ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಜಗತ್ತಿನ ಶ್ರೇಷ್ಠ ಸಂವಿಧಾನ ಹೊಂದಿದ ದೇಶ

ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಗುಂಡಪ್ಪ ವಕೀಲ ಹೇಳಿಕೆ
Last Updated 26 ನವೆಂಬರ್ 2022, 14:13 IST
ಅಕ್ಷರ ಗಾತ್ರ

ಔರಾದ್: ‘ಭಾರತ ಜಗತ್ತಿನ ಶ್ರೇಷ್ಠ ಸಂವಿಧಾನ ಹೊಂದಿದ ದೇಶ’ ಎಂದು ಮಾಜಿ ಶಾಸಕ ಗುಂಡಪ್ಪ ವಕೀಲ ಹೇಳಿದರು.

ಪಟ್ಟಣದ ಪತ್ರಿ ಸ್ವಾಮಿ ಕಾಲೇಜಿನಲ್ಲಿ ಶನಿವಾರ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಇಡೀ ಜಗತ್ತೇ ಮೆಚ್ಚುಗೆ ವ್ಯಕ್ತಪಡಿಸಿದೆ. ಇಲ್ಲಿ ಎಲ್ಲರಿಗೂ ಒಂದೇ ನ್ಯಾಯ ಇದೆ. ಸಣ್ಣ ವ್ಯಕ್ತಿ ಕೂಡ ದೇಶದ ಯಾವುದೇ ಅತ್ಯುನ್ನತ ಸ್ಥಾನ ಪಡೆಯುವ ವ್ಯವಸ್ಥೆ ನಮ್ಮ ದೇಶದಲ್ಲಿ ಮಾತ್ರ ಇದೆ’ ಎಂದು ಹೇಳಿದರು.

ಸಂಪನ್ಮೂಲ ಶಿಕ್ಷಕ ನಂದಾದೀಪ ಬೋರಾಳೆ ಮಾತನಾಡಿ,‘ಪ್ರತಿಯೊಬ್ಬರೂ ಸಂವಿಧಾನ ಗೌರವಿಸಬೇಕು. ಸಂವಿಧಾನ ಎಂಬುದು ಒಂದು ವರ್ಗ, ಜಾತಿಗೆ ಸೀಮಿತ ಅಲ್ಲ. ಅದು ದೇಶದ ಪ್ರತಿ ನಾಗರಿಕರಿಗೆ ರಕ್ಷಣೆ ನೀಡುವ ವ್ಯವಸ್ಥೆ’ ಎಂದರು.

ಪ್ರಾಂಶುಪಾಲ ಓಂಪ್ರಕಾಶ ದಡ್ಡೆ, ವಕೀಲ ಬಾಲಾಜಿ ಕುಂಬಾರ, ಸಾಮಾಜಿಕ ಕಾರ್ಯಕರ್ತ ರತ್ನದೀಪ ಕಸ್ತೂರೆ, ಅಖಿಲ್, ಪಿಎಸ್‌ಐ ಕಾಶಿನಾಥ, ವಕೀಲ ರಾಜಕುಮಾರ, ಪ್ರಾಂಶುಪಾಲೆ ಶಕುಂತಲಾ, ಸುನೀಲ ಮಿತ್ರಾ ಹಾಗೂ ರಾಹುಲ್ ಜಾಧವ ಇದ್ದರು.

ಸಂತಪುರದಲ್ಲಿ ಸಂವಿಧಾನ ದಿನ: ತಾಲ್ಲೂಕಿನ ಸಂತಪುರದಲ್ಲಿ ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಂವಿಧಾನ ದಿನ ಆಚರಿಸಲಾಯಿತು.

ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ ಸ್ವಾಮಿ ಮಾತನಾಡಿ,‘ಸಂವಿಧಾನ ನಮ್ಮೆಲ್ಲರ ಹೆಮ್ಮೆ. ನಾವು ಅದನ್ನು ಗೌರವದಿಂದ ಕಾಣಬೇಕು’ ಎಂದರು.

ವೈದ್ಯಾಧಿಕಾರಿ ಅಬ್ದುಲ್ ವಾಜೀದ್, ಡಾ.ಸಂಗಮೇಶ, ಶರಣಪ್ಪ ಬಿರಾದಾರ, ಶಿವಕುಮಾರ ಪಾಂಚಾಳ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಸಂಚಾಲಕ ಧನರಾಜ ಮುಸ್ತಾಪುರ, ಮಂಜುನಾಥ ಸ್ವಾಮಿ, ರಾಜಕುಮಾರ ಲಕ್ಕೆ, ಕಾಶಿನಾಥ ಗಾಯಕವಾಡ, ರಾಮಚಂದ್ರ ಕಾಂಬಳೆ, ಸತೀಶ್ ವಗ್ಗೆ, ವಿಲಾಸ ಹಸನ್ಮುಖಿ, ಗಣಪತಿ ವಾಸುದೇವ, ಅಂಬಾದಾಸ ಹಾಗೂ ಮಹೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT