ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶ ಉತ್ಸವ: ವೈರಾಣು ಎಚ್ಚರ ವಹಿಸಿ: ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಸಲಹೆ

ಶಾಂತಿ ಪಾಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಸಲಹೆ
Last Updated 8 ಸೆಪ್ಟೆಂಬರ್ 2021, 16:16 IST
ಅಕ್ಷರ ಗಾತ್ರ

ಬೀದರ್: ಕೋವಿಡ್ ಹಾಗೂ ಇತರ ವೈರಾಣುಗಳು ಹರಡುವ ಸಾಧ್ಯತೆ ಕಾರಣ ಗಣೇಶ ಉತ್ಸವ ಸಂದರ್ಭದಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಸಲಹೆ ಮಾಡಿದರು.

ಗಣೇಶ ಉತ್ಸವ ಪ್ರಯುಕ್ತ ನಗರದ ಬೀದರ್‌ನ ಪೊಲೀಸ್‌ ಮುಖ್ಯಾಲಯದ ಆವರಣದಲ್ಲಿ ಬುಧವಾರ ನಡೆದ ಶಾಂತಿ ಪಾಲನಾ ಸಭೆಯಲ್ಲಿ ಅವರು ಮಾತನಾಡಿದರು.

ನೆರೆಯ ಕೇರಳದಲ್ಲಿ ನಿಫಾ ವೈರಾಣು ಕಾಣಿಸಿಕೊಂಡಿದೆ. ಮನುಷ್ಯನ ಜೀವಕ್ಕೆ ಮಾರಕವಾದ ಹೊಸ ಹೊಸ ವೈರಾಣುಗಳು ದಿನೇ ದಿನೇ ಪತ್ತೆಯಾಗುತ್ತಿವೆ ಎಂದು ಹೇಳಿದರು.

ಗಣೇಶ ಉತ್ಸವ ಸಂದರ್ಭದಲ್ಲಿ ಮಾಸ್ಕ್ ಧರಿಸುವುದು, ಸುರಕ್ಷಿತ ಅಂತರ ಕಾಪಾಡುವುದು ಸೇರಿದಂತೆ ಎಲ್ಲ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಉತ್ಸವದ ಯಶಸ್ವಿ ಆಚರಣೆಗೆ ಜಿಲ್ಲಾ ಆಡಳಿತ ಹಾಗೂ ಪೊಲೀಸ್ ಇಲಾಖೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಗಣೇಶ ಉತ್ಸವ ವೇಳೆ ಸೂಕ್ತ ಪೊಲೀಸ್ ಬಂದೋಬಸ್ತ್‍ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್. ತಿಳಿಸಿದರು.

ಏನೇ ಘಟನೆ ಸಂಭವಿಸಿದರೂ ಪತ್ತೆಗೆ ಅನುಕೂಲವಾಗುವಂತೆ ಗಣೇಶ ಮಂಟಪಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಹೇಳಿದರು.

ಸ್ಥಳೀಯ ಆಡಳಿತದ ಪರವಾನಗಿ ಪಡೆದು, ಬಯಲು ಪ್ರದೇಶದಲ್ಲಿ ಮೂರ್ತಿ ಪ್ರತಿಷ್ಠಾಪಿಸಬೇಕು. ಐದು ದಿನ ಮಾತ್ರ ಉತ್ಸವ ಆಚರಿಸಬೇಕು. ಪ್ರತಿಷ್ಠಾಪನೆ, ವಿಸರ್ಜನೆ ಮೆರವಣಿಗೆ, ಸಾಂಸ್ಕøತಿಕ ಕಾರ್ಯಕ್ರಮ, ಡಿಜೆ ಬಳಕೆಗೆ ಅವಕಾಶ ಇಲ್ಲ. ಆಯೋಜಕರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ವರದಿ ಸಲ್ಲಿಸಬೇಕು ಎಂದು ತಿಳಿಸಿದರು.

ಹಬ್ಬದ ವೇಳೆ ಅವಘಡಗಳು ಸಂಭವಿಸುವ ಸಾಧ್ಯತೆಗಳು ಇರುತ್ತವೆ. ಗಣೇಶ ಮಂಡಳಿಗಳು ಗಣೇಶ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಸಂದರ್ಭದಲ್ಲಿ ಸ್ವಯಂ ಸೇವಕರನ್ನು ನೇಮಿಸಬೇಕು ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ್ ಎಂ. ಬ್ಯಾಕೋಡ್ ಹೇಳಿದರು.

ಉತ್ಸವದ ಸಂದರ್ಭದಲ್ಲಿ ನಗರ ಸೌಂದರ್ಯೀಕರಣ ಹಾಗೂ ಶುಚಿತ್ವಕ್ಕೆ ಒತ್ತು ಕೊಡಲಾಗುವುದು ಎಂದು ನಗರಸಭೆ ಆಯುಕ್ತ ರವೀಂದ್ರನಾಥ ಅಂಗಡಿ ತಿಳಿಸಿದರು.

ಪ್ರೊಬೆಷ್‍ನರಿ ಐಎಎಸ್ ಅಧಿಕಾರಿ ಕೀರ್ತನಾ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ, ಗಣೇಶ ಮಹಾಮಂಡಳ ಅಧ್ಯಕ್ಷ ಚಂದ್ರಶೇಖರ ಪಾಟೀಲ, ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ, ಮುಖಂಡರಾದ ಸೂರ್ಯಕಾಂತ ಶೆಟಕಾರ್, ಇರ್ಷಾದ್ ಅಲಿ ಪೈಲ್ವಾನ್ ಮಾತನಾಡಿದರು.

ಪ್ರಮುಖರಾದ ನಂದಕಿಶೋರ ವರ್ಮಾ, ಶಾಹೀನ್ ಪಟೇಲ್ ಇದ್ದರು. ಸಿಪಿಐ ಮಲ್ಲಮ್ಮ ಚೌಬೆ ನಿರೂಪಿಸಿದರು. ಡಿವೈಎಸ್‍ಪಿ ಕೆ.ಎಂ. ಸತೀಶ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT