ಸೋಮವಾರ, ಜನವರಿ 17, 2022
19 °C

ಬೀದರ್: ಸಾರ್ವಜನಿಕರ ರಕ್ಷಣೆ ಪೊಲೀಸರ ಕರ್ತವ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ಸಾರ್ವಜನಿಕರ ರಕ್ಷಣೆ ಹಾಗೂ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡುವುದೇ ಪೊಲೀಸರ ಕರ್ತವ್ಯವಾಗಿದೆ’ ಎಂದು ಪ್ರಭಾಕರ ಪಾಟೀಲ ಹೇಳಿದರು.

ಮಕ್ಕಳ ಸಹಾಯವಾಣಿ ಹಾಗೂ ಡಾನ್ ಬೋಸ್ಕೊ ಸಂಸ್ಥೆಯ ವತಿಯಿಂದ ನಗರದ ಚೌಬಾರಾ ಸಮೀಪದ ನಗರ ಪೊಲೀಸ್‌ ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರಮ ನಡೆಯಿತು.

ಮಕ್ಕಳ ಸಹಾಯವಾಣಿ ಸದಸ್ಯ ಜಾನ್ಸನ್ ಕರಂಜಿಕರ್ ಮಾತನಾಡಿ, ‘ಶಾಲಾ ಮಕ್ಕಳನ್ನು ಪೊಲೀಸ್‌ ಠಾಣೆಗೆ ಕರೆ ತಂದು ಪೊಲೀಸ್‌ ಇಲಾಖೆಯ ಮಾಹಿತಿ ನೀಡುವುದು ತೆರೆದ ಮನೆ ಕಾರ್ಯಕ್ರಮದ ಉದ್ದೇಶವಾಗಿದೆ’ ಎಂದರು.

ಸಮೂಹ ಸಮನ್ವಯ ಅಧಿಕಾರಿ ವಿಜಯಕುಮಾರ ಬೆಳಮಗಿ, ಅವಿನಾಶ ಬೇವಿನದೊಡ್ಡಿ ಮಾತನಾಡಿದರು, ಗುರಯ್ಯ ಬಚ್ಚಾ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಪ್ರಹ್ಲಾದ್ ಝೆರೆಪ್ಪ, ಗಾಂಧಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರಮೇಶ ಕಲ್ಲಪ್ಪ ಚಿಲ್ಲರ್ಗಿ, ಮಕ್ಕಳ ಪ್ರತಿನಿಧಿ ಶ್ರಾವಣಿ, ನಿಖಿಲ್ ಅಶೋಕ ಇದ್ದರು. ಡ್ಯಾನಿಯಲ್ ಮೇತ್ರೆ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.