ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌: ಬಾಬಾ ಸಾಹೇಬರಿಗೆ ಬುದ್ಧ ವಂದನೆ

Published 7 ಡಿಸೆಂಬರ್ 2023, 15:52 IST
Last Updated 7 ಡಿಸೆಂಬರ್ 2023, 15:52 IST
ಅಕ್ಷರ ಗಾತ್ರ

ಬೀದರ್‌: ‘ಭೀಮ್‌ ಆರ್ಮಿ’ ಬೀದರ್ ಹಾಗೂ ಮೈಲೂರಿನ ವಿಶ್ವ ಶಾಂತಿ ಬೌದ್ಧ ವಿಹಾರದ ಸಹಯೋಗದಲ್ಲಿ ನಗರದಲ್ಲಿ ಬುಧವಾರ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಮಹಾ ಪರಿನಿರ್ವಾಣ ದಿನ ಆಚರಿಸಲಾಯಿತು.

‘ಭೀಮ್‌ ಆರ್ಮಿ’ಯಿಂದ ನಗರದ ಗಾಂಧಿ ಗಂಜ್‌ ಚೈತ್ಯ ಬೌದ್ಧ ವಿಹಾರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ಸಾಮೂಹಿಕವಾಗಿ ಬುದ್ಧವಂದನೆ ಸಲ್ಲಿಸಲಾಯಿತು. ಬಳಿಕ ಅನ್ನದಾಸೋಹ ಮಾಡಲಾಯಿತು.

ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಪಂಗಡ ಜಿಲ್ಲಾ ಉಪನಿರ್ದೇಶಕ ಪ್ರೇಮಸಾಗರ್‌ ದಾಂಡೇಕರ್, ಬೌದ್ಧ ಉಪಾಸಕ ಮಲ್ಲಿಕಾರ್ಜುನ್ ಲಾಧಾಕರ್, ರಂಜಿತಾ ಜೈನುರ್, ‘ಭೀಮ್‌ ಆರ್ಮಿ’ ಜಿಲ್ಲಾ ಗೌರವ ಅಧ್ಯಕ್ಷ ಘಾಳೆಪ್ಪಾ ಲಾಧಾಕರ್, ಜಿಲ್ಲಾ ಅಧ್ಯಕ್ಷ ಅಂಬರೀಷ್ ಕುದುರೆ, ಜಿಲ್ಲಾ ಕಾರ್ಯಾಧ್ಯಕ್ಷ ಕಿಶೋರ್ ನವಲಾಸಪೂರೆ, ಜೈ ಭೀಮ್ ಜ್ಯೋತಿ, ರಾಹುಲ್ ಬಿಳಿಮನಿ, ತುಕಾರಾಮ ಫುಲೇಕರ್, ಮೊಗಲಪ್ಪ ಶಹಾಪುರ, ರಾಜಕುಮಾರ್ ಕೆ. ದೊಡ್ಡಿ, ಸುಧಾಕರ್ ತಾಡ್ಕಲ್ ಇತರರಿದ್ದರು.

‘ಭೀಮ್‌ ಆರ್ಮಿ’ಯಿಂದ ಬೀದರ್‌ನ ಗಾಂಧಿ ಗಂಜ್‌ ಚೈತ್ಯ ಬೌದ್ಧ ವಿಹಾರದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಬಾಬಾ ಸಾಹೇಬರಿಗೆ ಗೌರವ ಸಲ್ಲಿಸಲಾಯಿತು
‘ಭೀಮ್‌ ಆರ್ಮಿ’ಯಿಂದ ಬೀದರ್‌ನ ಗಾಂಧಿ ಗಂಜ್‌ ಚೈತ್ಯ ಬೌದ್ಧ ವಿಹಾರದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಬಾಬಾ ಸಾಹೇಬರಿಗೆ ಗೌರವ ಸಲ್ಲಿಸಲಾಯಿತು

ಹಳೆ ಮೈಲೂರಿನಲ್ಲಿ ವಿಶ್ವ ಶಾಂತಿ ಬೌದ್ಧ ವಿಹಾರ ಅಭಿವೃದ್ಧಿ ಸಮಿತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರಿಗೆ ಗೌರವ ಸಲ್ಲಿಸಲಾಯಿತು. ಸಮಿತಿ ಕಾರ್ಯಕಾರಿಣಿ ಸದಸ್ಯ ಬುದ್ಧಾನಂದ ಬಡಿಗೇರ್, ಶಾಲಿವಾನ್ ಬಡಿಗೇರ್, ಅಮೃತ್ ಮೇತ್ರೆ, ಕೃಷ್ಣಪ್ಪ ಭಾವಿಕಟ್ಟಿ, ಶ್ರೀಪತಿ ಬಡಿಗೇರ್, ಮಾರುತಿ ಕುದುರೆ, ಚಂದ್ರಪ್ಪ ಬಡಿಗೇರ್ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT