ಸಂವಿಧಾನಕ್ಕೆ ಅವಮಾನ: 27 ರಂದು ಪ್ರತಿಭಟನೆ

7

ಸಂವಿಧಾನಕ್ಕೆ ಅವಮಾನ: 27 ರಂದು ಪ್ರತಿಭಟನೆ

Published:
Updated:
Deccan Herald

ಬೀದರ್: ದೇಶದ ಸಂವಿಧಾನಕ್ಕೆ ಅವಮಾನ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಂವಿಧಾನ ಸಂರಕ್ಷಣಾ ಸಮಿತಿಯು ನಗರದಲ್ಲಿ ಸೆಪ್ಟೆಂಬರ್ 27 ರಂದು ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ನಗರದಲ್ಲಿ ಮಂಗಳವಾರ ಮಠಾಧೀಶರು ಹಾಗೂ ಸಮಿತಿಯ ಪದಾಧಿಕಾರಿಗಳ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಕೌಠಾ(ಬಿ) ಬಸವ ಯೋಗಾಶ್ರಮದ ಬೆಲ್ದಾಳ ಸಿದ್ಧರಾಮ ಶರಣರು ಈ ಮಾಹಿತಿ ನೀಡಿದರು.

ಅಂದು ಬೆಳಿಗ್ಗೆ 11 ಗಂಟೆಗೆ ನೆಹರೂ ಕ್ರೀಡಾಂಗಣದಿಂದ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ ಎಂದು ಹೇಳಿದರು.

ಹೋರಾಟಕ್ಕೆ ಎಲ್ಲ ಧರ್ಮಗುರುಗಳ ಬೆಂಬಲ ಇದೆ. ಪ್ರತಿಭಟನಾ ಮೆರವಣಿಗೆ ಹಾಗೂ ಸಭೆಯಲ್ಲಿ ಅಪಾರ ಜನ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಈಚಿನ ದಿನಗಳಲ್ಲಿ ದುಷ್ಕರ್ಮಿಗಳು ಸಂವಿಧಾನಕ್ಕೆ ಅವಮಾನ ಮಾಡುತ್ತಿರುವುದು ಖಂಡನೀಯ. ಸಂವಿಧಾನಕ್ಕೆ ಅಪಮಾನ ಮಾಡಿದರೆ ಭಾರತ ಮಾತೆಗೇ ಅಪಮಾನ ಮಾಡಿದಂತೆ. ಆದ್ದರಿಂದ ಸಂವಿಧಾನಕ್ಕೆ ಅಗೌರವ ತೋರುವವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.

ಭಾಲ್ಕಿಯ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು,ತಡೋಳಾದ ರಾಜೇಶ್ವರ ಶಿವಾಚಾರ್ಯ, ಭಂತೆ ಧಮ್ಮನಾಗ, ಸೇಂಟ್ ಜೋಸೆಫ್ ಚರ್ಚ್‌ನ ಫಾದರ್ ವಿಜಯರಾಜ್, ಮುಫ್ತಿ ಅಬ್ದುಲ್ ಗಫರ್ ಖಸ್ಮಿ, ಮೆಥೋಡಿಸ್ಟ್ ಚರ್ಚ್‌ನ ತುಕಾರಾಮ, ಮುಫ್ತಿ ಚಿರಾಲಿ, ಸೈಯದ್ ಸಿರಾಜೊದ್ದೀನ್ ನಿಜಾಮಿ, ಭಂತೆ ಜ್ಞಾನರಾಜ, ಗುರುದ್ವಾರದ ಜ್ಞಾನಿ ದರ್ಬಾರಾಸಿಂಗ್, ಬಸವ ಮಂಟಪದ ಮಾತೆ ಸತ್ಯದೇವಿ, ಸಿಸ್ಟರ್ ಕ್ರಿಸ್ಟಿನಾ, ಲಿಂಗಾಯತ ಮುಖಂಡ ಬಸವರಾಜ ಧನ್ನೂರ, ಸಂವಿಧಾನ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅಬ್ದುಲ್ ಮನ್ನಾನ್ ಸೇಠ್, ಕಾರ್ಯಾಧ್ಯಕ್ಷ ಅಮೃತರಾವ್ ಚಿಮಕೋಡೆ, ಗೌರವಾಧ್ಯಕ್ಷ ಶ್ರೀಕಾಂತ ಸ್ವಾಮಿ, ಮಹಾ ಪ್ರಧಾನ ಕಾರ್ಯದರ್ಶಿ ಅನಿಲಕುಮಾರ ಬೆಲ್ದಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !