ಗುರುವಾರ , ಸೆಪ್ಟೆಂಬರ್ 23, 2021
22 °C
ಎಫ್‌ಪಿಐ, ಆಶಾ ಕಾರ್ಯಕರ್ತೆಯರಿಗೆ ತರಬೇತಿ

ಎರಡು ಮಕ್ಕಳ ನಡುವೆ ಸುರಕ್ಷಿತ ಅಂತರವಿರಲಿ: ಸ್ತ್ರೀರೋಗ ತಜ್ಞೆ ಡಾ.ಆರತಿ ರಘು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ‘ತಾಯಿ, ಮಗುವಿನ ಆರೋಗ್ಯದ ದೃಷ್ಟಿಯಿಂದ ಎರಡು ಮಕ್ಕಳ ನಡುವೆ ಮೂರು ವರ್ಷಗಳ ಅಂತರವಿರಬೇಕು. ಈ ಅಂತರ ಕಾಯ್ದುಕೊಳ್ಳಲು ವೈದ್ಯರ ಮಾರ್ಗದರ್ಶನದೊಂದಿಗೆ ತಾತ್ಕಾಲಿಕ ಗರ್ಭ ನಿರೋಧಕ ವಿಧಾನಗಳನ್ನು ಅನುಸರಿಸಬೇಕು’ ಎಂದು ಎಫ್‌ಪಿಐ ಅಧ್ಯಕ್ಷೆ ಸ್ತ್ರೀರೋಗ ತಜ್ಞೆ ಡಾ.ಆರತಿ ರಘು ಹೇಳಿದರು.

ನಗರದ ಭಾರತೀಯ ಕುಟುಂಬ ಯೋಜನಾ ಸಂಸ್ಥೆ(ಎಫ್‌ಪಿಐ) ಬೀದರ್‌ ಶಾಖೆಯ ಕಚೇರಿಯಲ್ಲಿ ಎಫ್‌ಪಿಐ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಏರ್ಪಡಿಸಿದ್ದ ‘ಗರ್ಭ ನಿರೋಧಕ ಅಳವಡಿಕೆ ತರಬೇತಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಆರೋಗ್ಯ ಕಾರ್ಯಕರ್ತೆಯರು ಹೊಸದಾಗಿ ಬಂದಿರುವ ಗರ್ಭನಿರೋಧಕಗಳ ಬಗ್ಗೆ ಮಹಿಳೆಯರಿಗೆ ತಿಳಿವಳಿಕೆ ನೀಡಬೇಕು’ ಎಂದು ತಿಳಿಸಿದರು.

ಎಫ್‌ಪಿಐ ಸಂಸ್ಥೆಯ ಶಾಖಾ ವ್ಯವಸ್ಥಾಪಕ ಶ್ರೀನಿವಾಸ ಬಿರಾದಾರ ಮಾತನಾಡಿ, ‘ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸ್ವಯಂ ಸೇವಕರು ಸಮುದಾಯ ಮಟ್ಟದಲ್ಲಿ ಆರೋಗ್ಯ ಸೇವೆಗಳನ್ನು ನೀಡುವ ಪ್ರಮುಖ ವ್ಯಕ್ತಿಗಳಾಗಿದ್ದಾರೆ.
ಗರ್ಭಿಣಿಯರ, ತಾಯಂದಿರರ, ಮಕ್ಕಳ ಆರೈಕೆ ಹಾಗೂ ಗರ್ಭನಿರೋಧಕ ವಿಧಾನಗಳ ಸರಿಯಾದ ಮಾಹಿತಿ ನೀಡಬೇಕು ಎಂದು ಹೇಳಿದರು.

ವೈಧ್ಯಾಧಿಕಾರಿಗಳಾದ ಡಾ. ರಾಜಶೇಖರ ಲಕ್ಕಶೆಟ್ಟಿ ಅವರು ಕುಟುಂಬ ಯೋಜನೆಯ ತಾತ್ಕಾಲಿಕ ವಿಧಾನಗಳಾದ ನುಂಗುವ ಮಾತ್ರೆಗಳು, ಕಾಪರ್-ಟಿ, ಗರ್ಭನಿರೋಧಕ ಇಂಜೆಕ್ಷನ್, ಇಂಪ್ಲಾಂಟ್, ಕಾಂಡೋಮ್ ಹಾಗೂ ಶಾಶ್ವತ ವಿಧಾನಗಳಾದ ಮಹಿಳೆಯರಿಗಾಗಿ ಇರುವ ಟ್ಯುಬೆಕ್ಟಮಿ, ಲ್ಯಾಪ್ರೋಸ್ಕೋಪಿ ಹಾಗೂ ಪುರುಷರಿಗಾಗಿ ಇರುವ ವ್ಯಾಸೆಕ್ಟಮಿ ಬಗ್ಗೆ ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.