ಶನಿವಾರ, ಮೇ 21, 2022
23 °C
ಹುಲಸೂರ: ಗ್ರಾಮ ಸಭೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭೀಮಶಪ್ಪ ದಂಡಿನ ಹೇಳಿಕೆ

ಅರ್ಹ ಫಲಾನುಭವಿಗಳಿಗೆ ಮನೆ ಹಂಚಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಲಸೂರ: ವಸತಿ ಯೋಜನೆಗಳ ಮನೆ ಹಂಚಿಕೆಗೆ ಫಲಾನುಭವಿಗಳನ್ನು ಆಯ್ಕೆ ಮಾಡುವ ಸಂಬಂಧ ಇಲ್ಲಿನ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ಗ್ರಾಮಸಭೆ ನಡೆಸಲಾಯಿತು.

ಈ ಗ್ರಾಮ ಪಂಚಾಯಿತಿಗೆ 2021-22ನೇ ಸಾಲಿನಲ್ಲಿ 50 ಮನೆಗಳು ಮಂಜೂರಾಗಿವೆ. ಆ ಪೈಕಿ ಸಾಮಾನ್ಯ ವರ್ಗಕ್ಕೆ 33 (ಬೇಡಿಕೆ 162), ಅಲ್ಪಸಂಖ್ಯಾತರಿಗೆ 5 (ಬೇಡಿಕೆ 49), ಡಾ.ಬಿ.ಆರ್‌ ಅಂಬೇಡ್ಕರ್‌ ವಸತಿ ಯೋಜನೆಡಿಯಲ್ಲಿ ಪರಿಶಿಷ್ಟ ಜಾತಿ 9 (ಬೇಡಿಕೆ 177), ಪರಿಶಿಷ್ಟ ಪಂಗಡಕ್ಕೆ 3 (ಬೇಡಿಕೆ 35) ಮನೆ ಮಂಜೂರಾಗಿವೆ. ಒಟ್ಟು 423 ಜನ ಮನೆ ನೀಡುವಂತೆ ಮನವಿ ಸಲ್ಲಿಸಿದ್ದರು. ಆದ್ದರಿಂದ ಫಲಾನುಭವಿಗಳ ಆಯ್ಕೆ ಕುರಿತು ಗ್ರಾಮ ಸಭೆಯಲ್ಲಿ ಚರ್ಚಿಸಲಾಯಿತು.

ಸಭೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭೀಮಶಪ್ಪ ದಂಡಿನ ಮಾತನಾಡಿ,‘ಅಧ್ಯಕ್ಷ, ಉಪಾಧ್ಯಕ್ಷರ ಜತೆ ಪ್ರತಿ ವಾರ್ಡ್‌ಗೂ ಭೇಟಿ ನೀಡಿ ಅರ್ಹ ಫಲಾನುಭವಿಗಳನ್ನು ಗುರುತಿಸಲಾಗುವುದು. ಬಡವರಿಗೆ ಸೂರು ಒದಗಿಸುವುದು ನಮ್ಮ ಉದ್ದೇಶ. ಮನೆ ಹಂಚಿಕೆ ಪ್ರಕ್ರಿಯೆ ಪ್ರಾಮಾಣಿಕವಾಗಿ ನಡೆಯಲಿದೆ’ ಎಂದು ಹೇಳಿದರು.

ಅಧ್ಯಕ್ಷ ಸಂಜೀವ ಕುಮಾರ ಪಾಂಡುರಂಗ ಭೂಸಾರೆ, ಉಪಾಧ್ಯಕ್ಷೆ ಸರಸ್ವತಿ ಬಾಬುರಾವ ಬಾಲಕುಂದೆ, ಸದಸ್ಯರಾದ ಬಬಿತಾ ಸುರೇಶ, ವೈಜಿನಾಥ, ಜಗನ್ನಾಥ, ಸೂರ್ಯಕಾಂತ, ಅನುಸುಯಾಬಾಯಿ ಸೂರ್ಯಕಾಂತ, ದೇವಿಂದ್ರ ಬಾಬು, ರೋಹಿಣಿ ಭಾಗವತ, ದೀಪಾ ರಾಣಿ ಧರ್ಮೇಂದ್ರ, ಧನರಾಜ ರಾಜೇಂದ್ರ, ಮನ್ನಸೂರ ಎಂ ಡಿ.ನವಾಜ, ಲಾಲೂ ತಾತೇರಾವ,ನಸರೀನಬೇಗಂ ಇಕ್ರಮ್‌, ಸಂತೋಷ ವೈಜಿನಾಥ, ಸುನೀತಾ ಶಿವಕುಮಾರ, ಸಂಜೀವಕುಮಾರ ಪಾಂಡುರಂಗ, ನಾಗೇಶ ಗೋರಖನಾಥ, ಪ್ರೇಮಲಾ ಚಂದ್ರಕಾಂತ, ಗುರುನಾಥ ಕರಬಸಪ್ಪ, ಭಾಗ್ಯಜ್ಯೋತಿ ಹನಮಂತ, ತಂಗೆಮ್ಮ ಜಾಲಿಂದರ, ರುಕ್ಮುದ್ದೀನ್‌ ಮೈಲಾಖಾನ, ಶ್ರೀದೇವಿ ಸಿದ್ರಾಮ, ದೇವಿಂದ್ರ ವೀರಣ್ಣಾ, ಯಾಸ್ಮಿನ್‌ ಗಫಾರ, ಮಹಾನಂದಾ ರಾಜಕುಮಾರ, ವಿವೇಕಾನಂದ ಬಾಬುರಾವ, ಭಾಗ್ಯಶ್ರೀ ಬಸವರಾಜ, ಮೀರಾಬಾಯಿ ರಂಜಿತ್‌, ವಿದ್ಯಾಸಾಗರ ನಿವೃತ್ತಿರಾವ, ಅನೀತಾ ರಾಜೇಂದ್ರ, ಕುಮಾರ ಮಾದವರಾವ, ಭಾಗ್ಯಶ್ರೀ ಸೋಮನಾಥ, ಮುಕ್ತಾಬಾಯಿ ರಾಮರತನ, ನಿತೀನ್‌ ವೆಂಕಟರಾವ ಇದ್ದರು.

ನೋಡಲ್‌ ಅಧಿಕಾರಿ ಜ್ಯೋತಿ, ತಾನಾಜಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಗ್ರಾಮದ ಜನ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.