ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವಾಡ: ಮೇಳಕ್ಕೆ ಬಂದ ನಾಡಿನ ಪಶುಗಳು

ರಾಜ್ಯಮಟ್ಟದ ಪಶು ಮೇಳ ಇಂದಿನಿಂದ
Last Updated 7 ಫೆಬ್ರುವರಿ 2020, 9:52 IST
ಅಕ್ಷರ ಗಾತ್ರ

ಜನವಾಡ: ಬೀದರ್ ತಾಲ್ಲೂಕಿನ ಕಮಠಾಣ ಬಳಿಯ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಮೂರು ದಿನಗಳ ರಾಜ್ಯಮಟ್ಟದ ಪಶು ಮೇಳ ಶುಕ್ರವಾರ ಶುರುವಾಗಲಿದೆ.‌

ಶಾಮಿಯಾನ, ಪ್ರಧಾನ ವೇದಿಕೆ, ಮಳಿಗೆಗಳು ಸೇರಿದಂತೆ ಮೇಳಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ ಬರಲಿರುವ ವಿವಿಧ ತಳಿಗಳ ಪಶುಗಳು ಮೇಳದ ಆಕರ್ಷಣೆಯಾಗಲಿವೆ.

ಬೃಹತ್ ಶಾಮಿಯಾನದ ವೇದಿಕೆಯಲ್ಲಿ ವಿವಿಧ ಗೋಷ್ಠಿಗಳು ನಡೆಯಲಿವೆ. ವೇದಿಕೆಯ ಅಕ್ಕಪಕ್ಕದಲ್ಲಿ ಎರಡು ಎಲ್‍ಇಡಿ ಪರದೆಗಳನ್ನು ಅಳವಡಿಸಿದ್ದು, ವಿಶ್ವವಿದ್ಯಾಲಯ ಆವರಣದ ಯಾವುದೇ ಮೂಲೆಯಿಂದ ವೇದಿಕೆ ಕಾರ್ಯಕ್ರಮವನ್ನು ವೀಕ್ಷಿಸಬಹುದಾಗಿದೆ.

ಮೇಳಕ್ಕೆ ಬರುವ ರೈತರಿಗೆ ಊಟ, ಜಾನುವಾರುಗಳಿಗೆ ಪಶು ಆಹಾರ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ವಿವಿಧ ಇಲಾಖೆಗಳ ಮಾಹಿತಿ ನೀಡುವ ಮಳಿಗೆಗಳು ಹಾಗೂ ವಾಣಿಜ್ಯ ಮಳಿಗೆಗಳು ಮೇಳದಲ್ಲಿ ಇರಲಿವೆ.

ಕೆಎಂಎಫ್‌ನಿಂದ ಬಂದ ಪಶು ಆಹಾರಕಲಬುರ್ಗಿಯ ಬೀದರ್, ಕಲಬುರ್ಗಿ, ಯಾದಗಿರಿ ಹಾಲು ಒಕ್ಕೂಟದಿಂದ ಮೇಳದಲ್ಲಿ ಪಾಲ್ಗೊಳ್ಳಲಿರುವ ಪಶುಗಳಿಗೆ ಕೊಡಲು ಗುರುವಾರ ಮೇಳ ಸ್ಥಳಕ್ಕೆ ಪಶು ಆಹಾರ ಬಂದಿದೆ.

‘ಲಾರಿಯಲ್ಲಿ 10 ಟನ್ ಪಶು ಆಹಾರ ಬಂದಿದೆ. ಒಂದು ಜಾನುವಾರಿಗೆ ಪ್ರತಿ ದಿನ 4 ಕೆ.ಜಿ. ಪಶು ಆಹಾರ ಕೊಡಲಾಗುವುದು’ ಎಂದು ಪಶು ಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಭಾಲ್ಕಿಯ ಸಹಾಯಕ ನಿರ್ದೇಶಕ ಡಾ. ನರಸಪ್ಪ ತಿಳಿಸಿದರು.

‘ಪ್ರತಿ ಶೆಡ್‌ಗಳಲ್ಲಿ ಜಾನುವಾರುಗಳಿಗಾಗಿ ತಲಾ 25 ಕೆ.ಜಿ. ಒಣ ಮೇವು ಇಡಲಾಗಿದೆ. ಹಸಿ ಮೇವು ಕೂಡ ಬರಲಿದೆ. ಖನೀಜ ಮಿಶ್ರಣ ಕೂಡ ಜಾನುವಾರುಗಳಿಗೆ ದೊರೆಯಲಿದೆ’ ಎಂದು ಹೇಳಿದರು.

‘ಮೇಳಕ್ಕೆ ವಿವಿಧ ತಳಿಯ ಜಾನುವಾರು, ಹೈನುರಾಸು, ಕುರಿ, ಆಡು, ಶ್ವಾನ, ಕೋಳಿ, ಬೆಕ್ಕು, ಹಕ್ಕಿಗಳು ಬರಲಿವೆ. ವಿವಿಧ ಸಮಿತಿಗಳು ಮೇಳದ ಯಶಸ್ವಿಗಾಗಿ ಅವಿರತ ಶ್ರಮಿಸುತ್ತಿವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT