ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮ್ಲಜನಕ ಸಾಂದ್ರಕಗಳ ಕೊಡುಗೆ: ಶಾಸಕ ಸಲಗರ ಮನವಿಗೆ ಸ್ಪಂದಿಸಿದ ಉಪಮುಖ್ಯಮಂತ್ರಿ

ಶಾಸಕ ಸಲಗರ ಮನವಿಗೆ ಸ್ಪಂದಿಸಿದ ಉಪಮುಖ್ಯಮಂತ್ರಿ
Last Updated 11 ಜೂನ್ 2021, 3:32 IST
ಅಕ್ಷರ ಗಾತ್ರ

ಬಸವಕಲ್ಯಾಣ: ನಗರದ ಸಾರ್ವಜನಿಕ ಆಸ್ಪತ್ರೆಗಾಗಿ ಉಪ ಮುಖ್ಯಮಂತ್ರಿ ಡಾ.ಅಶ್ವಥನಾರಾಯಣ ಅವರು 5 ಆಮ್ಲಜನಕದ ಸಾಂದ್ರಕ (ಕಾನ್ಸಂಟರೇಟರ್) ಯಂತ್ರಗಳನ್ನು ನೀಡಿದ್ದಾರೆ.

ಶಾಸಕ ಶರಣು ಸಲಗರ ಅವರು ಬುಧವಾರ ಬೆಂಗಳೂರಿನಲ್ಲಿ ಡಾ.ಅಶ್ವಥ ನಾರಾಯಣ ಅವರನ್ನು ಭೇಟಿಯಾಗಿ ಆಸ್ಪತ್ರೆಯಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದ್ದರು. ಕೊರೊನಾ ಸೋಂಕಿತರಿಗೆ ಆಮ್ಲಜನಕದ ಕೊರತೆ ಆಗುತ್ತಿದೆ ಎಂದಿದ್ದಕ್ಕೆ ಅವರು ಈ ಸಾಂದ್ರಕಗಳನ್ನು ನೀಡಿದ್ದಾರೆ. ಇತರೆ ಸಮಸ್ಯೆಗಳನ್ನು ಬಗೆಹರಿಸುವು ದಾಗಿಯೂ ಅವರು ಭರವಸೆ ನೀಡಿದ್ದಾರೆ.

ಮನೆ ಮಂಜೂರು: ಶಾಸಕ ಶರಣು ಸಲಗರ ಅವರು ವಸತಿ ಸಚಿವ ವಿ.ಸೋಮಣ್ಣ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಈಚೆಗೆ ನಡೆದ ಉಪ ಚುನಾವಣೆಯಲ್ಲಿ ಕ್ಷೇತ್ರದ ಉಸ್ತುವಾರಿಗಳಾಗಿ ಗೆಲುವಿಗೆ ಸಹಕರಿಸಿದಕ್ಕೆ ಅವರನ್ನು ಸನ್ಮಾನಿಸಿದರು. ಕ್ಷೇತ್ರದಲ್ಲಿ 18,000 ಜನರಿಗೆ ಮನೆಗಳ ಅಗತ್ಯವಿದ್ದು ಶೀಘ್ರ ಮಂಜೂರು ಮಾಡಬೇಕು ಎಂದು ಮನವಿಪತ್ರ ಕೂಡ ಸಲ್ಲಿಸಿದರು.

ಈ ಮೊದಲು ಕೂಡ 17,000 ಮನೆಗಳನ್ನು ಮಂಜೂರು ಮಾಡಲಾ ಗಿತ್ತು. ಮತ್ತೆ ಅಗತ್ಯವಿದ್ದಷ್ಟು ಮನೆಗಳನ್ನು ಒದಗಿಸಲಾಗುವುದು. ಕ್ಷೇತ್ರದ ಪ್ರಗತಿ ಕಾರ್ಯದಲ್ಲಿ ಎಲ್ಲ ರೀತಿಯಿಂದ ಸಹಕಾರ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.

ಪ್ರಮುಖರಾದ ರಮೇಶ ಬಿರಾದಾರ, ವೀರೇಶ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT