ಭಾನುವಾರ, ಅಕ್ಟೋಬರ್ 17, 2021
23 °C
ಸೇವೆ ಮತ್ತು ಸಮರ್ಪಣಾ ಅಭಿಯಾನದ ರಾಜ್ಯ ಸಹ ಸಂಚಾಲಕ ವಿಕಾಸ್.ಪಿ ಹೇಳಿಕೆ

ಮೋದಿ ಕಾರ್ಯಕ್ರಮ ಜನ ಸಾಮಾನ್ಯರಿಗೆ ತಲುಪಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ‘ನರೇಂದ್ರ ಮೋದಿ ಅವರು 13 ವರ್ಷ ಗುಜರಾತಿನ ಮುಖ್ಯಮಂತ್ರಿಯಾಗಿ ಹಾಗೂ 7 ವರ್ಷ ಪ್ರಧಾನಿಯಾಗಿ ಜನಪರ ಸೇವೆ ಮಾಡುತ್ತಿದ್ದಾರೆ. ಅವರ ಕಾರ್ಯಕ್ರಮ ಜನ ಸಾಮಾನ್ಯರಿಗೆ ತಲುಪಬೇಕು’ ಎಂದು ಸೇವೆ ಮತ್ತು ಸಮರ್ಪಣಾ ಅಭಿಯಾನದ ರಾಜ್ಯ ಸಹ ಸಂಚಾಲಕ ವಿಕಾಸ್.ಪಿ ಹೇಳಿದರು.

ನಗರದ ಶಿವಾ ಇಂಟರ್‌ ನ್ಯಾಷನಲ್‌ ಹೋಟೆಲ್‌ ಸಭಾಂಗಣದಲ್ಲಿ ಜೆಜೆಪಿ ಜಿಲ್ಲಾ ಘಟಕದ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸೇವಾ ಮತ್ತು ಸಮರ್ಪಣಾ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಅವರು ‘ಸೇವಾ ಯಜ್ಞದಲ್ಲಿ ಸಮರ್ಪಿತ ಜೀವನ’ ಕುರಿತು ಮಾತನಾಡಿದರು.

‘ಹಿಂದೆ ಸ್ವಾಮಿ ವಿವೇಕಾನಂದರನ್ನು ನರೇಂದ್ರ ಎಂದು ಸಂಭೋದಿಸಲಾಗುತ್ತಿತ್ತು. ಅವರ ವಾಕ್‍ಚಾತುರ್ಯ ಹಾಗೂ ವಿವೇಕತನದ ವಿಚಾರಧಾರೆಯಿಂದ ಅವರನ್ನು ಸ್ವಾಮಿ ವಿವೇಕಾನಂದ ಎಂದು ಕರೆಯಲಾಯಿತು. ಅದೇ ರೀತಿ 21ನೇ ಶತಮಾನದಕಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಓರ್ವ ಚಹಾ ಮಾರುವ ಹುಡಗನಾಗಿ ಇಂದು ಸುಮಾರು 135 ಕೋಟಿ ಜನಸಂಖ್ಯೆ ಇರುವ ದೇಶದ ಅಡಳಿತಗಾರನಾಗಿ ನಿಂತಿದ್ದಾರೆ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್ ಮಾತನಾಡಿ, ‘ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಬೆಳಕು ಕಾಣದ ನೂರಾರು ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ, ಸಾವಿರಾರು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಿದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ’ ಎಂದರು.

‘ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ತಂದರು, ಜಮ್ಮು ಕಾಶ್ರೀರದ ಪ್ರತ್ಯೇಕ ಸಂವಿಧಾನ ಕಿತ್ತು ಹಾಕಿದರು.
ನಾಗಾ ಬಂಡುಕೋರರ ದಮನ, ನಕ್ಷಲರ ಉಪಟಳಕ್ಕೆ ಬ್ರೇಕ್, ಪಾಕಿಸ್ತಾನಿ ಬಂಡುಕೋರರ ಸದ್ದ ಅಡಗಿಸಿದ್ದು ಅವರ ಸಾಧನೆಯಾಗಿದೆ’ ಎಂದು ಹೇಳಿದರು.

ಬಿಜೆಪಿ ಕಲಬುರಗಿ ವಿಭಾಗೀಯ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್, ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ, ನಿವೃತ್ತ ಪ್ರಾಚಾರ್ಯ ಪ್ರೊ.ದೇವೇಂದ್ರ ಕಮಲ್ ಇದ್ದರು.

ವಿಚಾರ ಸಂಕಿರಣದಲ್ಲಿ ಸೇವಾ ಮತ್ತು ಸಮರ್ಪಣೆ ಅಭಿಯಾನದ ಪ್ರಚಾರ ಕಾರ್ಯ ಸಹ ಸಂಚಾಲಕ ರಾಜಕುಮಾರ ಪಾಟೀಲ ನೇಮತಾಬಾದ್, ಬಿಜೆಪಿ ರಾಷ್ಟ್ರೀಯ ಎಸ್.ಸಿ ಮೋರ್ಚಾ ಕಾರ್ಯದರ್ಶಿ ಜಯಕುಮಾರ ಕಾಂಗೆ, ಕೆ.ಎಸ್.ಐ.ಐ.ಡಿ.ಸಿ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ಬೂಡಾ ಅಧ್ಯಕ್ಷ ಬಾಬುವಾಲಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಕುಂಬಾರ್, ಅಶೋಕ ಹೊಕ್ರಾಣೆ, ಪ್ರಮುಖರಾದ ಎನ್.ಆರ್ ವರ್ಮಾ, ರೇವಣಸಿದ್ದಪ್ಪ ಜಲಾದೆ, ಶಕುಂತಲಾ ಬೆಲ್ದಾಳೆ, ಪ್ರಸನ್ನಲಕ್ಷ್ಮೀ ದೇಶಪಾಂಡೆ, ಹೇಮಲತಾ ಜೋಷಿ, ರೂಪಾ ಪಾಟೀಲ, ಪ್ರಕಾಶ ಟೊಣ್ಣೆ, ಪೀರಪ್ಪ ಯರನಳ್ಳಿ, ರಾಜಕುಮಾರ ಚಿದ್ರಿ, ಹಣಮಂತ ಬುಳ್ಳಾ, ರಾಜೇಂದ್ರ ಪೂಜಾರಿ, ಸಚಿದಾನಂದ ಚಿದ್ರೆ, ಸತೀಶ ಸ್ವಾಮಿ, ನಿತೀನ್ ಕರ್ಪೂರ್, ಸುರೇಶ ಮಾಶೆಟ್ಟೆ, ಗಣ್ಯರಾದ ಬಿ.ಜಿ.ಶಟಕಾರ, ಚಂದ್ರಶೇಖರ, ಗುರುನಾಥ ಜ್ಯಾಂತಿಕರ್, ಶಂಕರ್‍ರಾವ್ ಮದಕಟ್ಟಿ, ಪ್ರೊ.ಎಸ್.ಬಿ ಸಜ್ಜನಶೆಟ್ಟಿ, ಹಾವಗಿರಾವ ಪಾಟೀಲ, ಬಸವರಾಜ ಪವಾರ್ ಇದ್ದರು.

ಸೇವಾ ಮತ್ತು ಸಮರ್ಪಣೆ ಅಭಿಯಾನದ ಪ್ರಚಾರ ಕಾರ್ಯದ ಜಿಲ್ಲಾ ಸಂಚಾಲಕ ಮಹೇಶ್ವರ ಸ್ವಾಮಿ ಸ್ವಾಗತಿಸಿದರು. ಜಿಲ್ಲಾ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರಹಂತ ಸಾವಳೆ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.