ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಮಾರುಕಟ್ಟೆಯಲ್ಲಿ ಸ್ವಾದ ಹೆಚ್ಚಿಸಿಕೊಂಡ ಕೊತ್ತಂಬರಿ

ಏರಿದ ನುಗ್ಗೆಕಾಯಿ, ಇಳಿದ ಹಿರೇಕಾಯಿ
Last Updated 29 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲಿ ಬೆಂಕಿ ಬಿಸಿಲು ಇದೆ. ಇಲ್ಲಿನ ತರಕಾರಿ ಮಾರುಕಟ್ಟೆಗೆ ದೂರದ ಜಿಲ್ಲೆಗಳಿಂದ ತರಕಾರಿ ಬಂದರೂ ಬಿಸಿಲಿಗೆ ಬಾಡುತ್ತಿದೆ. ಹೀಗಾಗಿ ವ್ಯಾಪಾರಿಗಳು ಕಡಿಮೆ ಪ್ರಮಾಣದಲ್ಲೇ ತರಕಾರಿ ತರಿಸಿಕೊಳ್ಳುತ್ತಿದ್ದಾರೆ.

ಈಗ ಜಾತ್ರೆ ಹಾಗೂ ಮದುವೆ ಹಂಗಾಮು. ಅಡಿಗೆ ಸ್ವಾದ ಹೆಚ್ಚಿಸಲು ಬಾಣಸಿಗರು ಎಷ್ಟೇ ಬೆಲೆ ಹೆಚ್ಚಾದರೂ ಕೊತ್ತಂಬರಿಇಲ್ಲದೆ ಅಡುಗೆ ಮಾಡುತ್ತಿಲ್ಲ. ಹೀಗಾಗಿ ಕೊತಂಬರಿ ಬೆಲೆಯಲ್ಲಿ ಪ್ರತಿ ಕ್ವಿಂಟಲ್‌ಗೆ ₹4 ಸಾವಿರ ಹೆಚ್ಚಳವಾಗಿದೆ. ಕಳೆದ ವಾರ ಪ್ರತಿ ಕ್ವಿಂಟಲ್‌ಗೆ ₹2 ಸಾವಿರದಂತೆ ಮಾರಾಟವಾಗಿದ್ದ ಕೊತಂಬರಿ ಈ ವಾರ ₹ 6ಸಾವಿರಕ್ಕೆ ಜಿಗಿದಿದೆ. ಸಬ್ಬಸಗಿ, ಟೊಮೆಟೊ, ನುಗ್ಗೆಕಾಯಿ ಹಾಗೂ ಚವಳೆಕಾಯಿ ಬೆಲೆ ₹1 ಸಾವಿರ ಏರಿಕೆಯಾಗಿದೆ.

ಮೆಣಸಿನಕಾಯಿ, ಬೀನ್ಸ್‌, ಹಿರೇಕಾಯಿ, ತೊಂಡೆಕಾಯಿ, ಡೊಣ ಮೆಣಸಿನಕಾಯಿ ಬೆಲೆ ₹ 2 ಸಾವಿರ, ಹೂಕೋಸು ₹ 1ಸಾವಿರ ಇಳಿಕೆಯಾಗಿದೆ. ತರಕಾರಿ ರಾಜ ಬದನೆಕಾಯಿ ಮೌಲ್ಯ ಹೆಚ್ಚಿಸಿಕೊಂಡಿಲ್ಲ. ಕಳೆದ ಎರಡು ವಾರಗಳಿಂದ ಬಡವರ ಬೆನ್ನಿಗೆ ನಿಂತಿದ್ದಾನೆ.

ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ, ಬೀಟ್‌ರೂಟ್‌, ಎಲೆಕೋಸು, ಗಜ್ಜರಿ, ಬದನೆಕಾಯಿ, ಬೆಂಡೆಕಾಯಿ, ಮೆಂತೆ ಸೊಪ್ಪು, ಪಾಲಕ್‌ ಹಾಗೂ ಕರಿಬೇವು ಬೆಲೆ ಸ್ಥಿರವಾಗಿದೆ.

‘ಬೆಳಗಾವಿ ಜಿಲ್ಲೆಯಿಂದಲೇ ಬೀದರ್ ತರಕಾರಿ ಮಾರುಕಟ್ಟೆಗೆ ಮೆಣಸಿನಕಾಯಿ ಬಂದಿದೆ. ಮಹಾರಾಷ್ಟ್ರದ ಸೋಲಾಪುರದಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಆವಕವಾಗಿದೆ. ಬೇಸಿಗೆಯಲ್ಲಿ ಬಾಯಾರಿಕೆಯೇ ಅಧಿಕ ಇರುತ್ತದೆ. ತರಕಾರಿ ಸೇವನೆಯೂ ಕಡಿಮೆ ಎಂದೇ ಹೇಳಬಹುದು. ಇದೇ ಕಾರಣಕ್ಕೆ ತರಕಾರಿ ಆವಕವೂ ಕಡಿಮೆ ಇದೆ’ ಎನ್ನುತ್ತಾರೆ ತರಕಾರಿ ವ್ಯಾಪಾರಿ ಶಿವಕುಮಾರ ಮಾಡಗೂಳ.

ಹೈದರಾಬಾದ್‌ನಿಂದ ಡೊಣ ಮೆಣಸಿನಕಾಯಿ, ನುಗ್ಗೆಕಾಯಿ, ಗಜ್ಜರಿ, ಬೀಟ್‌ರೂಟ್‌, ತೊಂಡೆಕಾಯಿ, ಚವಳೆಕಾಯಿ ಬೀದರ್‌ ತರಕಾರಿ ಮಾರುಕಟ್ಟೆಗೆ ಆವಕವಾಗಿದೆ. ಭಾಲ್ಕಿ, ಚಿಟಗುಪ್ಪ ಹಾಗೂ ಹುಮನಾಬಾದ್ ತಾಲ್ಲೂಕಿನಿಂದ ಹಿರೇಕಾಯಿ, ಬದನೆಕಾಯಿ, ಎಲೆಕೋಸು, ಹೂಕೋಸು ಹಾಗೂ ಕರಿಬೇವು ಬಂದಿದೆ.

ತರಕಾರಿ ಮಾರುಕಟ್ಟೆ ಬೆಲೆ
ಈರುಳ್ಳಿ: 5-10, 5-10
ಮೆಣಸಿನಕಾಯಿ: 100-120, 80-100
ಆಲೂಗಡ್ಡೆ: 20-30, 20-30
ಎಲೆಕೋಸು: 20-30, 20-30
ಬೆಳ್ಳುಳ್ಳಿ: 30-40, 30-40
ಗಜ್ಜರಿ: 50-60, 50-60
ಬೀನ್ಸ್‌: 80-100, 100-120
ಬದನೆಕಾಯಿ: 20-30, 20-30
ಮೆಂತೆ ಸೊಪ್ಪು: 60-80, 60-80
ಹೂಕೋಸು: 50-60, 40-50
ಸಬ್ಬಸಗಿ: 40-50, 50-60
ಬೀಟ್‌ರೂಟ್‌: 30-40, 30-40
ತೊಂಡೆಕಾಯಿ: 50-60, 30-40
ಕರಿಬೇವು: 30-40, 30-40
ಕೊತ್ತಂಬರಿ: 10-20, 50-60
ಟೊಮೆಟೊ: 10-20, 20-30
ಪಾಲಕ್‌: 30-40, 30-40
ಬೆಂಡೆಕಾಯಿ: 30-40, 30-40
ಹಿರೇಕಾಯಿ: 50-60, 30-40
ನುಗ್ಗೆಕಾಯಿ: 20-30, 30-40
ಡೊಣ ಮೆಣಸಿನಕಾಯಿ: 60-80,50-60
ಚವಳೆಕಾಯಿ: 20-30, 30-40

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT