ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ಮಾದರಿ ತಯಾರಿಕೆ ಸ್ಪರ್ಧೆಯಲ್ಲಿ ಬುರ್ಲಿ ಪ್ರಥಮ

Last Updated 8 ಅಕ್ಟೋಬರ್ 2020, 16:07 IST
ಅಕ್ಷರ ಗಾತ್ರ

ಬೀದರ್: ಅಗಸ್ತ್ಯ ಕೋರ್ ವಿಜ್ಞಾನ ಚಟುವಟಿಕಾ ಕೇಂದ್ರದ ವತಿಯಿಂದ ಆಚಾರ್ಯ-2020 ರಾಜ್ಯ ಮಟ್ಟದ ವಿಜ್ಞಾನ ಮಾದರಿ ತಯಾರಿಕೆ ಸ್ಪರ್ಧೆ ಇಲ್ಲಿನ ವಿಜ್ಞಾನ ಕೇಂದ್ರದಲ್ಲಿ ಈಚೆಗೆ ನಡೆಯಿತು.

ಪ್ರೌಢ ಶಾಲಾ ವಿಭಾಗ(ಸಾಮಾನ್ಯ)ದಲ್ಲಿ ವಿಜಯಪುರದ ಬಂಜಾರಾ ಪ್ರೌಢ ಶಾಲೆಯ ಎಸ್.ವಿ. ಬುರ್ಲಿ (‍ಪ್ರಥಮ), ಬೆಳಗಾವಿಯ ಚಿಕ್ಕದಿನ್ನಿಕೊಪ್ಪದ ಶಶಾಂಕ ವಿ.ಬಿ.(ದ್ವಿತೀಯ), ಬಾಗಲಕೋಟೆ ಜಿಲ್ಲೆ ಇದ್ದಲಗಿಯ ಶರಣಬಸವೇಶ್ವರ ಪ್ರೌಢಶಾಲೆಯ ಪ್ರಶಾಂತ ಪಟ್ಟದಕಲ್ಲು (ತೃತೀಯ) ಬಹುಮಾನ ಪಡೆದರು.

ಪ್ರೌಢಶಾಲಾ ವಿಭಾಗ(ಸಂಶೋಧಾನ್ಮಕ)ದಲ್ಲಿ ಹುಬ್ಬಳ್ಳಿ ತಾಲ್ಲೂಕಿನ ಬಿಡನಾಳದ ಆರ್.ಕೆ. ಪಾಟೀಲ ಕೆಪಿಎಸ್‌ನ ಸುವರ್ಣ ಗುಡ್ಡದಮಠ (ಪ್ರಥಮ), ಹಾಸನ ಜಿಲ್ಲೆ ಕೆಂಬಳದ ಸರ್ಕಾರಿ ಪ್ರೌಢ ಶಾಲೆಯ ಸೋಮೇಶ ಆರಾಧ್ಯ (ತೃತೀಯ) ಬಹುಮಾನ ಗೆದ್ದರು.

ಪ್ರಾಥಮಿಕ ಶಾಲಾ ವಿಭಾಗ (ಸಾಮಾನ್ಯ)ದಲ್ಲಿ ಕೊಟನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುನೀರ್‌ ಪಟೇಲ್(ಪ್ರಥಮ,) ಹುಮನಾಬಾದ್‌ ತಾಲ್ಲೂಕಿನ ಕಂದಗೂಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುದರ್ಶನ ವಿಶ್ವಕರ್ಮ (ದ್ವಿತೀಯ) ಬಹುಮಾನ ಪಡೆದರು.

ಪ್ರಾಥಮಿಕ ಶಾಲಾ ವಿಭಾಗ (ಸಂಶೋಧಾನ್ಮಕ)ದಲ್ಲಿ ಶಿವಮೊಗ್ಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸರ್ವಮಂಗಳ (ಪ್ರಥಮ), ವಿಜಯಪುರ ಜಿಲ್ಲೆ ಅರಕೇರಿಯ ಅಶ್ವಿನಿ ಕುಲಕರ್ಣಿ (ದ್ವಿತೀಯ) ಬಹುಮಾನ ಗೆದ್ದುಕೊಂಡರು. ರಾಜ್ಯದ ವಿವಿಧ ಜಿಲ್ಲೆಗಳಿಂದ 250 ಮಾದರಿಗಳು ಬಂದಿದ್ದವು.

ವಿಧಾನ ಪರಿಷತ್‌ ಸದಸ್ಯ ಅರುಣಕುಮಾರ ಶಾಹಪುರ, ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನದ ಚೇರಮನ್ ರಾಮಜಿ ರಾಘವನ್, ಬೀದರ್‌ನ ಕೋರ್ ವಿಜ್ಞಾನ ಚಟುವಟಿಕಾ ಕೇಂದ್ರದ ಬಾಬುರಾವ್, ಎನ್.ಎಸ್. ಬಾಗಲಕೋಟೆಯ ಸಂತೋಷಕುಮಾರ ಇದ್ದರು. ಗೀತಾ ಪಾಟೀಲ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT