ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರಿ ಮಳೆ: ಒಡೆದ ಅಟ್ಟೂರ್ ಕೆರೆ

ಬೀದರ್ ಜಿಲ್ಲೆಯಾದ್ಯಂತ ಮಂಗಳವಾರ ಭಾರಿ ಮಳೆಯಾಗಿದ್ದು, ಬಸವಕಲ್ಯಾಣ ತಾಲ್ಲೂಕಿ‌ನ ಕೋಹಿನೂರ್ ಹೋಬಳಿಯಲ್ಲಿ ಅಟ್ಟೂರ್ ಕೆರೆ ಒಡೆದಿದೆ.
Published 12 ಜೂನ್ 2024, 4:24 IST
Last Updated 12 ಜೂನ್ 2024, 4:24 IST
ಅಕ್ಷರ ಗಾತ್ರ

ಬೀದರ್: ಬೀದರ್ ಜಿಲ್ಲೆಯಾದ್ಯಂತ ಮಂಗಳವಾರ ಭಾರಿ ಮಳೆಯಾಗಿದ್ದು, ಬಸವಕಲ್ಯಾಣ ತಾಲ್ಲೂಕಿ‌ನ ಕೋಹಿನೂರ್ ಹೋಬಳಿಯಲ್ಲಿ ಅಟ್ಟೂರ್ ಕೆರೆ ಒಡೆದಿದೆ.

ಕೆರೆ ಒಡೆದು ಅಪಾರ ಪ್ರಮಾಣದ ನೀರಿನೊಂದಿಗೆ 50 ಎಕರೆ ಪ್ರದೇಶದ ಹೊಲದ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿದೆ.

ಕೋಹಿನೂರ್ ಹೋಬಳಿಯೊಂದರಲ್ಲೇ 18 ಸೆಂ.ಮೀ. ಮಳೆಯಾಗಿದೆ. ರಾತ್ರಿ ಎಂಟು ಗಂಟೆ ಸುಮಾರಿಗೆ ಆರಂಭಗೊಂಡಿದ್ದ ಮಳೆ ತಡರಾತ್ರಿ ವರೆಗೆ ಸುರಿದಿದೆ. ಬುಧವಾರ ದಟ್ಟ ಕಾರ್ಮೋಡ ಕವಿದಿದೆ. ಸತತ ಮಳೆಯಿಂದ ಕೃಷಿ ಚಟುವಟಿಕೆಗಳು‌ ಕೂಡ ಚುರುಕುಗೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT