ಬಸವಕಲ್ಯಾಣ (ಬೀದರ್ ಜಿಲ್ಲೆ): ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿನ ಮುಡಬಿ ಕ್ರಾಸ್ ಬಳಿ ಆರೋಗ್ಯಕ್ಕೆ ಹಾನಿಕಾರಕ ಪದಾರ್ಥ ಸೇರಿಸಿ ಸಿದ್ಧಪಡಿಸಿದ್ದ ₹1.27 ಕೋಟಿ ಮೌಲ್ಯದ ಗುಟ್ಕಾ ಹಾಗೂ ತಂಬಾಕು ಪದಾರ್ಥಗಳನ್ನು ನಗರ ಠಾಣೆ ಪೊಲೀಸರು ಗುರುವಾರ ವಶಪಡಿಸಿಕೊಂಡಿದ್ದಾರೆ.

ಪಾನ್‌ಮಸಾಲಾ ಹಾಗೂ ತಂಬಾಕಿನಿಂದ ತಯಾರಿಸಿದ ಗುಟ್ಕಾ ಇತ್ಯಾದಿಗಳ ಪೌಚ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಅಬ್ದುಲ್ ವಹೀದ್, ಕುದರತ್‌ವುಲ್ಲಾ, ನಸೀರೊದ್ದೀನ್, ಅಜೀಮ್ ಎಂಬವರು ಗುಟ್ಕಾ ತಯಾರಿಕೆಯಲ್ಲಿ ಭಾಗಿಯಾಗಿದ್ದರು. ಒಬ್ಬನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ರೌಡಿ ನಿಗ್ರಹ ದಳದ ಸಬ್ಇನ್‌ಸ್ಪೆಕ್ಟರ್ ಅಂಬರೀಶ ವಾಗ್ಮೋಡೆ ನೇತೃತ್ವದಲ್ಲಿ ದಾಳಿ ನಡೆದಿದೆ. ಸಿಬ್ಬಂದಿಯಾದ ಯಶ್ರಬ್, ರಾಜಕುಮಾರ, ದಯಾನಂದ, ಸೀಮನ್, ಪುಂಡಲೀಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.