ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ₹21 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ

ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಭೂಮಿ ಪೂಜೆ
Last Updated 24 ಫೆಬ್ರುವರಿ 2020, 9:30 IST
ಅಕ್ಷರ ಗಾತ್ರ

ಕಮಲನಗರ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅವರಿಂದ ಕಳೆದ ಎರಡು ದಿನಗಳಲ್ಲಿ ಸುಮಾರು ₹21 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ತಾಲ್ಲೂಕಿನ ಹತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ಶಾಲಾ, ಅಂಗನವಾಡಿ ಕಟ್ಟಡ, ಸಮುದಾಯ ಭವನ ನಿರ್ಮಾಣ ಸೇರಿದಂತೆ ವಿವಿಧ ಅಂದಾಜು ₹13 ಕೋಟಿ ಮತ್ತು ₹4.74 ಕೋಟಿಯ ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಶನಿವಾರ 15ಕ್ಕೂ ಹೆಚ್ಚು ಗ್ರಾಮಗಳಲ್ಲಿ ಅಂದಾಜು ₹8 ಕೋಟಿ ವೆಚ್ಚದ 21 ಕಾಮಗಾರಿಗಳಿಗೆ ಚಾಲನೆ ನೀಡಿದರು.

ಶಾಸಕರ ಪ್ರದೇಶಾಭಿವೃದ್ಧಿ ನಿಧಿ: ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಕಮಲನಗರ ತಾಲ್ಲೂಕಿನ ತೋರ್ಣಾ ಗ್ರಾಮದಲ್ಲಿ ₹18 ಲಕ್ಷ ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯಡಿ ಖಂಡಿಕೇರಿ ಬಿಮಲಾನಾಯಕ ತಾಂಡಾದಲ್ಲಿ ₹15 ಲಕ್ಷ ವೆಚ್ಚದಲ್ಲಿ ಪೈಪ್‍ಲೈನ್ ಕಾಮಗಾರಿ ಸಚಿವರು ಚಾಲನೆ ನೀಡಿದರು.

ಕೆಕೆಆರ್‌ಡಿಬಿ ಯೋಜನೆಯಡಿ ಹೆಡಗಾಪುರ ಗ್ರಾಮದಲ್ಲಿ ₹52 ಲಕ್ಷ ವೆಚ್ಚದಲ್ಲಿ ಶಾಲಾ ಕಟ್ಟಡ ಕಾಮಗಾರಿ, ಹಿಪ್ಪಳಗಾಂವ್ ಗ್ರಾಮದಲ್ಲಿ ₹26 ಲಕ್ಷ ವೆಚ್ಚದಲ್ಲಿ ಎರಡು ಅಂಗನವಾಡಿ ಕಟ್ಟಡಗಳ ನಿರ್ಮಾಣ ಕಾಮಗಾರಿ, ಸಂತಪುರದಲ್ಲಿ ₹45 ಲಕ್ಷ , ಲಾಧಾ ಗ್ರಾಮದಲ್ಲಿ ₹50 ಲಕ್ಷ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿ, ಧುಪತ್ ಮಹಾಗಾಂವ್ ಗ್ರಾಮದಲ್ಲಿ ₹31 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರು ಸರಬರಾಜು ಕಾಮಗಾರಿ, ಕಾಂಪೌಂಡ್, ಬಿಸಿಎಂ ವಸತಿ ನಿಲಯದ ಹೆಚ್ಚುವರಿ ಕೋಣೆ ನಿರ್ಮಾಣ ಕಾಮಗಾರಿ, ಬಾಚೇಪಳ್ಳಿ ಮತ್ತು ಲಿಂಗಿ ಗ್ರಾಮದಲ್ಲಿ ತಲಾ ₹15 ಲಕ್ಷ ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ, ಹೆಡೆಗಾಪುರ ಗ್ರಾಮದಲ್ಲಿ ₹52 ಲಕ್ಷ ವೆಚ್ಚದ ಪ್ರಾಥಮಿಕ ಶಾಲೆಯ ಕಟ್ಟಡ ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಾಣ ಕಾಮಗಾರಿಗೆ ಸಚಿವರು ಚಾಲನೆ ನೀಡಿದರು.

ರಸ್ತೆ ನಿರ್ಮಾಣ ದುರುಸ್ತಿ ಕಾಮಗಾರಿ: ₹80 ಲಕ್ಷ ವೆಚ್ಚದಲ್ಲಿ ಕೊರಿಐವಾಳದಿಂದ ಮುಧೋಳ(ಕೆ) 1.5 ಕಿಮೀ ರಸ್ತೆ ನಿರ್ಮಾಣ ಕಾಮಗಾರಿ, ₹80 ಲಕ್ಷ ವೆಚ್ಚದ ಹಾಲಹಳ್ಳಿದಿಂದ ಬಳತ ರಸ್ತೆ ನಿರ್ಮಾಣ ಕಾಮಗಾರಿ, ₹64 ಲಕ್ಷ ವೆಚ್ಚದಲ್ಲಿ ಹಿಪ್ಪಳಗಾಂವ್-ಮಹಾಡೋಣಗಾಂವ್ ರಸ್ತೆ ಡಾಂಬರೀಕರಣ, ₹50 ಲಕ್ಷ ನಿಟ್ಟೂರ್(ಕೆ) ವಛರಾದ್ ಸದಾಶಿವಗಡ್ ರಸ್ತೆ ನಿರ್ಮಾಣ ಕಾಮಗಾರಿ, ₹2 ಕೋಟಿ ವೆಚ್ಚದಲ್ಲಿ ಗೌಂಡಗಾಂವ್-ಮಾಣೀಕತಾಂಡಾ ರಸ್ತೆ ನಿರ್ಮಾಣ ಕಾಮಗಾರಿಗೆ ಸಚಿವರು ಭೂಮಿ ಪೂಜೆ ನೆರವೇರಿಸಿದರು.

ಅಂಗನವಾಡಿ ಮತ್ತು ಶಾಲಾ ಕಟ್ಟಡಗಳನ್ನು ಸರಿಯಾಗಿ ನಿರ್ಮಿಸಬೇಕು. ರಸ್ತೆಗಳ ನಿರ್ಮಾಣ ಕೂಡ ಗುಣಮಟ್ಟದಿಂದಕೂಡಿರಬೇಕು. ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕಾಮಗಾರಿ ಸ್ಥಳಕ್ಕೆ ಕಾಲಕಾಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಪಂಚಾಯತ್ ರಾಜ್ ಎಂಜಿನಿಯರ್, ಲೋಕೋಪಯೋಗಿ ಇಲಾಖೆ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಗುತ್ತಿಗೆದಾರ ಸೂರ್ಯಕಾಂತ ಅಲಮಾಜೆ, ಜಗದೀಶ ಖೂಬಾ, ಸುರೇಶ ಭಸ್ಲೇ, ಕಿರಣ ಪಾಟೀಲ, ಕೃಷ್ಣಾ ಸಾಗಾಂವೆ, ಗಿರೀಶ ಒಡೆಯಾರ್, ರಾಮಶೆಟ್ಟಿ ಪನ್ನಾಳೆ, ಅನೀಲಕುಮಾರ ಹೊಳಸಮುದ್ರೆ, ಪ್ರವೀಣ ಕಾರಬರಿ, ಮಹೇಶ ಪಾಟೀಲ್, ಅರಹಂತ ಸಾವಳೆ, ಅನೀಲಕುಮಾರ ಬಿರಾದಾರ, ಸುನೀಲ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT