ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಡು ಬೆಳೆಸದಿದ್ದರೆ ಜಲಕ್ಷಾಮ: ಎಚ್ಚರಿಕೆ

Published 24 ಜೂನ್ 2024, 16:10 IST
Last Updated 24 ಜೂನ್ 2024, 16:10 IST
ಅಕ್ಷರ ಗಾತ್ರ

ಕೊಳಾರ(ಕೆ)(ಜನವಾಡ): ‘ಕಾಡು ಬೆಳೆಸದಿದ್ದರೆ ಭವಿಷ್ಯದಲ್ಲಿ ಜಲಕ್ಷಾಮ ಉಂಟಾಗಲಿದೆ’ ಎಂದು ಬೀದರ್ ವಿಶ್ವವಿದ್ಯಾಲಯದ ಡೀನ್ ಪ್ರೊ.ದೇವಿದಾಸ ತುಮಕುಂಟೆ ಹೇಳಿದರು.

ಬೀದರ್ ತಾಲ್ಲೂಕಿನ ಕೊಳಾರ(ಕೆ) ಗ್ರಾಮದಲ್ಲಿ ಈಚೆಗೆ ನಡೆದ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, ‘ಕಾಡಿದ್ದರೆ ಮಾತ್ರ ಸಕಾಲಕ್ಕೆ ಮಳೆ, ಬೆಳೆ ಬರಲಿದೆ. ಹೀಗಾಗಿ ಕಾಡು ಬೆಳೆಸಿ ನಾಡು ಉಳಿಸಬೇಕಿದೆ. ಎಲ್ಲರಲ್ಲಿ ಪರಿಸರ ಜಾಗೃತಿ ಮೂಡಿಸಬೇಕಿದೆ’ ಎಂದು ತಿಳಿಸಿದರು.

ಕಾಲೇಜು ಪ್ರಾಚಾರ್ಯೆ ಜಯಶ್ರೀ ಪ್ರಭಾ ಮಾತನಾಡಿ, ‘ವಿದ್ಯಾರ್ಥಿಗಳು ವಿದೇಶಿ ಸಂಸ್ಕೃತಿಯ ವ್ಯಾಮೋಹದಿಂದ ದೂರ ಇರಬೇಕು. ಒಳ್ಳೆಯ ಆಚಾರ, ವಿಚಾರ ಬೆಳೆಸಿಕೊಳ್ಳಬೇಕು. ಸತ್ಪ್ರಜೆಗಳಾಗಲು ಪ್ರಯತ್ನಿಸಬೇಕು’ ಎಂದು ಹೇಳಿದರು.

ಎನ್.ಎಸ್.ಎಸ್. ಘಟಕದ ಸಂಯೋಜಕ ಸುಚಿತಾನಂದ ಮಲ್ಕಾಪುರ ಮಾತನಾಡಿದರು. ರಾಜಕುಮಾರ ಅಲ್ಲೂರೆ, ಚನ್ನಕೇಶವಮೂರ್ತಿ, ಪ್ರೊ.ಪಲ್ಲೆದ ಮಹೇಶ್ವರಿ, ನಾಗಮ್ಮ ಬಂಗರಗಿ, ಪ್ರೊ.ಶ್ರೀಕಾಂತ ಪಾಟೀಲ, ಪ್ರೊ.ಸಪ್ನಾ ಮಾನಕಾರಿ, ಶೀಲಾ ಎಸ್.ಎನ್. ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT