ಶನಿವಾರ, ಮಾರ್ಚ್ 25, 2023
22 °C

ಸಿದ್ದೇಶ್ವರ ಶ್ರೀ ಪ್ರವಚನಕ್ಕೆ ನಾಳೆ ಚಾಲನೆ: ಬಸವಲಿಂಗ ಪಟ್ಟದ್ದೇವರು ಮಾಹಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾಲ್ಕಿ: ‘ಪಟ್ಟಣದಲ್ಲಿ ಗುರುವಾರದಿಂದ (ನ.4) ತಿಂಗಳ ಪರ್ಯಂತ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಆಧ್ಯಾತ್ಮಿಕ ಪ್ರವಚನ ನಡೆಸಿ ಕೊಡಲಿದ್ದು, ಜಿಲ್ಲೆಯ ಸದ್ಭಕ್ತರು ಪ್ರವಚನ ಆಲಿಸಿಬೇಕು’ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಅವರು ಹೇಳಿದರು.

ಪಟ್ಟಣದ ಚನ್ನಬಸವಾಶ್ರಮದಲ್ಲಿ ಪ್ರತಿದಿನ ಬೆಳಿಗ್ಗೆ 6:30 ರಿಂದ 7:30ರವರೆಗೆ ಶ್ರೀಗಳು ಪ್ರವಚನ ನೀಡಲಿದ್ದಾರೆ.

13 ವರ್ಷಗಳ ಬಳಿಕ ಸ್ವಾಮೀಜಿ ಅವರು ಮತ್ತೊಮ್ಮೆ ಇಲ್ಲಿ ಪ್ರವಚನ ನಡೆಸಿಕೊಡುತ್ತಿರುವುದು ನಮ್ಮೆಲ್ಲರ ಸುದೈವ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಪ್ರವಚನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಪ್ರವಚನ ಕಾರ್ಯಕ್ರಮವನ್ನು ಶಾಸಕ ಈಶ್ವರ ಖಂಡ್ರೆ ಉದ್ಘಾಟಿಸಲಿದ್ದು, ಮಾಜಿ ಶಾಸಕ ಪ್ರಕಾಶ ಖಂಡ್ರೆ, ಬಿಜೆಪಿ ಮುಖಂಡ ಡಿ.ಕೆ.ಸಿದ್ರಾಮ ಸೇರಿದಂತೆ ಜಿಲ್ಲೆಯ ಮಠಾಧೀಶರು, ಗಣ್ಯರು ಪಾಲ್ಗೊಳ್ಳಿದ್ದಾರೆ ಎಂದು ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ತಿಳಿಸಿದರು.

ಪ್ರವಚನಕ್ಕೆ ಪ್ರತಿದಿನ ಸುಮಾರು 10 ಸಾವಿರ ಜನ ಹರಿದು ಬರುವ ನಿರೀಕ್ಷೆ ಇದೆ. ಪ್ರವಚನ ಯಶಸ್ವಿಗೆ ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪ್ರವಚನ ಸೇವಾ ಸಮಿತಿ, ಯುವಕರ ತಂಡ ಪ್ರವಚನ ಯಶಸ್ವಿಗೆ ನಿರಂತರವಾಗಿ ದುಡಿಯುತ್ತಿದೆ ಎಂದು ಅವರು ತಿಳಿಸಿದರು.

ಪುರಸಭೆಯ ಅಧ್ಯಕ್ಷ ಬಸವರಾಜ ವಂಕೆ, ಮುಖ್ಯಾಧಿಕಾರಿ ಡಾ.ಶಿವರಾಜ ರಾಠೋಡ್, ಪ್ರವಚನ ಸೇವಾ ಸಮಿತಿಯ ಸದಸ್ಯರಾದ ಪ್ರಕಾಶ ಬಿರಾದಾರ, ಸೋಮನಾಥಪ್ಪ ಅಷ್ಟೂರೆ, ಸುಭಾಷ ಕಾರಾಮುಂಗೆ, ಸಾಗರ ಖಂಡ್ರೆ, ಶಶಿಧರ ಕೋಸಂಬೆ, ಉಮಾಕಾಂತ ವಾರದ್, ಶಿವಾನಂದ ದಾಡಗೆ, ಸಾಗರ ಮಾಲಾನಿ, ಪ್ರಮುಖರಾದ ವಿಜಯಕುಮಾರ ರಾಜಭವನ, ಬಸವರಾಜ ಮರೆ, ರಾಜಶೇಖರ ಬಿರಾದಾರ ಹಾಗೂ ಸಂತೋಷ ಹಡಪದ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು