ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್ | ಈಜಿನಲ್ಲಿ ಸಾಧನೆ: ಅರ್ಣವ್‌ ಸನ್ಮಾನ

Published : 30 ಸೆಪ್ಟೆಂಬರ್ 2024, 16:15 IST
Last Updated : 30 ಸೆಪ್ಟೆಂಬರ್ 2024, 16:15 IST
ಫಾಲೋ ಮಾಡಿ
Comments

ಬೀದರ್: ಕಲಬುರಗಿ ವಿಭಾಗಮಟ್ಟದ ದಸರಾ ಸಿ.ಎಂ. ಕಪ್ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ಮೂರು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಗೆದ್ದಿರುವ ನಗರದ ಗುರುನಾನಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಅರ್ಣವ್‌ ಬಿ.ವಿ. ಶಿವಪ್ರಕಾಶ್ ಅವರನ್ನು ಶಾಲೆಯಲ್ಲಿ ಸೋಮವಾರ ಸನ್ಮಾನಿಸಲಾಯಿತು.

ಗುರುನಾನಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ರೇಷ್ಮಾ ಕೌರ್ ಶಾಲು ಹೊದಿಸಿ, ಪುಷ್ಪ ಗುಚ್ಛ ನೀಡಿ ಗೌರವಿಸಿದರು. ಅರ್ಣವ್‌ 100 ಮೀ, 200 ಮೀ ಹಾಗೂ 400 ಮೀ. ಫ್ರೀ ಸ್ಟೈಲ್ ಈಜು ಸ್ಪರ್ಧೆಯಲ್ಲಿ ಚಿನ್ನ ಹಾಗೂ ಗುಂಪು ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿರುವುದು ಸಂತಸ ಉಂಟು ಮಾಡಿದೆ ಎಂದು ತಿಳಿಸಿದರು.

ಪ್ರಾಚಾರ್ಯೆ ನಳಿನಿ ಡಿ.ಜಿ., ಮುಖ್ಯಶಿಕ್ಷಕಿ ಆರೀಫ್ ಹಾದಿ, ಶೇಖ್ ಅಮಜದ್ ಅಲಿ, ಹನುಮಾನ್, ಭಾಗ್ಯಶಾಲಿ, ಡೀನಾ, ಇನಾಯತ್ ಅಲಿ, ದೇವಿದಾಸ್ ರಾಠೋಡ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT