ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರಂಜಾ ಸಂತ್ರಸ್ತರ ಬೇಡಿಕೆಗೆ ಶೀಘ್ರ ಸ್ಪಂದಿಸಲಿ: ಎಚ್. ಹನುಮಂತಪ್ಪ

Published 9 ಜನವರಿ 2024, 15:31 IST
Last Updated 9 ಜನವರಿ 2024, 15:31 IST
ಅಕ್ಷರ ಗಾತ್ರ

ಬೀದರ್‌: ‘ಕಾರಂಜಾ ಜಲಾಶಯ ಯೋಜನೆಯಲ್ಲಿ ಜಮೀನು ಕಳೆದುಕೊಂಡಿರುವ ಸಂತ್ರಸ್ತರ ಬೇಡಿಕೆಗಳಿಗೆ ಶೀಘ್ರ ಸ್ಪಂದಿಸಬೇಕು. ಚರ್ಚೆ, ಸಭೆಗಳ ನೆಪದಲ್ಲಿ ಪದೇ ಪದೇ ಮುಂದೂಡುವುದು ಸರಿಯಲ್ಲ’ ಎಂದು ಪಾರಾ ಮಿಲಿಟರಿ ವೆಲ್‌ಫೇರ್‌ ಅಸೋಸಿಯೇಶನ್‌ ಜಿಲ್ಲಾಧ್ಯಕ್ಷ್ಯ ಎಚ್. ಹನುಮಂತಪ್ಪ ಆಗ್ರಹಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಮೀಪ ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯಿಂದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಮಾತನಾಡಿದರು. 

ದೇಶ ಕಾಯುವ ಸೈನಿಕರು ಹಾಗೂ ನಾಡಿಗೆ ಅನ್ನ ನೀಡುವ ರೈತರನ್ನು ಕಡೆಗಣಿಸಿದ ಯಾವ ಸರ್ಕಾರವೂ ಇರುವುದಿಲ್ಲ. ರೈತರು ದೇಶದ ಬೆನ್ನೆಲುಬು ಎಂದು ಭಾಷಣ ಬಿಗಿಯುವುದನ್ನು ಬಿಟ್ಟು 560 ದಿನಗಳಿಂದ ತಮ್ಮ ಜಮೀನಿನ ವೈಜ್ಞಾನಿಕ ಪರಿಹಾರಕ್ಕಾಗಿ ಆಹೋರಾತ್ರಿ ಧರಣಿ ನಡೆಸುತ್ತಿರುವ ಕಾರಂಜಾ ಸಂತ್ರಸ್ತರಿಗೆ ಶೀಘ್ರದಲ್ಲಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಮಹಾರುದ್ರಪ್ಪ ಆಣದೂರೆ, ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ, ಪದ್ಮಾನಂದ, ಕಾಶಿನಾಥ್, ವೀರಭದ್ರಪ್ಪ ಉಪ್ಪಿನ, ಚಂದ್ರಶೇಖರ್ ಪಿ., ನರಸಿಂಗರಾವ್ ತಾಜ್ಲಾಪೂರ, ಶಿವಕುಮಾರ, ಈರಣ್ಣ ಮರಗುತ್ತಿ, ವಿಶ್ವನಾಥ, ಶಂಕರೆಪ್ಪಾ, ಅಣ್ಣೆಪ್ಪ, ಚಂದ್ರಶೇಖರ್, ಸುಭಾಷ್, ಶಿವರಾಜ ನಿಡವಂಚಿ ಹಾಜರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT