ಸಾಲ ಮನ್ನಾ: ದೃಢೀಕರಣ ಪತ್ರ ಸಲ್ಲಿಕೆ ಅವಧಿ ವಿಸ್ತರಣೆ: ಬಂಡೆಪ್ಪ ಕಾಶೆಂಪೂರ

7

ಸಾಲ ಮನ್ನಾ: ದೃಢೀಕರಣ ಪತ್ರ ಸಲ್ಲಿಕೆ ಅವಧಿ ವಿಸ್ತರಣೆ: ಬಂಡೆಪ್ಪ ಕಾಶೆಂಪೂರ

Published:
Updated:
Deccan Herald

ಬೀದರ್‌: ‘ಸಹಕಾರ ಸಂಘ ಹಾಗೂ ಬ್ಯಾಂಕ್‌ಗಳಲ್ಲಿನ ₹ 1ಲಕ್ಷ ವರೆಗಿನ ಸಾಲಮನ್ನಾ ಯೋಜನೆಯಲ್ಲಿ ಫಲಾನುಭವಿಗಳನ್ನು ಗುರುತಿಸಲು ಪಡೆಯಲಾಗುವ ಅರ್ಜಿ ಹಾಗೂ ಸ್ವಯಂ ದೃಡೀಕರಣ ಪತ್ರ ಸಲ್ಲಿಕೆ ಅವಧಿಯನ್ನು ಅ.15ರ ವರೆಗೆ ವಿಸ್ತರಿಸಲಾಗಿದ್ದು, ರೈತರು ಆತಂಕ ಪಡುವ ಅಗತ್ಯವಿಲ್ಲ’ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ತಿಳಿಸಿದರು.

‘ಸಹಕಾರ ಸಂಘದಲ್ಲಿ ಲಭ್ಯವಿರುವ ಮಾಹಿತಿಯನ್ನು ತಕ್ಷಣ ಎಕ್ಸೆಲ್‌ಶೀಟ್‌ನಲ್ಲಿ ಸಿದ್ಧಪಡಿಸಿಕೊಳ್ಳಬೇಕು. ಸೆಪ್ಟೆಂಬರ್‌ವರೆಗೆ ಗಡುವು ದಿನಾಂಕ ಬರುವಂತೆ ಸಾಲ ಹೊಂದಿರುವ ರೈತರಿಗೆ ಈ ಅವಕಾಶ ಕಲ್ಪಿಸಲಾಗಿದೆ. ಸೆಪ್ಟೆಂಬರ್‌ ನಂತರದ ಗಡುವು ಸಾಲಗಳಿಗೂ ರೈತರಿಂದ ಅರ್ಜಿ ಪಡೆಯಲು ಅ.25 ರವರೆಗೆ ಕಾಲಾವಕಾಶ ನೀಡಲಾಗಿದೆ’ ಎಂದು ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

‘ತಂತ್ರಾಂಶದ ಲಾಗ್ ಇನ್‌ ಪಾಸ್‌ವರ್ಡ್‌ ನೀಡಿದ ಕೂಡಲೇ ಸಂಘದಲ್ಲಿ ಲಭ್ಯವಿರುವ ಮಾಹಿತಿಯನ್ನು ಆನ್‌ಲೈನ್‌ ಮೂಲಕ ಸಲ್ಲಿಸಬೇಕು. ರೈತರ ಸ್ವಯಂ ದೃಢೀಕರಣ ಪತ್ರದಲ್ಲಿನ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಅಪ್‌ ಲೋಡ್‌ ಮಾಡಲು ಅ.25ರವರೆಗೆ ಅವಕಾಶ ಕಲ್ಪಿಸಲಾಗಿದೆ’ ಎಂದು ಹೇಳಿದರು.

‘ಸಾಲ ಮರುಪಾವತಿ ಗಡುವಿಗೆ ಅನುಗುಣವಾಗಿ ಶೀಘ್ರದಲ್ಲಿ ಅನುದಾನ ಬಿಡುಗಡೆ ಮಾಡುವ ಸಲುವಾಗಿ ಪ್ರತಿ ತಿಂಗಳು ಪ್ಯಾಕ್ಸ್‌ಗಳು  (ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ) ಅರ್ಜಿ ನಮೂನೆಯನ್ನು ಅನುಬಂಧ–1ರಲ್ಲಿ ಹಾಗೂ ಡಿಸಿಸಿ ಬ್ಯಾಂಕ್‌ಗಳು ಕ್ರೋಡೀಕೃತ ಬಿಲ್‌ಗಳ ನಮೂನೆಯನ್ನು ಅನುಬಂಧ–2ರಲ್ಲಿ ಸಲ್ಲಿಸುವಂತೆ ಸೂಚಿಸಲಾಗಿದೆ’ ಎಂದು ವಿವರಿಸಿದರು.

‘ರೈತರ ಉಳಿತಾಯ ಖಾತೆಗಳಿಗೆ ಅನುದಾನ ಬಿಡುಗಡೆ ಮಾಡುವ ವಿಧಾನವನ್ನು ನಂತರ ತಿಳಿಸಲಾಗುವುದು’ ಎಂದರು.

‘ರೈತ ಹಾಗೂ ಆತನ ಪತ್ನಿ ಸೇರಿ ಪಡೆದ ಸಾಲದ ಮೊತ್ತ ₹ 1 ಲಕ್ಷ ಮೀರಬಾರದು. ಹೆಚ್ಚುವರಿ ಮೊತ್ತವನ್ನು ರೈತರೇ ಭರಿಸಬೇಕಾಗಲಿದೆ. ಒಂದು ಕುಟುಂಬದಲ್ಲಿ ತಂದೆ, ಮಗ ಪ್ರತ್ಯೇಕವಾಗಿ ವಾಸವಾಗಿದ್ದರೆ ಲಿಖಿತ ಪತ್ರ ಬರೆದು ಕೊಟ್ಟು ಪ್ರತ್ಯೇಕವಾಗಿ ₹ 1 ಲಕ್ಷ ವರೆಗಿನ ಸಾಲ ಮನ್ನಾದ ಪ್ರಯೋಜನ ಪಡೆಯಬಹುದು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !