ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧ ಮಕ್ಕಳ ಶಾಲೆಗೆ ವಾಷಿಂಗ್ ಮೆಷಿನ್ ಕೊಡುಗೆ

ತಾಳಂಪಳ್ಳಿ ಏಜೆನ್ಸೀಸ್ ಮಾಲೀಕ ಸಂತೋಷಕುಮಾರ ತಾಳಂಪಳ್ಳಿ ಔದರ್ಯ
Last Updated 28 ಜನವರಿ 2023, 16:02 IST
ಅಕ್ಷರ ಗಾತ್ರ

ಬೀದರ್: ತಾಳಂಪಳ್ಳಿ ಏಜೆನ್ಸೀಸ್ ಮಾಲೀಕ ಸಂತೋಷಕುಮಾರ ತಾಳಂಪಳ್ಳಿ ಅವರು ಹುಮನಾಬಾದ್‍ನ ಮಾಣಿಕ ಪ್ರಭು ಅಂಧ ಮಕ್ಕಳ ವಸತಿಯುತ ಪಾಠ ಶಾಲೆಗೆ ವಾಷಿಂಗ್ ಮೆಷಿನ್ ಕೊಡುಗೆಯಾಗಿ ನೀಡುವ ಮೂಲಕ ಔದರ್ಯ ಮೆರೆದಿದ್ದಾರೆ.


ನಗರದ ಪ್ರತಾಪನಗರದ ಕೈಗಾರಿಕೆ ಪ್ರದೇಶದಲ್ಲಿ ನಡೆದ ‘ತಾಳಂಪಳ್ಳಿ ಏಜೆನ್ಸೀಸ್ ಸಿಎಫ್‍ಎ ಫಾರ್ ಜೆ.ಕೆ. ಸಿಮೆಂಟ್ ಲಿಮಿಟೆಡ್’ ಉದ್ಘಾಟನಾ ಸಮಾರಂಭದಲ್ಲಿ ಶಾಲೆಯ ಮುಖ್ಯಸ್ಥರಿಗೆ ವಾಷಿಂಗ್ ಮೆಷಿನ್ ಹಸ್ತಾಂತರಿಸಿದರು. ಶಾಲೆಯ ಮಕ್ಕಳಿಗೆ ಸಮವಸ್ತ್ರ ವಿತರಿಸಿ, ಶಾಲು ಹೊದಿಸಿ ಸನ್ಮಾನಿಸಿದರು.

ಶಾಸಕ ರಹೀಂಖಾನ್, ವಿಧಾನ ಪರಿಷತ್ ಸದಸ್ಯರಾದ ಚಂದ್ರಶೇಖರ ಪಾಟೀಲ, ಭೀಮರಾವ್ ಪಾಟೀಲ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ, ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಬಸವಕಲ್ಯಾಣ ಎಂಜಿನಿಯರಿಂಗ್ ಕಾಲೇಜು ಅಧ್ಯಕ್ಷ ದಿಲೀಪಕುಮಾರ ತಾಳಂಪಳ್ಳಿ, ಸಂತೋಷ ಬಿಲ್ಡ್‍ವೆಲ್ ಇನ್ಫ್ರಾ ಪ್ರೈವೇಟ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಧನರಾಜ ತಾಳಂಪಳ್ಳಿ, ತಾಳಂಪಳ್ಳಿ ಪ್ರಾಪರ್ಟೀಸ್‍ನ ದೇವರಾಜ ತಾಳಂಪಳ್ಳಿ, ಉದ್ಯಮಿ ವೀರಶೆಟ್ಟಿ ಪಾಟೀಲ, ಜೆ.ಕೆ. ಸಿಮೆಂಟ್ ಲಿಮಿಟೆಡ್‍ನ ರಾಜೇಶ ದೇಶಪಾಂಡೆ, ಮಹೇಶ ಎಸ್. ಮದಲಭಾವಿ, ಸಿದ್ದರಾಮೇಶ್ವರ ಆರ್. ಮಾಕಾ, ಶಿವಕುಮಾರ, ಮಸ್ತಾನ್ ಪಟೇಲ್, ಪ್ರಮುಖರಾದ ಶಾಂತಕುಮಾರ ಮುದಾಳೆ, ಡಾ. ರಜನೀಶ್ ವಾಲಿ, ಜಗದೀಶ್ ಖೂಬಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT