ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ| ಅಧಿವೇಶನ ಯಶಸ್ವಿಗೊಳಿಸುವುದು ಸಂಘನೆಗಳ ಜವಾಬ್ದಾರಿ: ಪಟ್ಟದ್ದೇವರು

Last Updated 9 ಫೆಬ್ರುವರಿ 2023, 6:45 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ಜಾಗತಿಕ ಲಿಂಗಾಯತ ಮಹಾಸಭಾದಿಂದ ಮಾರ್ಚ್ 4 ಮತ್ತು 5 ರಂದು ಬಸವಕಲ್ಯಾಣದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಲಿಂಗಾ ಯತ ಮಹಾ ಅಧಿವೇಶನವನ್ನು ಯಶ ಸ್ವಿಗೊಳಿಸುವುದು ಜಿಲ್ಲೆಯ ಬಸವಪರ ಸಂಘಟನೆಗಳ ಜವಾಬ್ದಾರಿ’ ಎಂದು ವಿಶ್ವ ಬಸವಧರ್ಮ ಟ್ರಸ್ಟ್ ಅನುಭವ ಮಂಟಪದ ಅಧ್ಯಕ್ಷ ಭಾಲ್ಕಿ ಬಸವಲಿಂಗ ಪಟ್ಟದ್ದೇವರು ಹೇಳಿದರು.

‘ಅಧಿವೇಶನ ಬಸವಾದಿ ಶರಣರ ಕಾರ್ಯ ಕ್ಷೇತ್ರದಲ್ಲಿ ನಡೆಯುತ್ತಿದೆ. ಹೀಗಾಗಿ ಇದು ಸಮಸ್ತ ಲಿಂಗಾಯತ ಸಮುದಾಯದ ಅಸ್ಮಿತೆ ಹಾಗೂ ಅಸ್ತಿತ್ವದ ಪ್ರತೀಕವಾಗಿದೆ. ಅಧಿವೇಶನದಲ್ಲಿ ಎರಡು ದಿನ ಲಿಂಗಾಯತ ಧರ್ಮ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆ ಕುರಿತು ಚರ್ಚೆ ನಡೆಯಲಿದೆ. ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ರೂಪುರೇಷೆ ಸಿದ್ಧಪಡಿಸಲು ಇಲ್ಲಿನ ನಿರ್ಣಯ ಪ್ರಮುಖವಾಗಲಿದೆ. ಆದ್ದರಿಂದ ಇದು ಸಫಲವಾಗಲು ಸತತ ವಾಗಿ ಶ್ರಮಿ ಸಬೇಕು’ ಎಂದಿ ದ್ದಾರೆ.

‘ಇದು ಪ್ರಥಮ ರಾಷ್ಟ್ರೀಯ ಅಧಿವೇಶನವಾಗಿದೆ. ಆದ್ದರಿಂದ ನಾಡಿನ ಹಾಗೂ ದೇಶ ವಿದೇಶಗಳ ಸಾವಿರಾರು ಬಸವಾ ನುಯಾಯಿಗಳು ಪಾ ಲ್ಗೊಳ್ಳಲಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ಹೀಗಾಗಿ ಇದು ಅರ್ಥಪೂ ರ್ಣವಾಗಿಸುವ ಮತ್ತು ಯಶಸ್ವಿಯಾಗುವ ನಿಟ್ಟಿನಲ್ಲಿ ಸಿದ್ಧತೆ ಕೈಗೊಳ್ಳುವುದು ಮತ್ತು ಸಹಕಾರ ನೀಡುವುದು ಬಸವಪರ ಸಂಘಟನೆಗಳ ಪದಾಧಿಕಾರಿಗಳ, ಯುವಕರ, ಸಮಾಜ ಬಾಂಧವರ ಹೊಣೆಯಾಗಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT