ಔರಾದ್: ಇಲ್ಲಿಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಧುನಿಕ ಕಂಪ್ಯೂಟರ್ ಪಿತಾಮಹ ಚಾರ್ಲ್ಸ್ ಬ್ಯಾಬೇಜ್ ಸ್ಮರಣಾರ್ಥ ಕಂಪ್ಯೂಟರ್ ಆಪರೇಟರ್ ದಿನವನ್ನು ಆಚರಿಸಲಾಯಿತು.

ತಾಲ್ಲೂಕು ಪಂಚಾಯಿತಿ ಇಒ ಕಿರಣ ಪಾಟೀಲ ಚಾರ್ಲ್ಸ್ ಬ್ಯಾಬೇಜ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ‘ಜನರಿಗೆ ತ್ವರಿತ ಹಾಗೂ ಸುಲಭ ಸೇವೆ ಕೊಡಲು ಸರ್ಕಾರ ಎಲ್ಲ ಕಡೆ ಕಂಪ್ಯೂಟರ್ ಬಳಕೆಗೆ ಅವಕಾಶ ಕೊಟ್ಟಿದೆ. ನಾವು ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಜನಸ್ನೇಹಿ ಆಡಳಿತ ಕೊಡಬೇಕು’ ಎಂದು ಸಲಹೆ ನೀಡಿದರು.

‘ಸರ್ಕಾರಿ ನೌಕರರು ಇಲ್ಲವೇ ಕಂಪ್ಯೂಟರ್ ಆಪರೇಟರ್ಗಳು ಕೇವಲ ನೌಕರಿಗಾಗಿ ಕೆಲಸ ಮಾಡಬಾರದು. ಬದಲಿಗೆ ನಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಮಾನವೀಯ ನೆಲೆಯಲ್ಲಿ ಜನಸಾಮಾನ್ಯರಿಗೆ ಕೆಲಸ ಮಾಡಿಕೊಡಬೇಕು’ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ‘ಗ್ರಾಮ ಪಂಚಾಯಿತಿಯಲ್ಲಿ ಕಂಪ್ಯೂಟರ್ ಆಪರೇಟರ್ಗಳ ಸೇವೆ ಬಹಳ ಮುಖ್ಯವಾಗಿದೆ. ಜನರಿಗೆ ವಿನಾ ಕಾರಣ ತಿರುಗಿಸದೆ ಅವರ ಕೆಲಸ ಬೇಗ ಮಾಡಿಕೊಡಬೇಕು’ ಎಂದರು.

ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಸಂತೋಷ್ ಪಾಟೀಲ, ವಿವೇಕ ಸ್ವಾಮಿ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ಸಂಜುಕುಮಾರ, ಭೀಮರಾವ ರಾಠೋಡ್ ಹಾಗೂ ವಿವಿಧ ಗ್ರಾಮ ಪಂಚಾಯಿತಿ ಪಿಡಿಒಗಳು ಹಾಜರಿದ್ದರು.