ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಸಂವಿಧಾನ ರಕ್ಷಣೆ ಜನಜಾಗೃತಿ ಕರಪತ್ರ ಬಿಡುಗಡೆ

Published 27 ಡಿಸೆಂಬರ್ 2023, 15:33 IST
Last Updated 27 ಡಿಸೆಂಬರ್ 2023, 15:33 IST
ಅಕ್ಷರ ಗಾತ್ರ

ಬೀದರ್‌: ದಲಿತ ಸಂಘಟನೆಗಳ ಒಕ್ಕೂಟದಿಂದ ಜನವರಿ 26ರಂದು ಹಮ್ಮಿಕೊಂಡಿರುವ ಸಂವಿಧಾನ ಸಂರಕ್ಷಣೆ ಮತ್ತು ಪ್ರಜಾಪ್ರಭುತ್ವ ಉಳಿವಿಗಾಗಿ ಜನಜಾಗೃತಿ ಕಾರ್ಯಕ್ರಮದ ಕರಪತ್ರವನ್ನು ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಬುಧವಾರ ಬಿಡುಗಡೆಗೊಳಿಸಲಾಯಿತು.

ಒಕ್ಕೂಟದ ಅಧ್ಯಕ್ಷ ಚಂದ್ರಕಾಂತ ನಿರಾಟೆ ಮಾತನಾಡಿ,‘ಭಾರತೀಯ ಸಂವಿಧಾನವು ದೇಶದ ಎಲ್ಲ ಪ್ರಜೆಗಳಿಗೆ ಸಮಾನ ಅವಕಾಶ, ಸಮಾನ ಪ್ರಗತಿಗೆ ಅನುವು ಮಾಡಿಕೊಟ್ಟಿದೆ. ಆದರೆ, ದೇಶದಲ್ಲಿ ಸಂವಿಧಾನದ ಪ್ರಕಾರ ಆಡಳಿತ ನಡೆಯುತ್ತಿಲ್ಲ’ ಎಂದರು.

ಖಜಾಂಚಿ ನರ್ಸಿಂಗ್‌ ಸಾಮ್ರಾಟ್ ಮಾತನಾಡಿ,‘ಸಂವಿಧಾನದಲ್ಲಿನ ಅಂಶಗಳು ಎಲ್ಲರ ಹಿತವನ್ನು ಬಯಸುತ್ತವೆ. ಆದರೆ, ಆಡಳಿತ ನಡೆಸುವವರು ಕೆಟ್ಟ ಆಡಳಿತ ನೀಡುತ್ತಿದ್ದಾರೆ’ ಎಂದು ಹೇಳಿದರು.

ಒಕ್ಕೂಟದ ಜಿಲ್ಲಾ ಘಟಕದ ಗೌರವ ಅಧ್ಯಕ್ಷ ಸಂಜಯ ಭೋಸ್ಲೆ, ಕಾರ್ಯಾಧ್ಯಕ್ಷ ರಾಜಕುಮಾರ ಗುನ್ನಳ್ಳಿ, ಕಾರ್ಯದರ್ಶಿ ರಾಜಕುಮಾರ ಭಾವಿಕಟ್ಟಿ, ಪ್ರಮುಖರಾದ ರಾಘವೇಂದ್ರ ಮೀನಕೇರಾ, ಜಗನ್ನಾಥ ಹೊನ್ನಾ, ಅಂಬಾದಾಸ ಸೋನಿ, ಅಭಿಲಾಷ ಶಿಂಧೆ, ಗೌತಮ ಭೋಸ್ಲೆ, ಅರವಿಂದ ದಯಾಳ, ಮುಕೇಶ ಶಹಾಗಂಜ್, ಅಂಬಾದಾಸ ಹಾಗೂ ಸುಬ್ಬಣ್ಣ ಕರಕನಳ್ಳಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT