ಮಂಗಳವಾರ, ನವೆಂಬರ್ 19, 2019
29 °C

ಈದ್ ಮಿಲಾದ್ ಹಬ್ಬವನ್ನು ಸೌಹಾರ್ದದಿಂದ ಹಬ್ಬ ಆಚರಿಸಿ: ಸಿಪಿಐ ಪಾಲಕ್ಷಯ್ಯ ಹಿರೇಮಠ

Published:
Updated:

ಕಮಲನಗರ: ನವೆಂಬರ್ 10ರಂದು ಈದ್ ಮಿಲಾದ್ ಹಬ್ಬವನ್ನು  ಶಾಂತಿ ಮತ್ತು ಸೌಹಾರ್ದದಿಂದ ಆಚರಿಸಬೇಕು ಎಂದು ಸಿಪಿಐ ಪಾಲಕ್ಷಯ್ಯ ಹಿರೇಮಠ ಹೇಳಿದರು.

ಕಮಲನಗರ ಪೊಲೀಸ್ ಠಾಣೆಯಲ್ಲಿ ಗುರುವಾರ ಈದ್ ಮಿಲಾದ್ ಹಬ್ಬದ ನಿಮಿತ್ತ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

ಕಮಲನಗರ ಭಾವೈಕ್ಯತೆಗೆ ಹೆಸರಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗದ ರೀತಿಯಲ್ಲಿ ನಡೆದುಕೊಳ್ಳಬೇಕು. ವದಂತಿಗಳಿಗೆ ಕಿವಿಗೊಡಬಾರದು ಎಂದರು.

ಪ್ರಭಾರ ಪಿಎಸ್‍ಐ ಚಿದಾನಂದ ಎಂ.ಮಠ, ಎಎಸ್‍ಐ ವಿಪಿ ಬಡಿಗೇರ, ಶಾಂತಕುಮಾರ ಜಿ.ಬಿರಾದಾರ, ಶಿವಾ ಚವಾಣ್, ಶೇರು ಬಾಗವಾನ್, ಅಶೋಕ ಮೇತ್ರೆ, ರಾಮರಾವ ಜಾಧವ, ಮಹಾದೇವ ಪಾಟೀಲ, ಅರುಣ ಪಾಟೀಲ, ಅಶೋಕ ಪಾಟೀಲ, ಅಜರ ಬಾಗವಾನ, ಮಹಾದೇವ ಪಾಟೀಲ, ವಿಜಯಕುಮಾರ ಸಂತೋಷ ಇದ್ದರು.

ಪ್ರತಿಕ್ರಿಯಿಸಿ (+)