ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಟಗುಪ್ಪ: ಕುಡಿಯುವ ನೀರಿಗೆ ಪರದಾಟ

ವೀರೇಶ ಮಠಪತಿ
Published 10 ಜೂನ್ 2024, 6:25 IST
Last Updated 10 ಜೂನ್ 2024, 6:25 IST
ಅಕ್ಷರ ಗಾತ್ರ

ಚಿಟಗುಪ್ಪ: ತಾಲ್ಲೂಕಿನ ಮುತ್ತಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದರಗಿ ಗ್ರಾಮದ ನಿವಾಸಿಗಳು ಕುಡಿಯಲು ನೀರು ಪರಾಡುವಂತಾಗಿದೆ. 

ಗ್ರಾಮದಲ್ಲಿ ನಲ್ಲಿಗಳ ಮೂಲಕ ಪಂಚಾಯಿತಿಯಿಂದ ನೀರು ಪೂರೈಸುವ ಕಾರ್ಯ ಸಮರ್ಪಕವಾಗಿ ನಿರ್ವಹಣೆಯಾಗುತ್ತಿಲ್ಲ, ಹಲವು ತಿಂಗಳುಗಳಿಂದ ಅಲ್ಲಲ್ಲಿ ಹಾಳಾದ ನಲ್ಲಿಗಳ ದುರಸ್ಥಿ ಕಾರ್ಯವೂ ನಡೆದಿಲ್ಲ. ಗ್ರಾಮದ ಒಂದು ಭಾಗಕ್ಕೆ ನೀರು ಹರಿದರೇ ಇನ್ನೊಂದು ಭಾಗಕ್ಕೆ ನೀರು ತಲುಪುವುದೇ ಇಲ್ಲ ಎಂದು ಗ್ರಾಮದ ಗೋಪಾಲ ತಿಳಿಸಿದರು.

ನೀರಿನ ಟ್ಯಾಂಕರ್‌ ಎಲ್ಲ ಕೆಲಸ ಬಿಟ್ಟು ಕನಿಷ್ಠ ಮೂರು ನಾಲ್ಕು ಗಂಟೆ ನೀರು ತುಂಬಿಕೊಳ್ಳುವುದರಲ್ಲಿಯೇ ಕಾಲ ಕಳೆಯಬೇಕಾಗುತ್ತಿದೆ. ಹೀಗಾಗಿ ಬೇಗ ಅಧಿಕಾರಿಗಳು ಗ್ರಾಮದೆಲ್ಲೆಡೆ ನೀರು ಪೂರೈಸಬೇಕು ಎಂದು ಗುಂಡಮ್ಮ ಆಗ್ರಹಿಸಿದ್ದಾರೆ.

ನೀರಿನ ಅಭಾವಾದಿಂದ ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದಕ್ಕೆ ಸಮಸ್ಯೆಯಾಗುತ್ತಿದೆ. ಗ್ರಾಮದಲ್ಲಿ ಮನೆ ಮನೆ ಗಂಗೆ ಯೋಜನೆ ಅಡಿಯಲ್ಲಿ ನಲ್ಲಿ ಅಳವಡಿಸಲಾಗಿದೆ ಆದರೆ ಅದನ್ನು ಹಳೆಯ ಪೈಪ್‌ಲೈನ್‌ಗೆ ಜೋಡಿಸಿದ್ದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಗ್ರಾಮದ ಶಂಕರ್‌ ಹೇಳಿದರು.

ಒಂದೇ ಕಡೆ ಹೆಚ್ಚು ಸಮಯ ಬಿಡುವುದರಿಂದ ನೀರು ಪೋಲಾಗುತ್ತಿದೆ. ಹೀಗಾಗಿ ಪಂಚಾಯಿತಿ ಸಿಬ್ಬಂದಿ ಎಲ್ಲಕಡೆಯೂ ನೀರು ಮುಟ್ಟುವಂತೆ ವೈಜ್ಞಾನಿಕ ಕ್ರಮದಲ್ಲಿ ಪೂರೈಸಬೇಕು ಎಂದು ಪ್ರಕಾಶ್‌ ಆಗ್ರಹಿಸಿದ್ದಾರೆ.

ಅಬ್ದುಲ್‌
ಅಬ್ದುಲ್‌
ಕಳೆದ ಎರಡು ತಿಂಗಳಿನಿಂದ ಗ್ರಾಮದಲ್ಲಿ ನಲ್ಲಿಗಳಿಗೆ ನೀರು ಬಾರದಕ್ಕೆ ಟ್ಯಾಂಕರ್‌ ನೀರನ್ನೇ ಜನ ಅವಲಂಭಿಸಿದ್ದಾರೆ
-ಅಬ್ದುಲ್‌ ಮದರಗಿ ನಿವಾಸಿ
ಮದರಗಿ ಗ್ರಾಮದ ಹೊಸ ಬಡಾವಣೆಯ ಕೊಳವೆ ಬಾಯಿ ನೀರು ಬತ್ತಿದ್ದರಿಂದ ಆ ಒಂದು ಬಡಾವಣೆಗೆ ಮಾತ್ರ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ
ಸವಿತಾ ಪಿಡಿಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT