ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಸಲಹಾ ಸಮಿತಿ ಸದಸ್ಯರಾಗಿ ಬಿ.ಜಿ. ಶೆಟಕಾರ

Last Updated 23 ಫೆಬ್ರುವರಿ 2021, 14:27 IST
ಅಕ್ಷರ ಗಾತ್ರ

ಬೀದರ್: ಇಲ್ಲಿಯ ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಜಿ. ಶೆಟಕಾರ ಅವರನ್ನು ದಕ್ಷಿಣ ಮಧ್ಯ ರೈಲ್ವೆಯ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯರಾಗಿ ನಾಮ ನಿರ್ದೇಶನ ಮಾಡಲಾಗಿದೆ.


ಇವರ ಅಧಿಕಾರ ಅವಧಿ 2023 ರ ಜನವರಿ 31 ರ ವರೆಗೆ ಇರಲಿದೆ. ಜಿಲ್ಲೆಯ ರೈಲ್ವೆಗೆ ಸಂಬಂಧಿಸಿದ ಸಮಸ್ಯೆ ಅಥವಾ ಸಲಹೆಗಳಿದ್ದಲ್ಲಿ ನಗರದ ಹಳೆಯ ಬಸ್ ನಿಲ್ದಾಣ ಸಮೀಪದ ಇಂದಿರಾ ಮಾರ್ಕೇಟ್‍ನಲ್ಲಿ ಇರುವ ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಕಚೇರಿಗೆ ಕಳುಹಿಸಬಹುದು ಎಂದು ಸಂಸ್ಥೆಯ ಉಪಾಧ್ಯಕ್ಷ ಸೋಮಶೇಖರ ಪಾಟೀಲ ಹಾಗೂ ಕಾರ್ಯದರ್ಶಿ ಡಾ. ವೀರೇಂದ್ರ ಶಾಸ್ತ್ರಿ ತಿಳಿಸಿದ್ದಾರೆ.

ಬಿಜೆಪಿ ಕಲೆ, ಸಾಂಸ್ಕೃತಿಕ ಪ್ರಕೋಷ್ಠಕ್ಕೆ ನೇಮಕ

ಬೀದರ್: ಬಿಜೆಪಿ ಜಿಲ್ಲಾ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠದ ಸಂಚಾಲಕ, ಸಹ ಸಂಚಾಲಕ ಹಾಗೂ ಸದಸ್ಯರನ್ನು ನೇಮಕ ಮಾಡಲಾಗಿದೆ.
ವಿವರ ಹೀಗಿದೆ. ಮನ್ಮಥ ಕಾಡವಾದ (ಸಂಚಾಲಕ), ಗೋಪಾಲಕೃಷ್ಣ ಮೊಹಲ್ಲೆ (ಸಹ ಸಂಚಾಲಕ), ವಿನೋದಕುಮಾರ ಹೊನ್ನಾ, ಗಣೇಶಸಿಂಗ್ ತಿವಾರಿ, ರವಿ ಪಾಟೀಲ ಕೊಟಗ್ಯಾಳ, ಶೇಷರಾವ್ ಕೊರೆಕಲ್, ವೀರಶೆಟ್ಟಿ ಭದ್ರಪ್ಪನೋರ, ರಮೇಶ ಪಾಪಯ್ಯ ಹಾಗೂ ಮಲ್ಲಮ್ಮ ಸಂತಾಜಿ (ಸದಸ್ಯರು).ಸಾಂಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT