ಮನುಸ್ಮೃತಿ ಕೃತಿಯ ಪ್ರತಿಕೃತಿ ದಹನ

7
ಸಂವಿಧಾನದ ಪ್ರತಿ ಸುಟ್ಟವರ ಬಂಧನಕ್ಕೆ ಆಗ್ರಹ

ಮನುಸ್ಮೃತಿ ಕೃತಿಯ ಪ್ರತಿಕೃತಿ ದಹನ

Published:
Updated:
Deccan Herald

ಬೀದರ್: ದೇಶದ ಸಂವಿಧಾನದ ಪ್ರತಿಗಳನ್ನು ಸುಟ್ಟು ಹಾಕಿದವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಅಂಬೇಡ್ಕರ್ ವೃತ್ತದಿಂದ ಮೆರವಣಿಗೆಯಲ್ಲಿ ಬಂದು ಜಿಲ್ಲಾಧಿಕಾರಿ ಕಚೇರಿ ಎದುರು ಮನುಸ್ಮೃತಿ ಕೃತಿಯ ಪ್ರತಿಕೃತಿಯನ್ನು ದಹಿಸಿದರು. ಬಳಿಕ ರಾಷ್ಟ್ರಪತಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.

ಸಂವಿಧಾನವು ದೇಶದ ಪ್ರತಿ ನಾಗರಿಕರಿಗೆ ಸಮಾನ ಹಕ್ಕು ನೀಡಿದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಒದಗಿಸಿದೆ. ಪ್ರವರ್ಗ 1ಗೆ ಶೇ 4, ಪ್ರವರ್ಗ 2(ಎ)ಗೆ ಶೇ 15, ಪ್ರವರ್ಗ 2(ಬಿ)ಗೆ ಶೇ 4, ಪ್ರವರ್ಗ 3(ಎ)ಗೆ ಶೇ 4, ಪ್ರವರ್ಗ 3(ಬಿ)ಗೆ ಶೇ 5, ಪರಿಶಿಷ್ಟ ಪಂಗಡಕ್ಕೆ ಶೇ 3, ಪರಿಶಿಷ್ಟ ಜಾತಿಗೆ ಶೇ 15 ಹೀಗೆ 319 ಜಾತಿಗಳಿಗೆ ಮೀಸಲು ಸೌಲಭ್ಯ ಕಲ್ಪಿಸಿದೆ ಎಂದು ಹೇಳಿದರು.

ಸಂವಿಧಾನದ ಮೀಸಲಾತಿ ಲಾಭ ಪಡೆದುಕೊಂಡವರೇ ಈಗ ಮೀಸಲಾತಿ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಇಬ್ಬಗೆಯ ನೀತಿ ಅನುಸರಿಸುತ್ತಿದ್ದಾರೆ. ಮೀಸಲಾತಿ ಪ್ರಯೋಜನ ಪಡೆದವರಿಗೆ ಸಂವಿಧಾನದ ಕುರಿತು ಮಾತನಾಡುವ ಯಾವುದೇ ನೈತಿಕ ಹಕ್ಕು ಇಲ್ಲ ಎಂದು ದೂರಿದರು.

ಸುಪ್ರೀಂಕೋರ್ಟ್ ಆದೇಶ ಅನುಸಾರ ದೇಶದಲ್ಲಿ ಶೇ 50 ರಷ್ಟು ಮಾತ್ರ ಮೀಸಲಾತಿ ಇದೆ. ಇನ್ನುಳಿದ ಶೇ 50 ರಷ್ಟನ್ನು ಉಚ್ಚ ಸಮುದಾಯದವರೇ ಕಬಳಿಸುತ್ತಿದ್ದಾರೆ. ಸಂವಿಧಾನ ಒಂದು ಸಮುದಾಯ ಅಥವಾ ಜಾತಿಯ ಸ್ವತ್ತು ಅಲ್ಲ. ಇಡೀ ಭಾರತದ ಆಸ್ತಿ ಎಂದು ಹೇಳಿದರು.

2016ರ ಆಗಸ್ಟ್ 9 ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಮನುವಾದಿ ಶ್ರೀನಿವಾಸ ಪಾಂಡ್ಯ ನೇತೃತ್ವದಲ್ಲಿ ಸಂವಿಧಾನದ ಪ್ರತಿಗಳನ್ನು ಸುಡಲಾಗಿದೆ. ಸಂವಿಧಾನ, ಡಾ. ಅಂಬೇಡ್ಕರ್ ಹಾಗೂ ಎಸ್.ಸಿ.,ಎಸ್.ಟಿ. ಕಾಯ್ದೆಗಳ ವಿರುದ್ಧ ಘೋಷಣೆ ಕೂಗಲಾಗಿದೆ ಎಂದು ಆಪಾದಿಸಿದರು.

ಸಂವಿಧಾನಕ್ಕೆ ಅಪಮಾನ ಮಾಡಿದವರ ವಿರುದ್ಧ ದೇಶ ದ್ರೋಹದ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ, ಜಿಲ್ಲಾ ಸಂಘಟನಾ ಸಂಚಾಲಕರಾದ ಅರುಣ ಪಟೇಲ್, ಮನೋಹರ ಹೊಸಮನಿ, ತಾಲ್ಲೂಕು ಸಂಘಟನಾ ಸಂಚಾಲಕ ಪ್ರಭು ಬಸಂತಪುರ, ಶಿವರಾಜ ತಡಪಳ್ಳಿ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !