ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್: ಮಳೆ, ಬೆಳೆಗೆ ಗಾಂಧಿಗಂಜ್‌ ವ್ಯಾಪಾರಿಗಳ ಪಾದಯಾತ್ರೆ

Published 8 ಜುಲೈ 2024, 16:27 IST
Last Updated 8 ಜುಲೈ 2024, 16:27 IST
ಅಕ್ಷರ ಗಾತ್ರ

ಬೀದರ್: ಉತ್ತಮ ಮಳೆಗಾಗಿ ಪ್ರಾರ್ಥಿಸಿ ಇಲ್ಲಿನ ಗಾಂಧಿ ಗಂಜ್‌ ವ್ಯಾಪಾರಿಗಳು ನಗರದಲ್ಲಿ ಸೋಮವಾರ ಪಾದಯಾತ್ರೆ ನಡೆಸಿದರು.

ಗಾಂಧಿಗಂಜ್‍ ಬಸವೇಶ್ವರ ದೇವಸ್ಥಾನದಿಂದ ಆರಂಭಗೊಂಡ ಪಾದಯಾತ್ರೆಯು ಬೊಮ್ಮಗೊಂಡೇಶ್ವರ ವೃತ್ತ, ಬಸವೇಶ್ವರ ವೃತ್ತ, ಮಹಾವೀರ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಜನರಲ್ ಕಾರ್ಯಪ್ಪ ವೃತ್ತ, ನೆಹರೂ ಕ್ರೀಡಾಂಗಣ, ಮಡಿವಾಳ ಮಾಚಿದೇವ ವೃತ್ತ, ಹೊಸ ಬಸ್ ನಿಲ್ದಾಣದ ಮೂಲಕ ಪಾಪನಾಶ ದೇಗುಲದ ವರೆಗೆ ನಡೆಯಿತು.

ಭಜನೆ ಮಾಡುತ್ತ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಆನಂತರ ಪಾಪನಾಶ ಶಿವಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು. ದಾಸೋಹ ವ್ಯವಸ್ಥೆ ಮಾಡಿದರು. 

‘ಉತ್ತಮ ಮಳೆ, ಬೆಳೆಯಾಗಿ ನಾಡಿನಲ್ಲಿ ಸುಭಿಕ್ಷೆ ನೆಲೆಸಲಿ. ಸರ್ವರಿಗೂ ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ಸಿಗಲಿ ಎಂದು ಹಲವು ವರ್ಷಗಳಿಂದ ಗಾಂಧಿಗಂಜ್‌ ವ್ಯಾಪಾರಿಗಳಿಂದ ಪಾದಯಾತ್ರೆ ನಡೆಸಲಾಗುತ್ತಿದೆ’ ಎಂದು ದಿ ಗ್ರೇನ್ ಅಂಡ್‌ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಬಸವರಾಜ ಧನ್ನೂರ ತಿಳಿಸಿದರು.

ಮುಖಂಡರಾದ ನಾಗಶೆಟ್ಟೆಪ್ಪ ದಾಡಗಿ, ಭಗವಂತ ಔದತ್ತಪುರ, ಅಶೋಕ ರೇಜಂತಲ್, ಸೋಮಶೇಖರ ಪಾಟೀಲ ಗಾದಗಿ, ಮಡಿವಾಳಪ್ಪ ಗಂಗಶೆಟ್ಟಿ, ಸೋಮನಾಥ ಗಂಗಶೆಟ್ಟಿ, ಎನ್.ಆರ್. ವರ್ಮಾ, ಸುನೀಲ್ ಮೊಟ್ಟಿ, ಬಂಡೆಪ್ಪ, ಬಾಲಾಜಿ, ನಾಗಶೆಟ್ಟೆಪ್ಪ ಕಾರಾಮುಂಗಿ, ಶಂಕರ ಗುನ್ನಳ್ಳಿ, ಅಣ್ಣಾರಾವ್ ಮೊಗಶೆಟ್ಟಿ, ರಾಜು ಬಗದಲ್, ದಿಗಂಬರ ಪೋಲಾ, ಬಸವರಾಜ ಭಂಡೆ, ಬಸವರಾಜ ಶೀಲವಂತ, ವ್ಯಾಪಾರಿಗಳು, ಅಡತ್ ಮಾಲೀಕರು, ಮುನೀಮರು, ಕೂಲಿ ಕಾರ್ಮಿಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT