ಸಂಗಮ: ಮಾಂಜ್ರಾ ನದಿಯಲ್ಲಿ ಕಾಲು ಜಾರಿ ಬಿದ್ದು ದಂಪತಿ ಸಾವು

ಕಮಲನಗರ: ತಾಲ್ಲೂಕಿನ ಸಂಗಮ ಗ್ರಾಮದ ಬಳಿಯ ಮಾಂಜ್ರಾ ನದಿಗೆ ಪೂಜೆ ಮಾಡಲು ಹೋಗಿದ್ದ ವೇಳೆ ಉದಗೀರ ಮೂಲದ ದಂಪತಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.
ಚಂದ್ರಕಾಂತ ಅಮೃತಪ್ಪ ಮುಳೆ (55), ಅವರ ಪತ್ನಿ ರಾಜಶ್ರೀ ಚಂದ್ರಕಾಂತ ಮುಳೆ (50) ಮೃತರು.
ಅನಾರೋಗ್ಯದಿಂದ ಬಳಲುತ್ತಿದ್ದ ಚಂದ್ರಕಾಂತ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದಾಗಿ ಭಾನುವಾರ ರಾತ್ರಿ ರಾಜಶ್ರೀ ಅವರು ಮಗನಿಗೆ ತಿಳಿಸಿ ಹೋಗಿದ್ದರು. ಬೆಳಗಿನ ಜಾವ ಐದು ಗಂಟೆ ಸುಮಾರಿಗೆ ಸಂಗಮ ಗ್ರಾಮದ ಬಳಿ ಮಾಂಜ್ರಾ ನದಿ ಸೇತುವೆ ಬಳಿ ಕಾರು ನಿಲ್ಲಿಸುವಂತೆ ಚಾಲಕನಿಗೆ ಹೇಳಿದ್ದಾರೆ.
ಚಾಲಕ ವಿವೇಕಾನಂದ ಅವರು ಕಾರು ನಿಲ್ಲಿಸಿದಾಗ ಪೂಜೆ ಮಾಡಿಕೊಂಡು ಬರುತ್ತೇವೆ ಎಂದ ದಂಪತಿ ಸೇತುವೆ ಕೆಳಗೆ ಹೋಗಿದ್ದಾರೆ. ಒಂದು ಗಂಟೆಯಾದರೂ ಅವರು ವಾಪಸ್ ಬಾರದಿದ್ದಾಗ ವಿವೇಕಾನಂದ ಕೆಳಗೆ ಹೋಗಿ ನೋಡಿದ್ದಾರೆ. ಆಗ ಇಬ್ಬರ ಮೃತ ದೇಹಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ದಂಪತಿಯ ಪುತ್ರ ಚೇತನ್ ಅವರು ದೂರು ನೀಡಿದ್ದು, ಠಾಣಾಕುಶನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.