ಬೀದರ್: ‘ಯುವ ಜನತೆಯಲ್ಲಿ ಕುಟುಂಬ ಯೋಜನೆಯ ಅರಿವು ಬಹಳ ಅತ್ಯಗತ್ಯ’ ಎಂದು ಭಾರತೀಯ ಕುಟುಂಬ ಯೋಜನಾ ಸಂಘದ (ಎಫ್ಪಿಎಐ) ಸಂಸ್ಥೆಯ ಉಪಾಧ್ಯಕ್ಷೆ ಡಾ. ಸವಿತಾ ಚಾಕೋತೆ ತಿಳಿಸಿದರು.

ಎಫ್ಪಿಎಐ ಬೀದರ್ ಶಾಖೆ, ಕೇಂದ್ರ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯದ ‘ಮೇರಾ ಯುವ ಭಾರತ್ ಸಂಸ್ಥೆ’ ಸಹಯೋಗದಲ್ಲಿ ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಮತ್ತು ಆಶಾ ಕಾರ್ಯಕರ್ತೆಯರಿಗೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜನಸಂಖ್ಯೆ ನಿಯಂತ್ರಣದಲ್ಲಿ ಯುವಜನತೆಯ ಪಾತ್ರ ಮಹತ್ವದ್ದಾಗಿದೆ. ಯುವ ಪೀಳಿಗೆ ಬೆಳೆಯುತ್ತಿರುವ ಜನಸಂಖ್ಯೆ, ಅದರಿಂದಾಗುವ ಪರಿಣಾಮಗಳ ಬಗ್ಗೆ ಅರಿತುಕೊಳ್ಳಬೇಕು. ಯುವಜನತೆ ಜನಸಂಖ್ಯೆ ಹೆಚ್ಚಳದ ಬಗ್ಗೆ ಜಾಗೃತರಾಗಬೇಕು. ಕುಟುಂಬ ಯೋಜನೆಯ ಬಗ್ಗೆ ಅರಿವು ಮೂಡಿಸಬೇಕು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಎಲ್ಲರೂ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದರು.

ಬ್ರಿಮ್ಸ್ ಮನೋರೋಗ ತಜ್ಞೆ ಡಾ. ಶ್ವೇತಾ ಕುಣಿಕೇರಿ ಮಾತನಾಡಿ, ಯುವಜನಾಂಗ ಮಾದಕ ವಸ್ತುಗಳು, ದುಶ್ಚಟಗಳಿಗೆ ಬಲಿಯಾಗುತ್ತಿದೆ. ಯುವಜನತೆ ಭವಿಷ್ಯದಲ್ಲಿ ಹೆಮ್ಮರವಾಗಿ ಬೆಳೆಯುವ ಸಿರಿ- ಸಂಪತ್ತು. ಯುವಜನತೆ ಧನಾತ್ಮಕ ಚಿಂತನೆ, ಸದೃಢ ಮನೋಭಾವ, ಒಳ್ಳೆಯ ಸಂಸ್ಕೃತಿ ಬೆಳೆಸಿಕೊಂಡು ಒಳ್ಳೆಯ ನಾಗರಿಕರಾಗಿ ಬದುಕಬೇಕು ಎಂದು ಹೇಳಿದರು.

ಎಫ್ಪಿಎಐ ಸಂಸ್ಥೆಯ ಶಾಖಾ ವ್ಯವಸ್ಥಾಪಕ ಶ್ರೀನಿವಾಸ ಬಿರಾದಾರ ಮಾತನಾಡಿ, ಹೆಚ್ಚುತ್ತಿರುವ ಜನಸಂಖ್ಯೆಯಿಂದ ಅಸಮತೋಲನಕ್ಕೆ ಕಾರಣವಾಗಿ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದರು.

‘ಮೇರಾ ಯುವ ಭಾರತ್’ ಸಂಸ್ಥೆ ಯುವಜನ ಅಧಿಕಾರಿ ಮಯೂರಕುಮಾರ, ‘ರೈಸಿಂಗ್ ಹ್ಯಾಂಡ್’ ಸಂಸ್ಥೆ ಅಧ್ಯಕ್ಷ ಸತೀಶಕುಮಾರ ಬೆಳಕೋಟೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.