ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ: 1671 ಅಭ್ಯರ್ಥಿಗಳು ಕಣದಲ್ಲಿ

ಗ್ರಾ.ಪಂ ಚುನಾವಣೆ: 238 ಮತಗಟ್ಟೆಗಳಲ್ಲಿ ಮತದಾನಕ್ಕೆ ಸಿದ್ಧತೆ
Last Updated 20 ಡಿಸೆಂಬರ್ 2020, 4:42 IST
ಅಕ್ಷರ ಗಾತ್ರ

ಬಸವಕಲ್ಯಾಣ: ತಾಲ್ಲೂಕಿನ 31 ಗ್ರಾಮ ಪಂಚಾಯಿತಿಗಳ 578 ಸ್ಥಾನಗಳಿಗೆ ಚುನಾವಣೆ ಘೊಷಣೆಯಾಗಿದ್ದು, ಅವುಗಳಲ್ಲಿ 33 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದರಿಂದ ಇನ್ನುಳಿದ 544 ಸ್ಥಾನಗಳಿಗೆ ಡಿಸೆಂಬರ್ 22 ಕ್ಕೆ ಮತದಾನ ನಡೆಯಲಿದೆಒಟ್ಟು 1671 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹುಲಸೂರ ತಾಲ್ಲೂಕಿನ ಹುಲಸೂರ, ತೊಗಲೂರ, ಗೋರಟಾ(ಬಿ) ಪಂಚಾಯಿತಿಗಳ ಅಧಿಕಾರಾವಧಿ ಪೂರ್ಣಗೊಂಡಿಲ್ಲ. ಆದ್ದರಿಂದ ಚುನಾವಣೆ ನಡೆಯುತ್ತಿಲ್ಲ.

ಇನ್ನುಳಿದ 4 ಗ್ರಾಮ ಪಂಚಾಯಿತಿಗಳ 77 ಸ್ಥಾನಗಳಿಗೆ 236 ಜನರು ನಾಮಪತ್ರ ಸಲ್ಲಿಸಿದ್ದರು. ಅವರಲ್ಲಿ 5 ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದ್ದು, 72 ಸ್ಥಾನಗಳಿಗೆ 204 ಜನರು ಕಣದಲ್ಲಿದ್ದಾರೆ. ಮತದಾನಕ್ಕಾಗಿ ಒಟ್ಟು 238 ಮತಗಟ್ಟೆಗಳಲ್ಲಿ ಸಿದ್ಧತೆ ಕೈಗೊಳ್ಳಲಾಗಿದೆ. ಇಲ್ಲಿನ ಬಸವೇಶ್ವರ ರಥ ಮೈದಾನದಲ್ಲಿನ ಪ್ರೌಢಶಾಲೆಯಲ್ಲಿ ಮತ ಎಣಿಕೆ ನಡೆಯುವುದು.

ಕಣದಲ್ಲಿರುವ ಅಭ್ಯರ್ಥಿಗಳ ವಿವರ ಹೀಗಿದೆ (ಆವರಣದಲ್ಲಿರುವುದು ಒಟ್ಟು ಸ್ಥಾನಗಳು): ಬೆಟಬಾಲ್ಕುಂದಾ- 57 (18), ಧನ್ನೂರ- 41(13), ನಾರಾಯಣಪುರ- 58 (26), ಪ್ರತಾಪುರ- 66 (21), ಮೋರಖಂಡಿ- 61 (19), ರಾಜೇಶ್ವರ- 127 (34), ತಡೋಳಾ- 53 (16), ಇಸ್ಲಾಂಪುರ- 49 (15), ಯರಬಾಗ- 53 (15), ನಿರ್ಗುಡಿ- 47 (16), ಯರಂಡಗಿ- 67 (21), ಖೇರ್ಡಾ(ಬಿ)- 61 (20), ರಾಜೋಳಾ-37 (14), ಮಂಠಾಳ- 90 (30), ಸಸ್ತಾಪುರ- 63 (18), ಆಲಗೂಡ-39 (15), ಗುಂಡೂರ- 43(16), ಘೋಟಾಳ-58 (22), ಚಂಡಕಾಪುರ- 56 (20), ಮುಡಬಿ- 58 (26), ಏಕಲೂರ- 30 (14), ಹಾರಕೂಡ- 50 (25), ಕಲಖೋರಾ- 40 (14), ಕೊಹಿನೂರ- 59 (20), ಬಟಗೇರಾ- 60 (18), ಲಾಡವಂತಿ- 34 (13), ಉಜಳಂಬ- 60 (23), ಭೋಸಗಾ- 58 (19), ಚಿಕ್ಕನಾಗಾಂವ- 34 (14), ಹಣಮಂತವಾಡಿ- 15 (8), ಹುಲಸೂರ ತಾಲ್ಲೂಕಿನ ಗಡಿಗೌಡಗಾಂವ- 35 (14), ಮುಚಳಂಬ- 48 (22), ಮಿರಖಲ್- 68 (21), ಬೇಲೂರ- 53 (20) ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಅವಿರೋಧವಾಗಿ ಆಯ್ಕೆಗೊಂಡವರ ವಿವರ: ನಾರಾಯಣಪುರ- 6, ಹಾರಕೂಡ- 5, ಮುಡಬಿ- 4, ಬೆಟಬಾಲ್ಕುಂದಾ- 4, ಪ್ರತಾಪುರ- 1, ನಿರ್ಗುಡಿ- 1, ಖೇರ್ಡಾ(ಬಿ)- 1, ರಾಜೋಳಾ- 1, ಮಂಠಾಳ- 2, ಘೋಟಾಳ- 2, ಉಜಳಂಬ- 2, ಭೋಸಗಾ- 2, ಚಿಕ್ಕನಾಗಾಂವ- 1, ಮುಚಳಂಬ- 1, ಗಡಿಗೌಡಗಾಂವ- 1 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT