ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಕ್ಷಣದಲ್ಲಿ ಭಾರತೀಯತೆ ಇರಲಿ: ಪ್ರೊ. ಬಿ.ಎಸ್. ಬಿರಾದಾರ

Published 24 ಜೂನ್ 2024, 16:05 IST
Last Updated 24 ಜೂನ್ 2024, 16:05 IST
ಅಕ್ಷರ ಗಾತ್ರ

ಬೀದರ್: ‘ಶಿಕ್ಷಣದಲ್ಲಿ ಭಾರತೀಯತೆ ಇರಬೇಕು. ಭಾರತೀಯತೆ ಉಳಿವಿಗೆ ಭಾರತೀಯತೆ ಆಧರಿತ ಶಿಕ್ಷಣ ಅಗತ್ಯ’ ಎಂದು ಬೀದರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಎಸ್. ಬಿರಾದಾರ ಅಭಿಪ್ರಾಯಪಟ್ಟರು.

ನಗರದ ಸರಸ್ವತಿ ವಿದ್ಯಾಮಂದಿರದಲ್ಲಿ ಭಾನುವಾರ ನಡೆದ ಭಾರತೀಯ ಶಿಕ್ಷಣ ಮಂಡಲದ ಬೀದರ್ ಜಿಲ್ಲಾ ಘಟಕದ ಸಭೆಯಲ್ಲಿ ಮಾತನಾಡಿದ ಅವರು, ಶಿಕ್ಷಣದಲ್ಲಿ ಕೌಶಲಕ್ಕೂ ಪ್ರಾಮುಖ್ಯ ನೀಡಬೇಕಿದೆ ಎಂದು ತಿಳಿಸಿದರು.

ನವದೆಹಲಿಯ ಎನ್.ಸಿ.ಟಿ.ಇ. ದಕ್ಷಿಣ ವಲಯ ಅಧ್ಯಕ್ಷೆ ಪ್ರೊ. ಮೀನಾ ಚಂದಾವರಕರ್ ಮಾತನಾಡಿ, ಶಿಕ್ಷಣ, ಗೃಹ ಕೈಗಾರಿಕೆ ಕೌಶಲವನ್ನೂ ಬೆಳೆಸಬೇಕಿದೆ. ಈ ಹಿನ್ನೆಲೆಯಲ್ಲಿ ಮಂಡಲವು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುವಾಗ ಸೂಕ್ತ ಸಲಹೆಗಳನ್ನು ನೀಡಿದೆ ಎಂದು ಹೇಳಿದರು.

ಭಾರತೀಯ ಶಿಕ್ಷಣ ಮಂಡಲದ ಕರ್ನಾಟಕ ಉತ್ತರ ಪ್ರಾಂತ ಸಹ ಕಾರ್ಯದರ್ಶಿಗಳಾದ ಸಿದ್ದು ಮದರಕಂಡಿ, ಪಲ್ಲವಿ ಪಾಟೀಲ, ಪ್ರಮುಖರಾದ ಹೇಮಂತಕುಮಾರ ಕಪ್ಪಾಳಿ, ಶೈಕ್ಷಣಿಕ ಪ್ರಕೋಷ್ಠದ ಪ್ರಮುಖ ವೀರಯ್ಯ ಮುತ್ತಿನಮಠ, ಪ್ರಾಂತ ಮಹಿಳಾ ಪ್ರಕಲ್ಪದ ಪ್ರಮುಖರಾದ ಪ್ರತಿಭಾ ಚಾಮಾ, ಮಂಡಲದ ಜಿಲ್ಲಾ ಘಟಕದ ಕೋಶ ಪ್ರಮುಖರಾದ ರಾಧಾ ಬಿರಾದಾರ, ಶಾಲಾ ಪ್ರಕಲ್ಪದ ಪ್ರಮುಖ ಬಾಲಾಜಿ ರಾಠೋಡ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT