ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಧುನಿಕತೆಯಲ್ಲಿ ಅವಿಭಕ್ತ ಕುಟುಂಬ ಮಾಯ’

ಕಮಲನಗರ: ಚಿಂತನಗೋಷ್ಠಿಯಲ್ಲಿ ರಾಜೇಶ್ವರ ಶಿವಾಚಾರ್ಯರು ಅಭಿಮತ
Last Updated 18 ಫೆಬ್ರುವರಿ 2020, 10:31 IST
ಅಕ್ಷರ ಗಾತ್ರ

ಕಮಲನಗರ: ಆಧುನಿಕ ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಸಮಾಜದಲ್ಲಿ ಅವಿಭಕ್ತ ಕುಟುಂಬಗಳು ಮಾಯವಾಗುತ್ತಿವೆ ಎಂದು ತಡೋಳಾ-ಮೆಹಕರ್‌ನ ರಾಜೇಶ್ವರ ಶಿವಾಚಾರ್ಯರು ಮಾತನಾಡಿದರು.

ತಾಲ್ಲೂಕಿನ ಸಂಗಮ ಗ್ರಾಮದ ಸಂಗಮೇಶ್ವರ ದೇವಸ್ಥಾನದಲ್ಲಿ ಪ್ರಥಮ ಲಕ್ಷ ದೀಪೋತ್ಸವ ಪ್ರಯುಕ್ತ ಸೋಮವಾರ ಹಮ್ಮಿಕೊಂಡದ್ದ ಜಾಗತೀಕರಣದಲ್ಲಿ ಧರ್ಮದ ಅವಶ್ಯಕತೆ ಕುರಿತು ಚಿಂತನಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾಜಿಕ ಪ್ರಕಾಶ ಲಕ್ಷ ದೀಪೋತ್ಸವ, ನಾಟಕಗಳು ನಮ್ಮ ಕುಟುಂಬದ ಪ್ರತಿರೂಪಗಳಾಗಿದ್ದು, ನಾಟಕ ಮಾನಸಿಕ ನೆಮ್ಮದಿ ನೀಡುವ ವೇಗವಾದ ಮಾಧ್ಯವಾದರೆ, ಪ್ರಕಾಶ ಲಕ್ಷ ದೀಪೋತ್ಸವ ಮನಸ್ಸು ಮತ್ತು ಬುದ್ಧಿ ಕೇಂದ್ರಿಕರಿಸಿ ಜೀವನದ ಬದುಕು ಪರಿವರ್ತನೆ ಮಾಡುತ್ತದೆ. ಹಲವು ಪಾತ್ರಗಳಲ್ಲಿನ ಒಳ್ಳೆಯ ವಿಚಾರಗಳನ್ನು ಸಾರ್ವಜನಿಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಸವಕಲ್ಯಾಣ ಬಸವಧರ್ಮ ಪೀಠದ ಬಸವಪ್ರಭು ಸ್ವಾಮೀಜಿ ಮಾತನಾಡಿ, ಕೃತಿ ತಮ್ಮ ತಾಯಿ ಇದ್ದ ಹಾಗೆ, ಪ್ರಕೃತಿಯನ್ನು ಪ್ರೀತಿಸಿ ಗೌರವಿಸಿ ಉಳಿಸಿ ಬೆಳೆಸಿದಾಗ ಮಾತ್ರ ನಾವು ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದು ಹೇಳಿದರು.

ಹೂಲಸೂರು ಶಿವಾನಂದ ಸ್ವಾಮೀಜಿ, ಸಂಗಮ ಮಹಾದೇವಮ್ಮ ತಾಯಿ, ಶರಣಮ್ಮ ತಾಯಿ, ದೇವಮ್ಮ ತಾಯಿ, ರಾಮಶೆಟ್ಟಿ ಪನ್ನಾಳೆ, ಚಂದ್ರಶೇಖರ ಪಾಟೀಲ, ಚಂದ್ರಶೇಖರ್‌ ದೇಶಮುಖ, ರೇವಣಪ್ಪ ಮಹಾಜನ, ಆಳಂದಿ ರೇವಪ್ಪಯ್ಯ ಸ್ವಾಮಿ, ಮಲ್ಲಿಕಾರ್ಜುನ ದಾನಾ, ಅಣ್ಣಾರಾವ ಪಾಟೀಲ, ಬಲಭೀಮ ಶಾಮಣ್ಣ ತಮಲೂರು, ಸಂಗಮೇಶ್ವರ ದೇವಾಲಯ ಕಾರ್ಯದರ್ಶಿ ಕಲ್ಯಾಣರಾವ ದುಬಳಗುಂಡೆ(ಸ್ವಾಮಿ) ಸಂಗಮ, ಸಂಗಮೇಶ ಸರಬಾರೆ, ಇನೀಲಕುಮಾರ ಹೊಳಸಂಬ್ರೆ, ವರ್ಷಾ ಬಿರಾದಾರ ಇದ್ದರು.

ಮಲ್ಲಿಕಾರ್ಜುನ ಸ್ವಾಮಿ ಪ್ರಸ್ತಾವಿಕವಾಗಿ ಮಾತನಾಡಿದರು. ಸ್ವಾಗತ ಗೀತೆ ಓಂಕಾರ ಪಾಟೀಲ್ ಹಾಡಿದರು. ಅನೀಲಕುಮಾರ ಹೊಳಸಂಬ್ರೆ ಸ್ವಾಗತಿಸಿದರು. ಸಂಪೂರ್ಣ ಕರಿಮಣಿ ನಿರೂಪಿಸಿದರು. ಮಲ್ಲಿಕಾರ್ಜುನ ಬಿರಾದಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT