳ, ಚಂದ್ರಪ್ಪ ಮುರುಗೆಪ್ಪ, ವೈಜನಾಥ ಪಾಟೀಲ, ದಿಲೀಪ ಕಾಶಪ್ಪ, ನಾಗನಾಥ ಪಾಟೀಲ, ಅನಿಲಕುಮಾರ ಜ್ಯೋತೆಪ್ಪ, ಶಿವಕುಮಾರ ಮಾಶೆಟ್ಟಿ, ಸೋಮನಾಥ ಜ್ಯೋತೆಪ್ಪ, ಕೇದಾರನಾಥ ಜಡಗೆ, ಸಂತೋಷ ಕಾಮಶೆಟ್ಟಿ. ಈಶ್ವರ ಪಾಟೀಲ, ಶೋಭಾವತಿ ಶಿವರಾಜ ದೇವಪ್ಪ, ಶಾಲಿವಾನ ಜ್ಯೋತೆಪ್ಪ, ಗೌರಿಶಂಕರ ಘಾಳೆ, ರಾಮಶೆಟ್ಟಿ ಮುರುಗೆಪ್ಪ, ಸುಜಾತಾ ನರಶೆಟ್ಟಿ, ಶಾಂತಕುಮಾರ ಪಾಟೀಲ, ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT