ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಸಕರ ಪಕ್ಕ ಚೇರ್ ಹಾಕಬೇಡಿ ಹೇಳಿಕೆ ಖಂಡನೀಯ: ಸೋಮನಾಥ್ ಪಾಟೀಲ

Published 2 ಜುಲೈ 2024, 15:28 IST
Last Updated 2 ಜುಲೈ 2024, 15:28 IST
ಅಕ್ಷರ ಗಾತ್ರ

ಹುಮನಾಬಾದ್: ‘ಶಾಸಕರ ಪಕ್ಕದಲಿ ತನಗೆ ಕುಳಿತುಕೊಳ್ಳಲು ಚೇರ್ ಹಾಕಬೇಡಿ ಎಂದು ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ ಹೇಳಿರುವುದನ್ನು ಖಂಡಿಸುತ್ತೇವೆ’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ ತಿಳಿಸಿದ್ದಾರೆ.

ಚಂದ್ರಶೇಖರ ಪಾಟೀಲ ಅವರು ಈಚೆಗೆ ನಡೆದ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸೋಲುತ್ತೇನೆ ಎಂಬ ಭಯದಿಂದ ಹಣ ಹಂಚಿ ಮಾಡಿ ಚುನಾವಣೆಯಲ್ಲಿ ಗೆದ್ದಿದ್ದಾರೆ. ಅವರು ಇನ್ನೊಬ್ಬರಿಗೆ ನೀತಿ ಪಾಠ ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ಶಾಸಕರದ್ದು. ಆದರೆ ವಿಧಾನ ಪರಿಷತ್ ಸದಸ್ಯರು ಒಂದು ಬಾರಿಯೂ ಕ್ಷೇತ್ರದ ಬಗ್ಗೆ ವಿಧಾನ ಪರಿಷತ್ ಸದನದಲ್ಲಿ ಮಾತನಾಡದವರು. ಇಲ್ಲಿ ಏನು ಮಾತನಾಡುತ್ತೀರಿ. ತಾಲ್ಲೂಕು ಅಭಿವೃದ್ಧಿ ವಿಷಯಗಳ ಬಗ್ಗೆ ನಡೆಯುವ ಕೆಡಿಪಿ ಸಭೆಯಲ್ಲಿ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಕ್ಷೇತ್ರದ ಅಭಿವೃದ್ಧಿ ಕುಂಠಿತ ಮಾಡುವ ಉದ್ದೇಶ ಇವರದ್ದು. ಹೀಗಾಗಿ ಹುಮನಾಬಾದ್ ವಿಧಾನಸಭಾ ಕ್ಷೇತ್ರದ ಜನರು ಕಾಂಗ್ರೆಸ್ ಅಭ್ಯರ್ಥಿ ಸೋಲಿಸಿ ಬಿಜೆಪಿ ಪಕ್ಷಕ್ಕೆ ಮತ ನೀಡಿ ಅಧಿಕಾರಕ್ಕೆ ತಂದಿದ್ದಾರೆ ಎಂಬುದು ಮರೆಯಬೇಡಿ. ಶಾಸಕರ ಹತ್ತಿರ ಚೇರ್ ಹಾಕಬೇಡಿ ಎಂದು ಅವಮಾನಿಸಿರುವುದು ಈ ಕ್ಷೇತ್ರದ ಜನರು ಮರೆಯುವುದಿಲ್ಲ. ನಿಮಗೆ ಮತ್ತೊಮ್ಮೆ ತಕ್ಕ ಪಾಠ ಕಲಿಸಿದ್ದಾರೆ’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT