ಹುಮನಾಬಾದ್: ಪಟ್ಟಣದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಗಳ ತಾಲ್ಲೂಕು ಆಡಳಿತದಿಂದ ಮೇಲೆ ದಾಳಿ ಮಾಡಿ 11 ದಿನಗಳು ಕಳೆದರೂ ಇನ್ನೂ ಬಾರದ ವರದಿಯಿಂದ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಫೆ. 7 ರಂದು ತಹಶೀಲ್ದಾರ್ ಅಂಜುಂ ತಬಸುಮ್, ಡಿವೈಎಸ್ಪಿ ಮಡೋಳಪ್ಪ ಪಿ.ಎಸ್., ತಾ.ಪಂ ಇಒ ದೀಪಿಕಾ ನಾಯ್ಕರ್, ಪರಿಸರ ಮಾಲಿನ್ಯ ಅಧಿಕಾರಿ ಮೃತ್ಯುಂಜಯ, ಕಾರ್ಮಿಕ ಅಧಿಕಾರಿ ರಾಹುಲ್ ಸೇರಿದಂತೆ ಸಣ್ಣ ಹಾಗೂ ಬೃಹತ್ ಕೈಗಾರಿಕೆ ಇಲಾಖೆ , ಜೆಸ್ಕಾಂ, ಅಗ್ನಿಶಾಮಕ ದಳ ಅಧಿಕಾರಿಗಳಿಂದ ಪಟ್ಟಣದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿನ ಕೆಲವು ಕಾರ್ಖಾನೆಗಳ ಮೇಲೆ ದಾಳಿ ಮಾಡಿ ಅನಧಿಕೃತವಾಗಿ ನಡೆಯುತ್ತಿದ್ದ ಚಟುವಟಿಕೆಗಳನ್ನು ಬಯಲಿಗೆ ಎಳೆದಿದ್ದರು.

ಈ ಕಾರ್ಯಾಚರಣೆ ನಡೆಸಿ 11 ದಿನಗಳು ಕಳೆದರೂ ಸಂಬಂಧಪಟ್ಟ ಇಲಾಖೆ ಅವರು ಯಾವುದೇ ವರದಿ ನೀಡದೆ ಇರುವುದು ಅನುಮಾನಕ್ಕೆ ಕಾರಣವಾಗಿದೆ. ಸಂಬಂಧಿತ ಇಲಾಖೆ ಅವರು ಒಂದು ವಾರದಲ್ಲೇ ಈ ಬಗ್ಗೆ ವರದಿ ನೀಡುವಂತೆ ತಹಶೀಲ್ದಾರ್ ಅವರು ಸೂಚಿಸಿದ್ದರು. ಆದರೆ ಇಲ್ಲಿಯವರೆಗೆ ವರದಿ ನೀಡಿಲ್ಲ. ಅಳ್ಳು ಹಾಗೂ ಅಗರಬತ್ತಿ ಕಾರ್ಖಾನೆಗಳಲ್ಲಿ ಅನಧಿಕೃತವಾಗಿ ಕೇವಲ ಕೆಮಿಕಲ್ ತುಂಬಿದ ಬ್ಯಾರಲ್ಗಳನ್ನು ಭಾರಿ ಸಂಖ್ಯೆಯಲ್ಲಿ ಸಂಗ್ರಹಿಸಿಟ್ಟಿರುವುದು ಮತ್ತು ದಾಲ್ ಮಿಲ್ ನಲ್ಲಿ ಫರ್ನಿಚರ್ ಹಾಗೂ ಬೆಡ್ ತಯಾರಿಸುವ ಘಟಕ ಇರುವುದು ಬೆಳಕಿಗೆ ಬಂದಿತ್ತು. ಇಂತಹ ಇನ್ನೂ ಹಲವಾರು ಅನಧಿಕೃತ ಚಟುವಟಿಕೆ ನಡೆಯುತ್ತಿರುವ ಶಂಕೆ ಇದ್ದು, ಮೇಲಧಿಕಾರಿಗಳು ಇನ್ನೂ ಹೆಚ್ಚಿನ ತನಿಖೆ ಕೈಗೊಂಡಿದ್ದಲ್ಲಿ ಇಲ್ಲಿಯ ಇನ್ನಷ್ಟು ಕರಾಳ ಮುಖಗಳು ಬೆಳಕಿಗೆ ಬರುವಲ್ಲಿ ಯಾವುದೇ ಸಂದೇಹವೇ ಇಲ್ಲ ಎಂದು ಕೈಗಾರಿಕಾ ಪ್ರದೇಶದ ಸುತ್ತಮುತ್ತಲಿನ ಜನರ ಅಭಿಪ್ರಾಯವಾಗಿದೆ.

ಕೈಗಾರಿಕಾ ಪ್ರದೇಶದ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಪದೇ ಪದೇ ಒಂದಿಲ್ಲೊಂದು ಅವಘಡಗಳು ಸಂಭವಿಸುತ್ತಲ್ಲೆ ಇವೆ. ಆದರೆ ಇಲ್ಲಿಯ ಕಾರ್ಖಾನೆಗಳಲ್ಲಿ ಮಾತ್ರ ಅನೇಕ ವರ್ಷಗಳಿಂದ ನಿಯಮ ಉಲ್ಲಂಘಿಸಲಾಗುತ್ತಿದೆ ಎಂಬ ಗಂಭೀರ ಆರೋಪ ಇದ್ದು, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಎಲ್ಲ ಮಾಹಿತಿ ಇದ್ದರೂ ಸಹ ಎಚ್ಚರಿಕೆ ವಹಿಸಿ ಪರಿಶೀಲನೆ ನಡೆಸದೇ ಇರುವುದು ದಾಳಿ ವೇಳೆ ಕಂಡು ಬಂದಿತ್ತು.

- ಸಣ್ಣ ಕೈಗಾರಿಕಾ ಇಲಾಖೆ ಅವರಿಗೆ ಒಂದು ವಾರದಲ್ಲೇ ವರದಿ ನೀಡುವಂತೆ ಸೂಚಿಸಲಾಗಿತ್ತು. ಈಗ ಎಡರು ವಾರ ಕಳೆದರೂ ವರದಿ ನೀಡಿಲ್ಲ
. ಅಂಜುಂ ತಬಸುಮ್ ತಹಶೀಲ್ದಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.