ಬುಧವಾರ, ಆಗಸ್ಟ್ 21, 2019
22 °C

₹ 10 ಸಾವಿರ ಮರಳಿಸಿದ ಬಸ್‌ ಕಂಡಕ್ಟರ್‌

Published:
Updated:
Prajavani

ಬೀದರ್‌: ಔರಾದ್‌ನಿಂದ ಬೀದರ್‌ಗೆ ಬಂದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ ₹ 10 ಸಾವಿರ ಇದ್ದ ಬ್ಯಾಗ್‌ನ್ನು ಮರಳಿ ಕೊಡುವ ಮೂಲಕ ಬಸ್‌ ಕಂಡಕ್ಟರ್‌ ಪ್ರಾಮಾಣಿಕತೆ ಮೆರೆದಿದ್ದಾರೆ.

ಔರಾದ್‌ನಿಂದ ಬೀದರ್‌ಗೆ ಬರುತ್ತಿದ್ದ ಬಸ್ಸಿನಲ್ಲಿ ಮುಸ್ತಾಪುರದಲ್ಲಿ ವ್ಯಕ್ತಿಯೊಬ್ಬರು ಹತ್ತಿದರು. ಬೀದರ್ ಕೇಂದ್ರ ಬಸ್‌ ನಿಲ್ದಾಣಕ್ಕೆ ಬಂದ ನಂತರ ಎಲ್ಲರೂ ಕೆಳಗೆ ಇಳಿದು ಹೋದರು. ಕಂಡಕ್ಟರ್‌ ಪರಿಶೀಲನೆ ನಡೆಸುತ್ತಿದ್ದಾಗ ಹಣದ ಬ್ಯಾಗ್‌ ಕಂಡು ಬಂದಿತು. ಅವರು ಅದನ್ನು ಎತ್ತಿಕೊಂಡು ತಮ್ಮ ಬಳಿ ಇಟ್ಟುಕೊಂಡರು.

ಬಸ್‌, ಬೀದರ್‌ನಿಂದ ಔರಾದ್‌ಗೆ ಹೋಗುತ್ತಿದ್ದಾಗ ಕೈಚೀಲ ಬಿಟ್ಟು ಹೋಗಿದ್ದ ವ್ಯಕ್ತಿ ಜನವಾಡ ಸಮೀಪ ನಿಂತು ಬಸ್‌ಗೆ ಕೈ ಮಾಡಿದರು. ಬಸ್‌ ನಿಲ್ಲಿಸಿದ ನಂತರ ತಾವು ಪ್ರಯಾಣಿಸಿದ ಟಿಕೆಟ್‌ ತೋರಿಸಿ ಹಣದ ಬ್ಯಾಗ್‌ ಬಿಟ್ಟು ಹೋಗಿರುವುದಾಗಿ ತಿಳಿಸಿದರು.

ಕಂಡಕ್ಟರ್‌ ಪರಮೇಶ್ವರ ವಾಘಮಾರೆ ಅವರು ಪ್ರಯಾಣಿಕ ಔರಾದ್ ತಾಲ್ಲೂಕಿನ ಧೂಪತಮಹಾಗಾಂವದ ವೈಜನಾಥ(ಬಾಬುರಾವ್) ಭಾಲ್ಕೆ ಅವರಿಗೆ ಹಣದ ಬ್ಯಾಗ್‌ ಒಪ್ಪಿಸಿದರು.

Post Comments (+)