ಗುರುವಾರ , ಆಗಸ್ಟ್ 5, 2021
26 °C

ಜ್ಞಾನಸುಧಾ ಕಾಲೇಜು: 19 ಅಗ್ರಶ್ರೇಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇಲ್ಲಿಯ ಜ್ಞಾನಸುಧಾ ಪದವಿಪೂರ್ವ ವಿಜ್ಞಾನ ಕಾಲೇಜಿನ 19 ವಿದ್ಯಾರ್ಥಿಗಳು ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಪರೀಕ್ಷೆಗೆ ಹಾಜರಾದ 73 ವಿದ್ಯಾರ್ಥಿಗಳಲ್ಲಿ 68 ವಿದ್ಯಾರ್ಥಿಗಳು ಪಾಸಾಗಿದ್ದು, ಕಾಲೇಜಿಗೆ ಶೇ 93 ರಷ್ಟು ಫಲಿತಾಂಶ ಲಭಿಸಿದೆ.

44 ವಿದ್ಯಾರ್ಥಿಗಳು ಪ್ರಥಮ ದರ್ಜೆ, 4 ದ್ವಿತೀಯ ದರ್ಜೆ ಹಾಗೂ ಓರ್ವ ವಿದ್ಯಾರ್ಥಿ ತೃತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

ಕಾಲೇಜಿನ ಐಶ್ವರ್ಯ ಶಿವಾಜಿ, ಅಭಿಷೇಕ ದತ್ತಾತ್ರಿ ಹಾಗೂ ಶಿವಾನಿ ಗಣಿತದಲ್ಲಿ ನೂರಕ್ಕೆ ನೂರು ಅಂಕ ಪಡೆದು ವಿಕ್ರಮ ಸಾಧಿಸಿದ್ದಾರೆ. ಪಿಸಿಎಂನಲ್ಲಿ ಐಶ್ವರ್ಯ, ಸ್ವಾತಿ ಶೇ 98.33, ಸ್ನೇಹ ಶೇ 97.66 ರಷ್ಟು ಅಂಕ ಪಡೆದರೆ, ಪಿಸಿಬಿಯಲ್ಲಿ ಐಶ್ವರ್ಯ ಶೇ 98.33, ಸ್ನೇಹ ಶೇ 97.66 ಹಾಗೂ ಸ್ವಾತಿ ಶೇ 96.66 ರಷ್ಟು ಅಂಕ ಗಳಿಸಿದ್ದಾರೆ.

ಐಶ್ವರ್ಯ ಶಿವಾಜಿ ಶೇ 96, ಸ್ನೇಹಾ ಬಾಬುರೆಡ್ಡಿ ಶೇ 94, ಸ್ವಾತಿ ಚಂದ್ರಕಾಂತ ಶೇ 92.6, ವಿಜಯಲಕ್ಷ್ಮಿ ವಿಠ್ಠಲ ಶೇ 91, ಅಮೂಲ್ಯ ಪ್ರಕಾಶ ಶೇ 89.8, ಭಾಗ್ಯಶ್ರೀ ಬಸವರಾಜ ಶೇ 89.6, ಅಭಿಷೇಕ ದತ್ತಾತ್ರಿ ಶೇ 89.5, ಆದಿತ್ಯ ಬಾಬುರಾವ್ ಶೇ 89.5, ಸಚಿನ್ ಲಕ್ಷ್ಮಣ ಶೇ 88.6, ಚಿದಾನಂದ ದೇವಿದಾಸ ಶೇ 87.7, ಸ್ನೇಹಾ ಕಂಟೆಪ್ಪ ಶೇ 87.3, ಉದಯಕಿರಣ ಶೇ 87.3, ಸೌಂದರ್ಯ ಚನ್ನಬಸವ ಶೇ 87, ಜಾಗೃತಿ ಮುನೇಶ್ವರ ಶೇ 86, ಭವಾನಿ ಅಂಬರಾಯ್ಯ ಶೇ 85.8, ಸತೀಶ ಪ್ರಭು ಶೇ 85.6, ಪೂಜಾ ಚಂದ್ರಪ್ಪ ಶೇ 85.3, ಸಂತೋಷ ಪ್ರಭುರಾವ್ ಶೇ 85.1, ಸೂರ್ಯವಂಶಿ ಐಶ್ವರ್ಯ ಶೇ 85 ರಷ್ಟು ಅಂಕ ಪಡೆದಿದ್ದಾರೆ. ಉತ್ತಮ ಶೈಕ್ಷಣಿಕ ವಾತಾವರಣ ಹಾಗೂ ಗುಣಮಟ್ಟದ ಶಿಕ್ಷಣದಿಂದಾಗಿ ಕಾಲೇಜಿನ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಪೂರ್ಣಿಮಾ ಜಿ, ನಿರ್ದೇಶಕ ಮುನೇಶ್ವರ ಲಾಖಾ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.