ಧನ್ನೂರ ಠಾಣೆಯ ಪಿಎಸ್‌ಐ ವರ್ಗಾವಣೆ
ಭಾಲ್ಕಿ ತಾಲ್ಲೂಕಿನ ಧನ್ನೂರ (ಎಚ್) ಪೊಲೀಸ್ ಠಾಣೆಯ ಪಿಎಸ್‌ಐ ವಿಶ್ವರಾಧ್ಯ ಅವರನ್ನು ಮಂಗಳವಾರ (ಡಿ.31) ವರ್ಗಾವಣೆ ಮಾಡಲಾಗಿದೆ. ಧನ್ನೂರ ಠಾಣೆಯಿಂದ ಕಲಬುರಗಿ ವಲಯ ಐ.ಜಿ ಕಚೇರಿಗೆ ಎತ್ತಂಗಡಿ ಮಾಡಲಾಗಿದ್ದು, ತಕ್ಷಣವೇ ಕಲಬುರಗಿಯಲ್ಲಿ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. ಸಚಿನ್ ಪಾಂಚಾಳ್ ಅವರ ಸಹೋದರಿಯರು ಧನ್ನೂರ ಠಾಣೆಗೆ ದೂರು ಕೊಡಲು ಹೋದಾಗ ವಿಶ್ವರಾಧ್ಯ ಅವರು ಅದನ್ನು ಸ್ವೀಕರಿಸಿ ಎಫ್‌ಐಆರ್ ದಾಖಲಿಸಿರಲಿಲ್ಲ. ‘ಘಟನೆ ಸಂಬಂಧ ಈಗಾಗಲೇ ಬೀದರ್‌ನ ಗಾಂಧಿಗಂಜ್ ಪೊಲೀಸ್ ಠಾಣೆಯ ಇಬ್ಬರು ಹೆಡ್ ಕಾನ್‌ಸ್ಟೆಬಲ್‌ಗಳನ್ನು ಅಮಾನತುಗೊಳಿಸಲಾಗಿದೆ.