ಸೋಮವಾರ, ಮಾರ್ಚ್ 1, 2021
24 °C
ರಾಷ್ಟ್ರೀಯ ಹೆದ್ದಾರಿಯಲ್ಲಿ ಠಿಕಾಣಿ ಹೂಡಿದ ವೈದ್ಯರು

ಕೋವಿಡ್ ಎರಡನೇ ಅಲೆ: ಗಡಿಯಲ್ಲಿ ಕಟ್ಟೆಚ್ಚರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ಕೋವಿಡ್ ಎರಡನೇ ಅಲೆ ಕಾಣಿಸಿಕೊಂಡ ಕಾರಣ ಹಾಗೂ ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಮಹಾರಾಷ್ಟ್ರದಿಂದ ಬರುವವರ ಮೇಲೆ ನಿಗಾ ಇಡಲಾಗುತ್ತಿದ್ದು, ಸಮೀಪದ ಚಂಡಕಾಪುರ ಬಳಿಯ ರಾಜ್ಯದ ಗಡಿಯಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ವೈದ್ಯರು ತಪಾಸಣೆ ನಡೆಸುತ್ತಿದ್ದಾರೆ.

ಅಲ್ಲದೇ, ಹುಲಸೂರ ಸಮೀಪದ ಶಹಾಜಹಾನಿ ಔರಾದ್ ಗಡಿಯಲ್ಲಿಯೂ ಎರಡು ದಿನಗಳಿಂದ ತಪಾಸಣಾ ಕಾರ್ಯ ನಡೆದಿದೆ. ಎರಡೂ ಸ್ಥಳಗಳಲ್ಲಿ ಒಟ್ಟು 470ಕ್ಕೂ ಅಧಿಕ ಜನರ ತಪಾಸಣೆ ಕೈಗೊಳ್ಳಲಾಗಿದೆ. ಮದುವೆ ಹಾಗೂ ಇತರೆ ಕಾರ್ಯಕ್ರಮಗಳಿಗೆ ಬರುವವರ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಪರಿಶೀಲಿಸಲಾಗುತ್ತಿದೆ.

`ಸಂಶಯಾಸ್ಪದ ವ್ಯಕ್ತಿಗಳ ಜ್ವರ ಪರೀಕ್ಷೆ ಹಾಗೂ ಕೋವಿಡ್‌ ಪರೀಕ್ಷೆ ಕೂಡ ನಡೆಸಲಾಗುತ್ತಿದೆ. ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಬಸ್‌ಗಳ ಚಾಲಕ ಮತ್ತು ನಿರ್ವಾಹಕರ ರ್‍ಯಾಪಿಡ್ ಆ್ಯಂಟಿಜನ್‌ ಟೆಸ್ಟ್ ನಡೆಸಲಾಗಿದ್ದು, ನೆಗೆಟಿವ್ ವರದಿ ಬಂದಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರವೀಣ ಹೂಗಾರ ತಿಳಿಸಿದ್ದಾರೆ.

ಬ್ಯಾರಿಕೇಡ್‌ಗಳನ್ನು ಅಳವಡಿಸಿ ತಪಾಸಣಾ ಕಾರ್ಯ ನಡೆಯುತ್ತಿರುವ ಕಾರಣ ಹೆದ್ದಾರಿಯ ಆಚೆ ಈಚೆ ವಾಹನಗಳು ನಿಲ್ಲುತ್ತಿದ್ದು ಸುಗಮ ವಾಹನ ಸಂಚಾರಕ್ಕೆ ಅಡೆತಡೆ ಆಗುತ್ತಿದೆ. ಮಂಠಾಳ ಠಾಣೆ ಸಬ್ ಇನ್‌ಸ್ಪೆಕ್ಟರ್ ಜಯಶ್ರೀ ನೇತೃತ್ವದಲ್ಲಿ ವಾಹನ ದಟ್ಟಣೆ ನಿಯಂತ್ರಿಸಲಾಗುತ್ತಿದೆ.

ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಪರಿಶೀಲನೆ

ಬಸವಕಲ್ಯಾಣ: ಕೋವಿಡ್ ಎರಡನೇ ಅಲೆ ಕಾಣಿಸಿಕೊಂಡ ಕಾರಣ ಹಾಗೂ ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಮಹಾರಾಷ್ಟ್ರದಿಂದ ಬರುವವರ ಮೇಲೆ ನಿಗಾ ಇಡಲಾಗುತ್ತಿದ್ದು, ಸಮೀಪದ ಚಂಡಕಾಪುರ ಬಳಿಯ ರಾಜ್ಯದ ಗಡಿಯಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ವೈದ್ಯರು ತಪಾಸಣೆ ನಡೆಸುತ್ತಿದ್ದಾರೆ.

ಅಲ್ಲದೇ, ಹುಲಸೂರ ಸಮೀಪದ ಶಹಾಜಹಾನಿ ಔರಾದ್ ಗಡಿಯಲ್ಲಿಯೂ ಎರಡು ದಿನಗಳಿಂದ ತಪಾಸಣಾ ಕಾರ್ಯ ನಡೆದಿದೆ. ಎರಡೂ ಸ್ಥಳಗಳಲ್ಲಿ ಒಟ್ಟು 470ಕ್ಕೂ ಅಧಿಕ ಜನರ ತಪಾಸಣೆ ಕೈಗೊಳ್ಳಲಾಗಿದೆ. ಮದುವೆ ಹಾಗೂ ಇತರೆ ಕಾರ್ಯಕ್ರಮಗಳಿಗೆ ಬರುವವರ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಪರಿಶೀಲಿಸಲಾಗುತ್ತಿದೆ.

`ಸಂಶಯಾಸ್ಪದ ವ್ಯಕ್ತಿಗಳ ಜ್ವರ ಪರೀಕ್ಷೆ ಹಾಗೂ ಕೋವಿಡ್‌ ಪರೀಕ್ಷೆ ಕೂಡ ನಡೆಸಲಾಗುತ್ತಿದೆ. ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಬಸ್‌ಗಳ ಚಾಲಕ ಮತ್ತು ನಿರ್ವಾಹಕರ ರ್‍ಯಾಪಿಡ್ ಆ್ಯಂಟಿಜನ್‌ ಟೆಸ್ಟ್ ನಡೆಸ ಲಾಗಿದ್ದು, ನೆಗೆಟಿವ್ ವರದಿ ಬಂದಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರವೀಣ ಹೂಗಾರ ತಿಳಿಸಿದ್ದಾರೆ.

ಬ್ಯಾರಿಕೇಡ್‌ಗಳನ್ನು ಅಳವಡಿಸಿ ತಪಾಸಣಾ ಕಾರ್ಯ ನಡೆಯುತ್ತಿರುವ ಕಾರಣ ಹೆದ್ದಾರಿಯ ಆಚೆ ಈಚೆ ವಾಹನಗಳು ನಿಲ್ಲುತ್ತಿದ್ದು ಸುಗಮ ವಾಹನ ಸಂಚಾರಕ್ಕೆ ಅಡೆತಡೆ ಆಗುತ್ತಿದೆ. ಮಂಠಾಳ ಠಾಣೆ ಸಬ್ ಇನ್‌ಸ್ಪೆಕ್ಟರ್ ಜಯಶ್ರೀ ನೇತೃತ್ವದಲ್ಲಿ ವಾಹನ ದಟ್ಟಣೆ ನಿಯಂತ್ರಿಸಲಾಗುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.