ಬುಧವಾರ, ಮೇ 18, 2022
23 °C
ಗುರುದ್ವಾರದಲ್ಲಿ ಅಮೃತ ಕುಂಡದ ಜಲ ಸಂಗ್ರಹಿಸಿದ ಜೆಡಿಎಸ್ ಕಾರ್ಯಕರ್ತರು

ಶ್ರದ್ಧಾ ಕೇಂದ್ರಗಳಲ್ಲಿ ಜನತಾ ಜಲಧಾರೆ ರಥಯಾತ್ರೆ ಸಂಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಜಾತ್ಯತೀತ ಜನತಾ ದಳದ ಜನತಾ ಜಲಧಾರೆ ರಥಯಾತ್ರೆಯು ಬುಧವಾರ ನಗರದ ಶ್ರದ್ಧಾ ಕೇಂದ್ರಗಳಲ್ಲಿ ಸಂಚರಿಸಿತು.

ರಥಯಾತ್ರೆಯೊಂದಿಗೆ ಗುರುದ್ವಾರಕ್ಕೆ ಬಂದ ಜೆಡಿಎಸ್ ಕಾರ್ಯಕರ್ತರು ಗುರುಗ್ರಂಥ ಸಾಹೀಬ್ ದರ್ಶನ ಪಡೆದರು. ಅಮೃತ ಕುಂಡದಲ್ಲಿನ ಪವಿತ್ರ ಜಲ ಬಿಂದಿಗೆಯಲ್ಲಿ ತುಂಬಿಕೊಂಡು ಕುಂಭ ಕಳಸದೊಂದಿಗೆ ಮೆರವಣಿಗೆ ನಡೆಸಿ, ರಥದಲ್ಲಿ ಸಂಗ್ರಹಿಸಿದರು.

ಬಳಿಕ ಐತಿಹಾಸಿಕ ಪಾಪನಾಶ ದೇಗುಲಕ್ಕೆ ತೆರಳಿ ಅಭಿಷೇಕ, ವಿಶೇಷ ಪೂಜೆ ಸಲ್ಲಿಸಿದರು. ರಥಕ್ಕೂ ಪೂಜೆಗೈದರು.

ಧಾರ್ಮಿಕ ಸ್ಥಳಗಳಲ್ಲಿ ರಥಯಾತ್ರೆಗೆ ಪಟಾಕಿ ಸಿಡಿಸಿ, ಬಾಂಡ್ ಬಾಜಾಗಳೊಂದಿಗೆ ಅದ್ಧೂರಿ ಸ್ವಾಗತ ದೊರೆಯಿತು. ಜಾತ್ಯತೀತ ಜನತಾ ದಳ ಹಾಗೂ ಪಕ್ಷದ ನಾಯಕರಿಗೆ ಜಯಕಾರದ ಘೋಷಣೆ ಮೊಳಗಿದವು.

ವಿಧಾನಸಭೆಯ ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ಬಂಡೆಪ್ಪ ಕಾಶೆಂಪೂರ, ಬೀದರ್ ಉತ್ತರ ವಿಧಾನಸಭಾ ಕ್ಷೇತ್ರದ ನಿಯೋಜಿತ ಅಭ್ಯರ್ಥಿಯೂ ಆದ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪೂರ, ನಗರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ಆರ್. ಪಾಟೀಲ ಸೋಲಪೂರ, ಮಾಜಿ ಉಪಾಧ್ಯಕ್ಷೆ ಶಾಲಿನಿ ಚಿಂತಾಮಣಿ, ಸದಸ್ಯ ರಾಜು ಚಿಂತಾಮಣಿ, ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಪಾಟೀಲ ಹಾರೂರಗೇರಿ, ಮುಖಂಡರಾದ ಮಾರುತಿ ಬೌದ್ಧೆ, ಶಿವಕುಮಾರ ಭಾವಿಕಟ್ಟಿ, ಸಂಗಮೇಶ ಚಿದ್ರಿ, ಅರುಣ ಹೋತಪೇಟ, ನವಾಜ್‍ಖಾನ್, ಐಲಿನ್‍ಜಾನ್ ಮಠಪತಿ, ಸಂಗಮ್ಮ ಪಾಟೀಲ, ಲತಾ ಕೌರ್ ಮೊದಲಾದವರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.